ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ನ. 02 : ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಲು ದಿಕ್ಸೂಚಿಯಾಗಿದೆ ಎಂದು ತಳಕು ನಾಯಕನಹಟ್ಟಿ ಹೋಬಳಿಯ ಮಾಜಿ ಮಂಡಲ ಅಧ್ಯಕ್ಷರಾದ ರಾಮರೆಡ್ಡಿ ತಿಳಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ದಿವಾಳಿಯಾಗಿದೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಬರಗಾಲದ ಸಂದರ್ಭದಲ್ಲಿ ಜನರಿಗೆ ಯಾವುದೇ ಪರಿಹಾರ ಸಿಗದೆ ಜೀವನ ಕಷ್ಟವಾಗಿದೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಮೊನ್ನೆ ನಡೆದಂತಹ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಇಂದು ನಾಲ್ಕಕ್ಕೆ ನಾಲ್ಕನ್ನು ಕೂಡ ಎನ್ಡಿಎ ಅಭ್ಯರ್ಥಿಗಳು ಬಹಳ ಬಹುಮತದಿಂದ ಗೆದ್ದು, ಈ ಒಂದು ಗೆಲುವು ಮುಂದಿನ 28ರಲ್ಲಿ ನಮ್ಮ ಏನು ವಿಧಾನಸೌಧದಲ್ಲಿ 150 ಸೀಟು ಗೆಲ್ಲುವಂತಹ ಒಂದು ದಿಕ್ಕುಸೂಚಿಯನ್ನು ನಮಗೆ ಇವತ್ತೆಲ್ಲ ಕಾರ್ಯಕರ್ತರಿಗೆ ಒಂದು ಹುಮ್ಮಸ್ಸು ಕೊಟ್ಟಿದೆ ಎಂದು ತಿಳಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಬರುವಂತಹ ಸ್ಥಳೀಯ ಚುನಾವಣೆಗಳಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಇವೆಲ್ಲವೂ ಕೂಡ ನಮ್ಮ ಕಾರ್ಯಕರ್ತರು ಚುನಾವಣೆಗಳಾಗಿವೆ, ಇವುಗಳಲ್ಲಿ ಎಲ್ಲದರಲ್ಲೂ ಕೂಡ ನಾವು ಆ ಗೆಲುವನ್ನು ಸಾಧಿಸಿ ಅಧಿಕಾರ ನೀಡುವಂತಹ ಒಂದು ಅವಕಾಶ ಇವತ್ತು ಸಿಕ್ಕಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಇವತ್ತೆಲ್ಲ ದಿವಾಳಿಯಾಗಿದೆ. ಏನು ಕೆಲಸ ಆಗ್ತಾ ಇಲ್ಲ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿಬಿಟ್ಟಿದೆ ಯಾವ ಕೆಲಸ ಆಗ್ತಾ ಇಲ್ಲ. ಬರಗಾಲ ಬಂದಿದೆ ಯಾವುದೇ ಘೋಷಣೆ ಇಲ್ಲ. ಕುಡಿಯೋಕೆ ನೀರಿಲ್ಲ, ದನಕರುಗಳಿಗೆ ನೀರಿಲ್ಲ ಹಳ್ಳಿಗಳಲ್ಲಿ ಹೇಳೋರು ಕೇಳೋರು ಮೊದಲೇ ಇಲ್ಲ ಎಲ್ಲದರ ಬೆಲೆ ರೇಟ್ ಆಗಿ ಎಲ್ಲಾ ಸಾಮಾನ್ಯ ಜನರು ಬದುಕುವಂತದ್ದು ಕೂಡ ಕಷ್ಟ ಆಗಿದೆ ಎಂದು ದೂರಿದರು.
ಇವತ್ತು ಕಾಂಗ್ರೆಸ್ ಸರ್ಕಾರವನ್ನು ತಿರಸ್ಕಾರ ಮಾಡಿದರೆ ಜನಗಳು ಬುದ್ಧಿವಂತರು ಇವತ್ತು ಇಷ್ಟೆಲ್ಲ ಮಾಡಿದ್ದಾರೆ ಅಂದ್ರೆ ಮತ್ತೆ ಸಾಮಾನ್ಯ ಜನರು ಕೂಡ ಮುಂದಿನ ದಿನಗಳಲ್ಲಿ ನಮ್ಮ ಸ್ಥಳೀಯ ಸಂಸ್ಥೆಗಳು ಎಲ್ಲ ಕೂಡ ನಾವು ಮುಂದಿನ ದಿನಗಳಲ್ಲಿ ಬಿಜೆಪಿ ಎನ್ಡಿಎ ಒಂದು ಅಭ್ಯರ್ಥಿಗಳೆಲ್ಲ ಗೆಲುವು ಸಾಧಿಸಿ ಮತ್ತೆ ಮುಂದಿನ ಸರ್ಕಾರ ಒಳ್ಳೆ ಸುಸಂಬಂಧವಾಗಿ ನಡೆಸುವಂತಹ ಅವಕಾಶ ಜನರು ಮಾಡಿಕೊಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು










