Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರಾಜ್ ಕುಂದ್ರಾ – ಶಿಲ್ಪಾ ಶೆಟ್ಟಿ ಡಿವೋರ್ಸ್ ತಗೋಳ್ತಾ ಇದ್ದಾರಾ..? : ಮಧ್ಯರಾತ್ರಿ ಮಾಡಿದ ಟ್ವೀಟ್ ಹಿಂದಿನ ಕಥೆ ಏನು..?

---Advertisement---

 

ರಾಜ್ ಕುಂದ್ರಾ 2021ರಲ್ಲಿ ಅಶ್ಲೀಲ ಚಿತ್ರ ನಿರ್ಮಾಣ ಮಾಡಿ, ಜೈಲು ಪಾಲಾಗಿದ್ದರು. ಆದರೆ ಆ ಸಮಯದಲ್ಲಿ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾರನ್ನು ಬಿಡಿಸಿಕೊಂಡು ಬರಲು ಸಾಕಷ್ಟು ಕಷ್ಟಪಟ್ಟಿದ್ದರು. ಅಷ್ಟೇ ಅಲ್ಲ ಸಾಕಷ್ಟು ನಿಂದನೆಗೆ ಒಳಗಾಗಿದ್ದರು. ಎಷ್ಟೇ ನೋವಾದರೂ, ಮನಸ್ಸನ್ನು ಗಟ್ಟಿ ಮಾಡಿಕೊಂಡು, ಸವಾಲನ್ನು ಎದುರಿಸಿ ರಾಜ್ ಕುಂದ್ರಾರನ್ನು ಹೊರಗೆ ಕರೆದುಕೊಂಡು ಬಂದರು.

ಸ್ವಲ್ಪ ದಿನಗಳ ಕಾಲ ರಾಜ್ ಕುಂದ್ರಾ ಅಷ್ಟಾಗಿ ಎಲ್ಲಿಯೂ ಕಾಣಿಸಿರಲಿಲ್ಲ. ಆದರೆ ಆಮೇಲೆ ಇಬ್ಬರು ಮೊದಲಿನಂತೆ ಸಂತಸದಿಂದ ಇದ್ದರು. ಇದು ಸೋಷಿಯಲ್ ಮೀಡಿಯಾದಲ್ಲೂ ರಾರಾಜಿಸುತ್ತಾ ಇತ್ತು. ಆದರೆ ಇದೀಗ ಇದ್ದಕ್ಕಿದ್ದ ಹಾಗೇ ರಾಜ್ ಕುಂದ್ರಾ ಅವರ ಅಕೌಂಟ್ ನಿಂದ ಪೋಸ್ಟ್ ಒಂದನ್ನು ಹಾಕಲಾಗಿದೆ. ‘ನಾವೂ ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ದಯವಿಟ್ಟು ನಮಗೆ ಸಮಯ ನೀಡಿ’ ಎಂದು ಪೋಸ್ಟ್ ಹಾಕಿದ್ದಾರೆ.

ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗಿದೆ. ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಡಿವೋರ್ಸ್ ಆಯ್ತಾ ಎಂಬ ಚರ್ಚೆಗಳು ಶುರುವಾಗಿದೆ. ಆದರೆ ಈ ರೀತಿಯಾದಂತ ಪೋಸ್ಟ್ ಗೆ ಶಿಲ್ಪಾ ಶೆಟ್ಟಿ ಕಡೆಯಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ ರಾಜ್ ಕುಂದ್ರಾ ಅವರ ಪೋಸ್ಟ್ ಗೆ ತರಹೇವಾರಿ ಕಮೆಂಟ್ ಗಳು ಬರುತ್ತಿವೆ. ಮಧ್ಯರಾತ್ರಿ ಮಾಡಿರುವ ಪೋಸ್ಟ್ ಅಲ್ವಾ, ಕುಡಿದ ಮತ್ತಿನಲ್ಲಿ ಮಾಡಿರಬಹುದು ಎಂದೇ ಕಮೆಂಟ್ ಹಾಕುತ್ತಿದ್ದಾರೆ.

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಸಂಸಾರ ಸರಿಯಾಗಿಯೆ ಇದೆ. ಇಬ್ಬರು ಮಕ್ಕಳೊಂದಿಗೆ ಹಾಯಾಗಿ ಬದುಕುತ್ತಿದ್ದಾರೆ. ಆದರೆ ಇಂಥದ್ದೊಂದು ಪೋಸ್ಟ್ ಸಂಸಾರದಲ್ಲಿ ಬಿರುಗಾಳಿ ಎದ್ದಿರಬಹುದಾ ಎಂಬ ಪ್ರಶ್ನೆ ಹುಟ್ಟುಹಾಕಿದರೆ, ಅಕೌಂಟ್ ಹ್ಯಾಕ್ ಏನಾದರೂ ಆಗಿದೆಯಾ ಎಂಬ ಅನುಮಾನವನ್ನು ಮೂಡಿಸುತ್ತಿದೆ. ಆದರೆ ಈಗ ಶಿಲ್ಪಾ ಶೆಟ್ಟಿಯೇ ಇದಕ್ಕೊಂದು ಉತ್ತರ ಕೊಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...