Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂಡ್ಯದಿಂದಾನೇ ಸುಮಲತಾ ಸ್ಪರ್ಧೆ, ಅಮ್ಮನಿಂದ ದೂರವಾಗೋಕೆ ಆಗುತ್ತಾ ಅಂದ್ರು ದರ್ಶನ್..!

---Advertisement---

ಮಂಗಳೂರು: ಮಂಡ್ಯ ಚುನಾವಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕುತೂಹಲದ ಸ್ಪಾಟ್ ಆಗಿದೆ. ದಳಪತಿಗಳು ಮಂಡ್ಯ ಬಿಡಲ್ಲ, ಸುಮಲತಾ ಕೂಡ ಕಾಂಪ್ರೂಮೈಸ್ ಆಗಲ್ಲ. ಹೀಗಾಗಿ ಮಂಡ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ನಡುವೆ ಸುಮಲತಾ ಮಂಡ್ಯದಿಂದಾನೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದು, ಬಿಜೆಪಿಯಿಂದ ಟಿಕೆಟ್ ಸಿಗುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಹೈವೋಲ್ಟೇಜ್ ಕಣವಾಗಿತ್ತು. ಆ ಸಂದರ್ಭದಲ್ಲಿ ದರ್ಶನ್ ಹಾಗೂ ಯಶ್ ಮಂಡ್ಯ ನೆಲಕ್ಕೆ ಎಂಟ್ರಿ ಕೊಟ್ಟಿದ್ದರು. ಸುಮಲತಾ ಅಮ್ಮನ ಪರವಾಗಿ ನಿಂತಿದ್ದರು. ಈ ಬಾರಿಯೂ ದರ್ಶನ್ ಹಾಗೂ ಯಶ್ ಬರ್ತಾರಾ ಪ್ರಚಾರಕ್ಕೆ ಎಂದು ಇತ್ತಿಚೆಗಷ್ಟೇ ಸುಮಲತಾ ಅವರನ್ನು ಕೇಳಿದ್ದಾಗ, ಕರೆಯುವುದು ಸರಿಯಲ್ಲ. ಬಂದರೆ ತುಂಬಾ ಖುಷಿ ಎಂದಿದ್ದರು. ಇದೀಗ ದರ್ಶನ್, ಈ ಬಾರಿಯೂ ಅಮ್ಮನ ಜೊತೆಗ ಇರ್ತೀನಿ, ಪ್ರಚಾರ ಮಾಡುತ್ತೀನಿ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ, ದರ್ಶನ ಪಡೆದ ಬಳಿಕ ಮಾತನಾಡಿದ ನಟ ದರ್ಶನ್, ಮಂಗಳೂರಿಗೆ ಸುಮಾರು ಸಲ ಬಂದಿದ್ದೇನೆ. ಆದರೆ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿರಲಿಲ್ಲ. ಹಾಗೇ ನೋಡಿಕೊಂಡು ಹೋಗೋಣಾ ಅಂತ ಬಂದೆ ಎಂದಿದ್ದಾರೆ. ಇದೇ ವೇಳೆ ಸುಮಲತಾ ಅವರ ಬೆಂಬಲದ ಬಗ್ಗೆ ಮಾತನಾಡಿ, ಅವರು ಅಮ್ಮ. ಅಮ್ಮನೆ. ನಾನು ಅವರೊಂದಿಗೇನೆ ಇರೋದು. ಬೇರೆ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಅಂದ್ರೆ ಅವರಿಂದ ದೂರವಾಗೋದಕ್ಕೆ ಆಗುತ್ತಾ..? ಕಳೆದ ಬಾರಿಯಂತೆ ಈ ಬಾರಿಯೂ ಅಮ್ಮನ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಹಾಗಾದ್ರೆ ಈ ಬಾರಿ ಮಂಡ್ಯ ರಣಕಣದಲ್ಲಿ ದಾಸನ ಹವಾ ಜೋರಾಗಿಯೇ ಇರಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...