Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಿರುಪತಿ ತಿಮ್ಮಪ್ಪನ ಮೊರೆ ಹೋದ ಶಾರುಖ್ ಖಾನ್ : ಕಾರಣ ಏನು ಗೊತ್ತಾ..?

---Advertisement---

ತಿರುಪತಿ ತಿಮ್ಮಪ್ಪನನ್ನು ನಂಬಿಕೊಂಡರೆ ಎಲ್ಲವೂ ಸಕ್ಸಸ್ ಆಗುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಚಂದ್ರಯಾನ 3 ಉಡಾವಣೆಯ ವೇಳೆಯೂ ತಿರುಪತಿ‌ ತಿಮ್ಮಪ್ಪನಿಗೆ ವಿಶೇಷ ಪೂಜೆ ಮಾಡಿಸಿದ್ದರು. ಅದು ಯಶಸ್ಸು ಕೂಡ ಆಯ್ತು. ಇದೀಗ ಶಾರುಖ್ ಖಾನ್ ಕೂಡ ಸಕ್ಸಸ್ ಗಾಗಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಜವಾನ್ ಸಿನಿಮಾದ ಯಶಸ್ಸಿಗಾಗಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.

ಸೆಪ್ಟೆಂಬರ್7 ರಂದು ಜವಾನ್ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶಾರುಖ್ ಖಾನ್ ಮತ್ತು ತಂಡ, ತಿಮ್ಮಪ್ಪನ ದರ್ಶನವನ್ನು ಪಡೆದಿದ್ದಾರೆ. ನಟ ಶಾರುಖ್ ಖಾನ್, ಸುಹಾನ್ ಖಾನ್, ನಟಿ ನಯನಾ ತಾರಾ ದಂಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ್ದು, ಸಿನಿಮಾ ಗೆಲುವಿಗಾಗಿ ಬೇಡಿಕೊಂಡಿದ್ದಾರೆ.

ಜವಾನ್ ಸಿನಿಮಾ ಸಾಕಷ್ಟು ಭರವಸೆ ಹುಟ್ಟುಹಾಕಿದೆ. ಪಠಾಣ್ ಬಳಿಕ ಶಾರುಖ್ ಖಾನ್ ಗೆ ಸಕ್ಸಸ್ ತಂದುಕೊಡಲಿರುವ ಸಿನಿಮಾ ಎಂದೇ ಹೇಳಲಾಗುತ್ತಿದೆ. ಇತ್ತಿಚೆಗೆ ಸಿನಿಮಾ ಪ್ರಚಾರದ ವೇಳೆ ಶಾರುಖ್ ಖಾನ್ ನಡೆದುಕೊಂಡ ರೀತಿಯೂ ವೈರಲ್ ಆಗಿತ್ತು. ನಿರ್ದೇಶಕ ಅಟ್ಲು ಅವರ ತಾಯಿ ವೇದಿಕೆ ಮೇಲೆ ಬಂದಾಗ, ಅವರ ಕಾಲು ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದರು. ಬಳಿಕ ನಟಿ ನಯನತಾರಾ ಕೂಡ ಆಶೀರ್ವಾದ ಪಡೆದಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...