ಚಿತ್ರದುರ್ಗ (ಫೆ.25) : ಚಿತ್ರದುರ್ಗ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಫೆ. 26 ರ ಭಾನುವಾರದಿಂದ ಹುಲಿಗಳು ಹಾಗೂ ಅಪರೂಪದ ವಿಶೇಷ ಪಕ್ಷಿಗಳು ಸಾರ್ವಜನಿಕರ ವೀಕ್ಷಣೆಗೆ ಸಿಗಲಿವೆ.

ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಹುಲಿ ಆವರಣ ಹಾಗೂ ಪಕ್ಷಿಗಳ ಮನೆ ನಿರ್ಮಾಣ ಮಾಡಲಾಗಿದ್ದು, ಈ ಆವರಣದಲ್ಲಿ ಭಾನುವಾರದಿಂದ ವಿಶೇಷ ಪಕ್ಷಿಗಳು ಮತ್ತು ಹುಲಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದ್ದು, ಮೊದಲ ಹಂತದಲ್ಲಿ ಎರಡು ಹುಲಿಗಳನ್ನು ಕಿರು ಮೃಗಾಲಯಕ್ಕೆ ತರಲಾಗಿದೆ.

ಸಾರ್ವಜನಿಕರು, ಪ್ರಾಣಿ ಪಕ್ಷಿ ಪ್ರಿಯರು ಕಿರು ಮೃಗಾಲಯಲಯಕ್ಕೆ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಭೇಟಿ ನೀಡಿ, ಹುಲಿಗಳು ಹಾಗೂ ವಿಶೇಷ ಅಪರೂಪದ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ ಎಂದು ಉಪ ಆರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಆಡುಮಲ್ಲೇಶ್ವರ ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಟಿ. ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


