ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 13 : ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಪ್ರಸಿದ್ದ ಉದ್ಯಮಿ ಪಟೇಲ್ ಮರಿಸಿದ್ದನಗೌಡ ಸಿದ್ದಪ್ಪ(77) ಮಂಗಳವಾರ ಮಧ್ಯಾಹ್ನ 2-14 ಕ್ಕೆ ಮೊಳಕಾಲ್ಮುರು ತಾಲ್ಲೂಕಿನ ಕಣಕುಪ್ಪೆ ಗ್ರಾಮದಲ್ಲಿರುವ ಫಾರಂ ಹೌಸ್‍ನಲ್ಲಿ ನಿಧನರಾದರು.
ಮೃತರು ಪತ್ನಿ, ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ನ್ಯಾಯವಾದಿ ಜಿ.ಎಸ್.ಕುಮಾರ್‍ಗೌಡ ಸೇರಿದಂತೆ ಐವರು ಪುತ್ರರು, ಸೊಸೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ
ಹಿರಿಯ ಶ್ರೇಣಿ ನ್ಯಾಯಾಧೀಶೆ ದೀಪ ಕುಮಾರ್‍ಗೌಡ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಕಣಕುಪ್ಪೆ ಗ್ರಾಮದ ಫಾರಂ ಹೌಸ್‍ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.









