Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ; ಚಿತ್ರದುರ್ಗ ಜಿಲ್ಲೆಯಲ್ಲಿ 44073  ಮತದಾರರು ಅ.23 ರಂದು ಮತದಾನ

---Advertisement---

ಚಿತ್ರದುರ್ಗ. ಅ.13: ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ-2026ಕ್ಕೆ ಇದೇ ತಿಂಗಳ ಅಕ್ಟೋಬರ್ 23 ರಂದು ಮತದಾನ ಜರುಗಲಿದೆ. ಜಿಲ್ಲೆಯಲ್ಲಿ 44,073 ಮತದಾರರು ಇದ್ದು, ಒಟ್ಟು 55 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
2025 ಡಿಸೆಂಬರ್ ಅಂತ್ಯಕ್ಕೆ ಪದವೀಧರ ಕ್ಷೇತ್ರದ ಮತಪಟ್ಟಿಯಲ್ಲಿ 41,358 ಪದವಿಧರ ಮತದಾರರಿದ್ದರು, ಸದ್ಯ 2715 ಪದವೀಧರ ಮತದಾರರ ಸೇರ್ಪಡೆಯಾಗಿದ್ದು, ಈ ಹಿಂದಿನ ಯಾವುದೇ ಮತದಾರರ ಹೆಸರುಗಳನ್ನು ತೆಗೆದು ಹಾಕಿಲ್ಲ. 25,551 ಪುರುಷ ಹಾಗೂ 18,522 ಮಹಿಳೆಯರು ಸೇರಿ ಒಟ್ಟು 44,073 ಪದವೀಧರ ಮತದಾರ ಅಂತಿಮ ಪಟ್ಟಿಯಲ್ಲಿದ್ದು, ಇವರು ಮಾತ್ರ ಮತಚಲಾಯಿಸಲು ಅರ್ಹರಾಗಿರುತ್ತಾರೆ. ಈ ಹಿಂದಿನ 2022ರ ಚುನಾವಣೆಯಲ್ಲಿದ್ದ 22 ಮತಗಟ್ಟೆಗಳೊಂದಿಗೆ, ಈ ಬಾರಿ 33 ಹೆಚ್ಚುವರಿ ಮತಗಟ್ಟೆಗಳನ್ನು ಸೇರಿಸಿ ಒಟ್ಟು ಮತಗಟ್ಟೆಗಳ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ.

ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಒಟ್ಟು 350 ಜನ ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಇವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ.  70 ಮತಗಟ್ಟೆ ಅಧಿಕಾರಿ, 70 ಸಹಾಯಕ ಮತಗಟ್ಟೆ ಅಧಿಕಾಗಳು, ಇದರೊಂದಿಗೆ ಎರಡು ಹಾಗೂ ಮೂರನೇ ಮತಗಟ್ಟೆ ಅಧಿಕಾರಿಗಳಾಗಿ ತಲಾ 70, ಸೂಕ್ಷ ವೀಕ್ಷಕರಾಗಿ 68 ಹಾಗೂ 2 ಮಾಸ್ಟರ್ ಟ್ರೈನರ್‍ಗಳು ಮತದಾನ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಹೇಳಿದರು.

ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು:
ಅಕ್ಟೋಬರ್ 6 ರಂದು ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದ್ದು,  ಪರಿಶೀಲನೆ ನಂತರ ಒಟ್ಟು 10 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಶಿ ಹುಲಿಕುಂಟೆ ಮಠ್, ಭಾರತೀಯ ಜನತಾ ಪಕ್ಷದಿಂದ ಕೆ.ಎಂ.ಸುರೇಶ(ಸೋಮೇಶ್ವರ), ಸರ್ವ ಜನತಾ ಪಕ್ಷದಿಂದ ಜಿ.ಸಿ.ಪಾಟೀಲ್ ಅಭ್ಯರ್ಥಿಗಳಾಗಿದ್ದರೆ, ಪಕ್ಷೇತರರಾಗಿ ಕಪನಿ ಗೌಡ, ಚಿಕ್ಕರಾಜು ಎಸ್ ಯಾದವ್, ಲಕ್ಷ್ಮಯ್ಯ.ಆರ್, ಲಕ್ಷ್ಮಿಕಾಂತ್ ಎಸ್  ಯಾದವ್, ಶಶಿ ಹುಲಿಕಟ್ಟೆ, ಸೈಯದ್ ಅಕ್ಫಾ ಅಹಮದ್, ಅಡ್ವಕೇಟ್ ಬರೀದ್ ಸ್ಪರ್ಧಿಸಿದ್ದಾರೆ.
ಮತದಾನವು ಬ್ಯಾಲೆಟ್ ಪೇಪರ್ ಮೇಲೆ ನಡೆಯಲಿದ್ದು, ಮತದಾರು ಪ್ರಾಶಸ್ತ್ಯ ಆಧಾರದಲ್ಲಿ ಮತಚಲಾಯಿಸಬೇಕು. ಮತದಾನ ಮಾಡುವ ಕುರಿತು ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮಾದರಿ ವೀಡಿಯೊ ಸಿದ್ದಪಡಿಸಿ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದಾಗಿ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದರು.

ಈಗಾಗಲೇ ಭಾವಚಿತ್ರ ರಹಿತ ಅಂತಿಮ ಮತದಾರ ಪಟ್ಟಿ ವೆಬ್ ಸೈಟ್‍ನಲ್ಲಿ ಲಭ್ಯವಿದ್ದು, ಪದವಿಧರ ಮತದಾರರು  https://ceo.karnataka.gov.in/393/election-rolls-of-graduates-and-teachers-constituencies–2026/en  ಪರಿಶೀಲಿಸಿಕೊಳ್ಳಬಹುದು. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಸಂದೇಹಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಹೇಳಿದರು.

ಎಸ್.ಐ.ಆರ್: ಮತದಾರರ ಪರಿಶೀಲನೆ ಕಾರ್ಯ ಪೂರ್ಣ
ಪತ್ರಿಕಾಗೋಷ್ಠಿ ತರುವಾಯ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರು ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು. ವಿಶೇಷ ಮತಪಟ್ಟಿ ಪರಿಷ್ಕರಣೆ ಅಂಗವಾಗಿ ಅನರ್ಹರೆಂದು ಗುರುತಿಸಲಾಗಿದ್ದ ಮತದಾರರ ವಿಚಾರಣೆ ಕಾರ್ಯ ಪ್ರಗತಿಯಲ್ಲಿದ್ದು, ಮಂಗಳಾವರ 250 ಮತದಾರ ವಿಚಾರಣೆ ಪೂರ್ಣಗೊಂಡರೆ, ನೋಟಿಸ್ ನೀಡಿದ ಎಲ್ಲ 2,372 ಮತದಾರರ ವಿಚಾರಣೆ ಪೂರ್ಣಗೊಳ್ಳಿದೆ. ಶೀಘ್ರದಲ್ಲೇ ಅಂತಿಮ ಆದೇಶ ನೀಡಲಾಗುವುದು. ಜಿಲ್ಲೆಯಲ್ಲಿ ಫಾರಂ 7 ಅರ್ಜಿಗಳ ಆಧಾರದಲ್ಲಿ ಯಾವುದೇ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಬಿ.ಎಲ್.ಓ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿ, ಅರ್ಹರಾದ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡದಿರುವುದಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.

ಜಿಲ್ಲೆಯಲ್ಲೇ ಅತಿ ಹೆಚ್ಚು ಪದವೀಧರ ಮತದಾರರು:
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 1.78 ಲಕ್ಷ ಪದವೀಧರ ಮತದಾರರು ಇದ್ದರೆ, ಈ ಪೈಕಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 44,073  ಮತದಾರರು ಇದ್ದು, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಿದೆ. ಈ ಹಿನ್ನಲೆಯಲ್ಲಿಯೇ 22 ಮೂಲ ಸೇರಿ 33 ಹೆಚ್ಚುವರಿ ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ-2026 ಸಂಬಂಧಿಸಿದ ಭಾಚಿತ್ರಗಳು ಇರುವ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚುನಾವಣೆ ತಹಶೀಲ್ದಾರ್ ಫಾತೀಮ ಬಿಬಿ, ಕಾಂಗ್ರೇಸ್ ಪಕ್ಷದ ಡಿ.ಎನ್.ಮೈಲಾರಪ್ಪ, ಜೆ.ಡಿ.ಎಸ್ ಪಕ್ಷದ ಗೋಪಾಲಸ್ವಾಮಿ ನಾಯಕ, ಆಪ್ ಪಕ್ಷದ ರಾಮಪ್ಪ ಸೇರಿದಂತೆ ಮತ್ತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now