Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆನಂತಕುಮಾರ್ ಹೆಗಡೆ ವಿರುದ್ಧ ಸೋಮೋಟೋ ಪ್ರಕರಣ ದಾಖಲಿಸಿ, ಕೊಡಲೇ ಬಂಧಿಸಿ : ರಾಮಪ್ಪ ನೇರ್ಲಗುಂಟೆ ಆಗ್ರಹ

---Advertisement---

 

 

ಸುದ್ದಿಒನ್, ಚಿತ್ರದುರ್ಗ ಜ. 16 : ರಾಜ್ಯದ ಮುಖ್ಯಮಂತ್ರಿಗಳನ್ನು ಏಕ ವಚನದಲ್ಲಿ ಸಂಭೋದನೆ ಮಾಡಿರುವ ಸಂಸದ ಆನಂತಕುಮಾರ್ ಹೆಗಡೆಯವರ ಮೇಲೆ ಸೋಮೋಟೋ ಪ್ರಕರಣವನ್ನು ದಾಖಲಿಸಿ ಅವರನ್ನು ಕೊಡಲೇ ಬಂಧಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಪ್ಪ ನೇರ್ಲಗುಂಟೆ ಆಗ್ರಹಿಸಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಜ್ಜನ ರಾಜಕಾರಣಿ, ಮುತ್ಸದಿ, ಭಾಗ್ಯಗಳ ಸರದಾರ ದಾಸೋಹಿಗಳು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಸಂಸದನಾದವನು ಏಕವಚನದಲ್ಲಿ ಸಂಭೋದನೆ ಮಾಡಿರುವುದು ಆತನ ಮನಸ್ಥಿತಿಯನ್ನು ತೋರಿಸುತ್ತದೆ. ನಾಲ್ಕು ವರ್ಷ ಅನಂತಕುಮಾರ್ ಹೆಗ್ಡೆ ಯಾವ ಮೂಲೆಯಲ್ಲಿದ್ದ ಸಿಎಂ, ಡಿಸಿಎಂ, ಬಗ್ಗೆ ಮಾತಾಡುವಾಗ ಎಚ್ಚರವಿರಲಿ  ಅನಂತ್ ಕುಮಾರ್ ಹೆಗಡೆಗೆ ಬುದ್ದಿ ಭ್ರಮಣೆಯಾಗಿದೆ ಶಾಂತಿ ಕದಡುವ ಕೆಲಸ ಮಾಡ್ತಿದ್ದಾರೆ ಅನಂತ್‍ಕುಮಾರ್ ಹೆಗಡೆ ಸಭ್ಯತೆ ಮೈಗೂಡಿಸಿಕೊಳ್ಳಬೇಕು ಕೀಳು ಮಟ್ಟದ ರಾಜಕಾರಣವನ್ನು ಪ್ರದರ್ಶನ ಮಾಡಿದ್ದಾರೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಎಲ್ಲರನ್ನು ಗೌರವಿಸುವ ವ್ಯಕ್ತಿಯಾಗಿದ್ದಾರೆ, ಅನುಭವ, ಆಡಳಿತಾತ್ಮಕ ಅನುಭವ ಅಪಾರವಾಗಿದೆ ಇಂತಹ ವ್ಯಕ್ತಿಯಾದ ಮುಖ್ಯಮಂತ್ರಿಗಳನ್ನು ಏಕ ವಚನದಲ್ಲಿ ಸಂಬೋಧನೆ ಮಾಡಿರುವ ಸಂಸದ ಆನಂತಕುಮಾರ್ ಹೆಗಡೆಯವರ ಮೇಲೆ ಸೋಮೋಟೋ ಪ್ರಕರಣವನ್ನು ದಾಖಲಿಸಿ ಅವರನ್ನು ಕೊಡಲೇ ಬಂಧಿಸುವಂತೆ ರಾಮಪ್ಪ ಆಗ್ರಹಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment