Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರಲ್ಲಿ ಬೆಚ್ಚಿಬೀಳಿಸಿದ ಕೊಲೆ ; ಪತ್ನಿಯನ್ನ ಕೊಂದು ಸೂಟ್ ಕೇಸ್ ಗೆ ತುಂಬಿದ ಗಂಡ..!

---Advertisement---

ಬೆಂಗಳೂರು; ಇತ್ತೀಚೆಗಂತೂ ಕೊಲೆ ಕೇಸದ ಗಳನ್ನೇ ಹೆಚ್ಚಾಗಿ‌ಕೇಳ್ತಾ ಇದ್ದೀವಿ. ಅದರಲ್ಲೂಈ ರೀತಿಯ ಕೊಲೆಗಳು ಕೂಡ ಜಾಸ್ತಿ ಆಗ್ತಾ ಇದಾವೆ. ಇಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದ ಕೊಲೆಯೊಂದು ಭಯ ಹುಟ್ಟಿಸಿದೆ. ಗಂಡನೇ ಹೆಂಡತಿಯ ದೇಹವನ್ನು ಕತ್ತರಿಸಿ, ಸೂಟ್ ಕೇಸ್ ನಲ್ಲಿ ಪ್ಯಾಕ್ ಮಾಡಿದ್ದಂತ ಘಟನೆ ಹುಳಿಮಾವು ಸಮೀಪದ ಕಮ್ಮನಹಳ್ಳಿಯಲ್ಲಿ ನಡೆದಿದೆ.

ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ಮೂಲತಃ ಮಹಾರಾಷ್ಟ್ರದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಗಂಡ ಹೆಂಡತಿ ಇಬ್ಬರಿಗೂ ವರ್ಕ್ ಫ್ರಮ್ ಹೋಂ ಇತ್ತಂತೆ. ಹೀಗೆ ಯಾವುದೋ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತುಗಳು ಅತಿರೇಕಕ್ಕೆ ಹೋಗಿ, ಗಂಡ ರಾಕೇಶ್ ತನ್ನ ಹೆಂಡತಿ ಗೌರಿಯನ್ನು ಕೊಂದಿದ್ದಾನೆ. ಅದರಲ್ಲೂ ಪೀಸ್ ಪೀಸ್ ಮಾಡಿ, ಸೂಟ್ ಕೇಸ್ ಗೆ ತುಂಬಿದ್ದಾನೆ‌. ಅಂದ್ರೆ ಅರ್ಥ ಮಾಡಿಕೊಳ್ಳಿ ಈ ಜಗಳ ಎಷ್ಟು ದೊಡ್ಡ ಮಟ್ಟಕ್ಕೆ ಹೋಗಿದೆ ಎಂಬುದನ್ನು. ಬಳಿಕ ಗೌರಿಯ ಪೋಷಕರಿಗೆ ಕರೆ ಮಾಡಿ, ತಾನೂ ಮಾಡಿರುವ ಘನಂದಾರಿ ಕೆಲಸವನ್ನ ತಿಳಿಸಿದ್ದಾನೆ. ಗೌರಿ ಮನೆಯವರು ಆತಂಕಗೊಂಡು, ತಕ್ಷಣ ಮಹಾರಾಷ್ಟ್ರ ಪೊಲೀಸರ ಮೊರೆ ಹೋಗಿದ್ದಾರೆ.

ಪೊಲೀಸರಿಗೆ ತಮ್ಮ ಅಳಿಯ ಹೇಳಿದ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರು ತಕ್ಷಣವೇ ಬೆಂಗಳೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬೆಂಗಳೂರಿನ ಹುಳಿಮಾವು ಪೊಲೀಸರು ಅಲರ್ಟ್ ಆಗಿದ್ದು, ದೊಡ್ಡಕಮ್ಮನಹಳ್ಳಿಯ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಡಿಸಿಪಿ ಸಾರಾ ಫಾತಿಮಾ ಅವರ ತಂಡ ಘಟನೆಯ ತನಿಖೆಯನ್ನು ಕೈಗೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment