ಚಿತ್ರದುರ್ಗ, ಆಗಸ್ಟ್. 30 : ಪರಮಪೂಜ್ಯ ಮಂತ್ರಾಲಯ ಪೀಠಾಧೀಶರ ಆದೇಶಾನುಸಾರವಾಗಿ, ಚಿತ್ರದುರ್ಗ ಶಾಖಾ ಶ್ರೀಮಠದ ವ್ಯವಸ್ಥಾಪಕರು, ಗೌರವ ವಿಚಾರಣಾಕರ್ತರ ನೇತೃತ್ವದಲ್ಲಿ ಹಾಗೂ ಶ್ರೀಮಠದ ಸಿಬ್ಬಂದಿಗಳ, ಸ್ವಯಂ ಸೇವಕರ, ಭಕ್ತಾದಿಗಳ ಸಹಕಾರದೊಂದಿಗೆ ಶ್ರೀಗುರುರಾಯರ 355ನೇ ಆರಾಧನಾ ಮಹೋತ್ಸವವು ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಶಾಖಾ ಮಠವಾದ ಚಿತ್ರದುರ್ಗದ ಶ್ರೀರಾಯರ ಮಠದಲ್ಲಿ ಇದೇ 2026ನೇ ಸಾಲಿನ ಆಗಸ್ಟ್ 29, 30 ಹಾಗೂ 31 ರಂದು ಅತ್ಯಂತ ವೈಭವದಿಂದ ನೆರವೇರುತ್ತಿದೆ.
ಆರಾಧನೆಯ ಎಲ್ಲಾ ದಿನಗಳಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀಮಠಕ್ಕೆ ಹರಿದು ಬರುತ್ತಿದ್ದಾರೆ.
ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಚಿತ್ರದುರ್ಗ ಜಿಲ್ಲಾ ಘಟಕ ಹಾಗೂ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಂಸ್ಥೆಗಳು ಜೊತೆಯಾಗಿ, ವ್ಯವಸ್ಥಿತ ಭಕ್ತಜನಸಮೂಹದ ನಿರ್ವಹಣಾ ವ್ಯವಸ್ಥೆ ಮತ್ತು ತುರ್ತು ಅಗತ್ಯದ ವೈದ್ಯಕೀಯ ವ್ಯವಸ್ಥೆಗಳ ಸೇವಾ ಕೈಂಕರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿವೆ.
ಈ ಸೇವಾ ಕೈಂಕರ್ಯಕ್ಕೆ ಚಿತ್ರದುರ್ಗ ಶಾಖಾ ಶ್ರೀಮಠದ ವ್ಯವಸ್ಥಾಪಕರಾದ ವಿದ್ವಾನ್ ಶ್ರೀ ಮುರಳಿ ಆಚಾರ್ಯ ಕುರಡಿಯವರು ಹಾಗೂ ಗೌರವ ವಿಚಾರಣಾಕರ್ತರಾದ ಶ್ರೀ ಗೋವಿಂದಮೂರ್ತಿ ಆಚಾರ್ಯರವರು, ಸಮಸ್ತ ಸಿಬ್ಬಂದಿಗಳು, ಸ್ವಯಂ ಸೇವಕರು ಹಾಗೂ ಭಕ್ತಾದಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ.
ಹಾಗೆಯೇ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಚಿತ್ರದುರ್ಗ ಜಿಲ್ಲಾ ಘಟಕ ಹಾಗೂ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಚಿತ್ರದುರ್ಗ ವತಿಯಿಂದ ಸಂಪೂರ್ಣ ಸಹಕಾರ ಲಭಿಸಿದ್ದು, ಶ್ರೀಗುರುರಾಯರ 355ನೇ ಆರಾಧನಾ ಮಹೋತ್ಸವದಲ್ಲಿ ಸಮೂಹ ನಿರ್ವಹಣಾ ಹಾಗೂ ವೈದ್ಯಕೀಯ ಪ್ರತಿಸ್ಪಂದನಾ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಶ್ರೀಗುರುರಾಯರ ಸೇವಾ ಕೈಂಕರ್ಯದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರಾದ ರೋ. ಶಶಿಧರ್ ರಾವ್ ಹಾಗೂ ಕಾರ್ಯದರ್ಶಿಗಳಾದ ರೋ. ಮಂಜುನಾಥ್ ಭಾಗ್ವತ್ ತಿಳಿಸಿದ್ದಾರೆ.
ಸಮೂಹ ನಿರ್ವಹಣಾ ವ್ಯವಸ್ಥೆ ಹಾಗೂ ವೈದ್ಯಕೀಯ ಪ್ರತಿಸ್ಪಂದನಾ ವ್ಯವಸ್ಥೆಗಳು ಅತ್ಯಂತ ಅವಶ್ಯಕವಾಗಿದ್ದು, ವ್ಯವಸ್ಥೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದ್ದು ಅತ್ಯಂತ ಯಶಸ್ವಿಯಾಗಿ ನೆರವೇರುತ್ತಿದೆ. ಈ ವ್ಯವಸ್ಥೆಗಳನ್ನು ಕಲ್ಪಿಸಿದ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರಾದ ರೋ. ಶಶಿಧರ್ ರಾವ್, ಕಾರ್ಯದರ್ಶಿಗಳಾದ ರೋ. ಮಂಜುನಾಥ್ ಭಾಗ್ವತ್ ಹಾಗೂ ಸರ್ವ ಸದಸ್ಯರಿಗೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಚಿತ್ರದುರ್ಗ ಜಿಲ್ಲಾ ಘಟಕ ಹಾಗೂ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಚಿತ್ರದುರ್ಗ ಈ ಸಂಸ್ಥೆಗಳ ಎಲ್ಲಾ ಪ್ರಮುಖರುಗಳು ಮತ್ತು ಭಾಗವಹಿಸಿದ ಎಲ್ಲರಿಗೂ ಶ್ರೀಗುರುರಾಯರು ಶ್ರೇಯೋಭಿವೃದ್ಧಿಯನ್ನು ಅನುಗ್ರಹಿಸಲಿ ಎಂದು ಶಾಖಾ ಶ್ರೀಮಠದ ವ್ಯವಸ್ಥಾಪಕರಾದ ವಿದ್ವಾನ್ ಶ್ರೀ ಮುರಳಿ ಆಚಾರ್ಯ ಕುರಡಿಯವರು ಶ್ರೀಮದ್ ರಾಘವೇಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.


















