ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 29 : ಆಧುನಿಕ ಭಾರತದ ಯುವಸಮೂಹಕ್ಕೆ ಸೇವಾ ಮನೋಭಾವದ ಜಾಗೃತಿ ಮೂಡಿಸಬೇಕು. ಮನುಷ್ಯ ಅತಿ ಬುದ್ಧಿವಂತನಾದಷ್ಟು ದುರ್ಬಲನಾಗುತ್ತಾನೆ. ಓದುವುದು ದೊಡ್ಡದಲ್ಲ, ಓದಿದ ನಂತರ ಅವನು ಮೈಗೂಡಿಸಿಕೊಂಡ ಮನಸ್ಥಿತಿ ಆಶಾದಾಯಕವಾಗಿರಬೇಕು. ಆಸಕ್ತಿ ಇದ್ದಾಗ ಮಾತ್ರ ಸಾರ್ಥಕ ಬದುಕಿಗೊಂದು ಅರ್ಥ ಸಿಗುತ್ತದೆ. ಸೇವೆ ಎಂಬುದು ಶ್ರೇಷ್ಟ ಮಾನವೀಯ ಮೌಲ್ಯವಾಗಿದೆ ಎಂದು ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ಅಭಿಪ್ರಾಯಪಟ್ಟರು.

ಚಿತ್ರದುರ್ಗದ ಪಿಳ್ಳೇಕೆರೆನಹಳ್ಳಿಯ ಕೆ.ಎಂ.ಎಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಾಯ್‍ಕಲ್ ಗ್ರಾಮದ ಯಶೋಧರಮ್ಮ ಬೋರಪ್ಪ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆಯ ಒಲವು ಮತ್ತು ಬದ್ಧತೆ ಕುರಿತು ಉಪನ್ಯಾಸ ನೀಡಿದರು.
ಸ್ವಾರ್ಥದ ಬದುಕು ಅಧೋಗತಿಗೆ ತಳ್ಳುತ್ತದೆ. ವಿದ್ಯಾರ್ಥಿಗಳು ಪರೋಪಕಾರಂ ಮಿದಂ ಶರೀರಂ ಹಾಗೂ ಶ್ರಮಯೇವ ಜಯತೆ ಎಂಬ ಘೋಷವಾಕ್ಯದೊಂದಿಗೆ ನಿಸ್ವಾರ್ಥತೆಯನ್ನು ಅನುಸರಿಸಬೇಕು. ಓದಿದವರು ಕಸಬರಿಗೆ ಹಿಡಿದು ಸ್ವಚ್ಛ ಮಾಡಲು ಹಿಂಜರಿಯುತ್ತಾರೆ. ನೆಲದ ಸಂಸ್ಕøತಿ ಮರೆತು ಐಶಾರಾಮಿ ಜೀವನಕ್ಕೆ ಮನಸೋಲುತ್ತಾರೆ. ಇದರಿಂದ ಆರೋಗ್ಯ ಹದಗೆಟ್ಟು ಬಿಪಿ, ಶುಗರ್ರು, ಥೈರಾಯ್ಡ್‍ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಾರೆ. ನಗರ ಪಟ್ಟಣದ ವಿದ್ಯಾರ್ಥಿಗಳನ್ನು ಹಳ್ಳಿ ಪರಿಸರಕ್ಕೆ ತರುವ ಉದ್ದೇಶ ಗ್ರಾಮೀಣ ಮಟ್ಟದ ಜೀವನ ಆರೋಗ್ಯಕರ ಜೀವನ ಮತ್ತು ಸಂಸ್ಕøತಿ ಎಂದು ತಿಳಿಸಲಾಗುತ್ತದೆ. ಹಳ್ಳಿಗಳಲ್ಲಿನ ಆಚಾರ ವಿಚಾರಗಳನ್ನು ಅರಿತಾಗ ಮಾತ್ರ ಆರೋಗ್ಯಕರ ಬದುಕು ನಡೆಸಬಹುದು ಎಂದರು.
ಹಿರಿಯ ಸಾಹಿತಿ ಹುರುಳಿ.ಎಂ.ಬಸವರಾಜ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಐಕ್ಯತಾ ಭಾವನೆ ಮೂಡಿಸುತ್ತದೆ. ಮನಃಸ್ಪೂರ್ತಿಯಿಂದ ಮಾಡಿದ ಕೆಲಸ ನೆಮ್ಮದಿಯನ್ನು ನೀಡುತ್ತದೆ. ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಈ ಮೂಲಕ ಉನ್ನತ ವ್ಯಾಸಂಗದ ಅರಿವು ಮೂಡಿಸಬೇಕು ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಅಶೋಕರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಿರ್ದೇಶಕಿ ಮತ್ತು ಪ್ರಾಚಾರ್ಯೆ ಡಾ.ಕೆ.ಮಂಜುಳ, ಗ್ರಾಮಸ್ಥರಾದ ಪಾಲಯ್ಯ, ವೆಂಕಟೇಶರೆಡ್ಡಿ, ನಿ.ಶಿ.ಮಹಾಂತೇಶ್, ನವೀನ್ ರೆಡ್ಡಿ, ಪರಮೇಶ್, ಅಧ್ಯಾಪಕರಾದ ಸೋಮಶೇಖರ್, ಶಶಿಧರ್, ಡಾ.ಸಂತೋಷ್‍ಕುಮಾರ್, ಗೋವಿಂದರಾಜು ಇತರರಿದ್ದರು. ವಿದ್ಯಾರ್ಥಿನಿ ಯಶೋಧ ಪ್ರಾರ್ಥಿಸಿದರು, ಮಧುಶ್ರೀ ಸ್ವಾಗತಿಸಿದರು, ಇಂದಿರಾ ನಿರೂಪಿಸಿದರು, ಸಂಜನಾ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕೆ.ಎಂ.ಎಸ್. ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.


























