ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 02 : ಜನಸಾಮಾನ್ಯರು ದಿನನಿತ್ಯವೂ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ. ಮಹಿಳಾ ಮೋರ್ಚಾದಿಂದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ನವೆಂಬರ್ 1 ರಿಂದ ಹಾಲಿನ ದರವನ್ನು ಪ್ರತಿ ಲೀ.ಗೆ ಎಂಟು ರೂ. ಹಾಗೂ ಮೊಸರನ್ನು ಹದಿನಾಲ್ಕು ರೂ.ಗಳಿಗೆ ಹೆಚ್ಚಿಸಿರುವ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಐದು ಉಚಿತ ಗ್ಯಾರೆಂಟಿಗಳ ಹೆಸರಿನಲ್ಲಿ ಬಡವರು, ಮಧ್ಯಮ ವರ್ಗದವರು, ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದ್ದಾರೆ. ಒಂದು ತಿಂಗಳಿನಲ್ಲಿ ಮೂರು ಬಾರಿ ವಿದ್ಯುತ್ ದರ ಹೆಚ್ಚಳವಾಗಿದೆ. ರೈತರನ್ನು ಪ್ರೋತ್ಸಾಹಿಸುವುದಾದರೆ ಬೆಂಬಲ ಬೆಲೆ ನೀಡಬೇಕೆ ವಿನಃ ಜನತೆ ಮೇಲೆ ಹೊರೆ ಹೇರಬಾರದು. ಪ್ರಯಾಣದಿಂದ ಪ್ರಮಾಣ ಪತ್ರದವರೆಗೂ ಹಾಗೂ ಹಾಲಿನಿಂದ ವಿದ್ಯುತ್ವರೆಗೆ ಬೆಲೆ ಜಾಸ್ತಿ ಮಾಡಿದೆ. ಇಪ್ಪತ್ತು, ಐವತ್ತು ರೂ.ಗಳಿಗೆ ಸಿಗುತ್ತಿದ್ದ ಛಾಪಾ ಕಾಗದದ ಬೆಲೆಯನ್ನು ನೂರು ರೂ.ಗಳಿಗೆ ಏರಿಸಿದೆ. ಮನೆ ಕಂದಾಯ, ನೀರಿನ ಕಂದಾಯವು ಹೆಚ್ಚಳವಾಗಿದೆ. ಈಗಾದರೆ ಬಡವರು ಬದುಕುವುದಾದರೆ ಹೇಗೆ? ಕೂಡಲೆ ಹಾಲಿನ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ಯಾದವ್ ಮಾತನಾಡಿ ಹಾಲು ಮೊಸರಿನ ಬೆಲೆ ಏರಿಸಿ ರೈತರು ಹಾಗೂ ಜನಸಾಮಾನ್ಯರನ್ನು ಬೀದಿಗೆ ತಂದಿರುವ ರಾಜ್ಯ ಸರ್ಕಾರ ಸ್ಟಾಂಪ್ ಡ್ಯೂಟಿಯನ್ನು ಜಾಸ್ತಿ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗೃಹ ಮಂತ್ರಿ ಪ್ರಿಯಾಂಕ ಖರ್ಗೆ ಬಿಜೆಪಿ. ಆರ್.ಎಸ್.ಎಸ್. ವಿರುದ್ದ ಹಗರುವಾಗಿ ಮಾತನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿರವರವರನ್ನು ಕೀಳಾಗಿ ಟೀಕಿಸುತ್ತಿರುವುದು ಅವರ ಘನತೆಗೆ ತಕ್ಕುದಲ್ಲ. ಬಿಜೆಪಿ. ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ರೈತ ಪರ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ನಿಂದ ಆಗುತ್ತಿಲ್ಲ. ಗೃಹಲಕ್ಷ್ಮಿ ಹಣ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿಲ್ಲ. ಯುವ ನಿಧಿ ಹಣ ಕೊಟ್ಟಿಲ್ಲ. ದಿವಾಳಿತನವನ್ನು ಸರಿದೂಗಿಸಲು ಹಾಲು ಮೊಸರಿನ ಬೆಲೆ ಏರಿಸಿರುವುದು ಯಾವು ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.?
ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಶಿವಪ್ರಕಾಶ್ ಮಾತನಾಡಿ ಗ್ಯಾರೆಂಟಿಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ. ರೈತರ ಹೆಸರಿನಲ್ಲಿ ಬಡವರು, ಮಧ್ಯಮ ವರ್ಗದವರನ್ನು ಸುಲಿಗೆ ಮಾಡುತ್ತಿದೆ. ಪೆಟ್ರೋಲ್ ಬೆಲೆ ಕೂಡ ಗಗನಕ್ಕೇರಿದೆ. ರಾಜ್ಯದಲ್ಲಿ ಅಭಿವೃದ್ದಿ ಶೂನ್ಯ. ಬೆಂಗಳೂರಿನ ಜನತೆಗೆ ಮೆಟ್ರೋ ಪ್ರಯಾಣ ದರ ಬಿಸಿ ಮುಟ್ಟಿಸಿದೆ. ಉಚಿತ ಗ್ಯಾರೆಂಟಿಗಳ ನೆಪದಲ್ಲಿ ಮಹಿಳೆಯರನ್ನು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಂಚಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೂಪ ವಿನಯ್ಕುಮಾರ್ ಮಾತನಾಡುತ್ತ ಹಾಲಿನ ಬೆಲೆಯನ್ನು ಪ್ರತಿ ಲೀ.ಗೆ ಎಂಟು ರೂ.ಗಳನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರ ರೈತರಿಗೆ ಏಳು ರೂ.ಗಳನ್ನು ನೀಡುತ್ತಿದೆ. ದಿನನಿತ್ಯವೂ ಬೆಳಿಗ್ಗೆ ಪ್ರತಿಯೊಂದು ಮನೆಗೂ ಅತ್ಯವಶ್ಯಕವಾಗಿ ಬೇಕಾಗಿರುವ ಹಾಲು ಮೊಸರಿನ ಬೆಲೆಯನ್ನು ಏರಿಸಿ ಕಡು ಬಡವರಿಗೆ ತೊಂದರೆ ಕೊಡುತ್ತಿದೆ. ಹುಟ್ಟಿನಿಂದ ಹಿಡಿದು ಮರಣದವರೆಗೂ ಸರ್ಟಿಫಿಕೇಟ್ಗಳನ್ನು ಪಡೆಯಲು ದರ ಜಾಸ್ತಿಯಾಗಿದೆ. ಬಡವರ ವಿರೋಧಿಯಾಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಮಾನ ಕೊಟ್ಟಿಲ್ಲ. ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟವನ್ನು ಉಗ್ರ
ರೂಪಕ್ಕೆ ಕೊಂಡೊಯ್ಯುವುದಾಗಿ ಎಚ್ಚರಿಸಿದರು.
ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರುಣ್, ಎಸ್ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಂ, ಪ್ರಧಾನ ಕಾರ್ಯದರ್ಶಿ ಚೇತನ್, ವಕ್ತಾರ ನಾಗರಾಜ್ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಜಿಲ್ಲಾ ಉಪಾಧ್ಯಕ್ಷೆ ಶೈಲಜಾರೆಡ್ಡಿ, ಕಾರ್ಯದರ್ಶಿ ರೇಖ, ನಗರ ಪ್ರಧಾನ ಕಾರ್ಯದರ್ಶಿ
ಬಸವೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಶಾಂತಮ್ಮ, ಮಂಜುಳಮ್ಮ, ಭಾರತಿ, ಬಸಮ್ಮ, ಚಂದ್ರಿಕಾ ಲೋಕನಾಥ್, ಸರಸ್ವತಿ, ವಿಜಯಲಕ್ಷ್ಮಿ, ವೀಣ, ಸರ್ವಮಂಗಳ, ಸುಮ, ರಜಿನಿ, ಕವನ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.











