ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ : ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 03 : ಗ್ರಾಮೀಣ ಭಾಗದಿಂದ ಹುಟ್ಟಿಕೊಂಡಿರುವ ಜಾನಪದ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ತಿಳಿಸಿದರು.

ಬುದ್ದ ಕ್ರೀಡಾ ಮತ್ತು ಗ್ರಾಮೀಣಾಭಿವೃದ್ದಿ ಸಾಂಸ್ಕøತಿಕ ಕಲಾ ಸಂಘ ಹುಲ್ಲೇಹಾಳ್, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಇವರುಗಳ ಸಹಯೋಗದೊಂದಿಗೆ ಜೋಗಿಮಟ್ಟಿ ರಸ್ತೆಯಲ್ಲಿರುವ ವಾಸುದೇವರೆಡ್ಡಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಜಾನಪದ ಸಿರಿ ಸಂಭ್ರಮವನ್ನು ತಬಲ ಬಾರಿಸುವ ಮೂಲಕ ಉದ್ಗಾಟಿಸಿ ಮಾತನಾಡಿದರು.

ಜಾನಪದ, ಸೋಬಾನೆ, ಗೀಗಿಪದ, ತತ್ವಪದಗಳನ್ನು ಹಾಡುವವರೆ ಕಡಿಮೆಯಾಗಿದ್ದಾರೆ. ಹಿಂದಿನ ಕಾಲದಲ್ಲಿ ಸುಗ್ಗಿ ಸಂದರ್ಭದಲ್ಲಿ ಜಾನಪದ ಹಾಡುಗಳು ಮೊಳಗುತ್ತಿದ್ದವು. ಗಾದೆ ಮಾತು, ಒಗಟು, ಬಾಯಿಂದ ಬಾಯಿಗೆ ಹರಡುವ ಜಾನಪದನ್ನು ಪೋಷಿಸಿದರೆ ಮಾತ್ರ ಕಲಾವಿದರು ಉಳಿಯಲು ಸಾಧ್ಯ ಎಂದು ಹೇಳಿದರು.

ಬುದ್ದ ಕ್ರೀಡಾ ಮತ್ತು ಗ್ರಾಮೀಣಾಭಿವೃದ್ದಿ ಸಾಂಸ್ಕøತಿಕ ಕಲಾ ಸಂಘದ ಕಾರ್ಯದರ್ಶಿ ಡಿ.ನಾಗರಾಜ್ ಮಾತನಾಡಿ ಜಾನಪದ ಗೀತೆ, ಸೋಬಾನೆ, ತತ್ವಪದಗಳನ್ನು ಹಾಡುವವರೆ ಇಲ್ಲದಂತಾಗಿದ್ದಾರೆ. ಅದಕ್ಕಾಗಿ ಜಾನಪದವನ್ನು ಉಳಿಸಿ ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಡಾ.ಪ್ರಶಾಂತ್ ಮಾತನಾಡುತ್ತ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜಾನಪದ ಕಲೆಯನ್ನು ಪರಿಚಯಿಸಬೇಕಿದೆ. ಜಾನಪದ ಎನ್ನುವುದು ಕೇವಲ ಹಾಡಲ್ಲ. ಅದೊಂದು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಸಾಧನ ಎಂದು ಹೇಳಿದರು.

ಬಡಾವಣೆ ಠಾಣೆ ಸಬ್‍ಇನ್ಸ್‍ಪೆಕ್ಟರ್ ಯಶೋಧ, ನ್ಯಾಯವಾದಿ ಎಸ್.ವಿಜಯಕುಮಾರ್, ಬುದ್ದ ಕ್ರೀಡಾ ಮತ್ತು ಗ್ರಾಮೀಣಾಭಿವೃದ್ದಿ ಸಾಂಸ್ಕøತಿಕ ಕಲಾ ಸಂಘದ ಅಧ್ಯಕ್ಷೆ ರೇಖಮ್ಮ, ಕೃಷ್ಣಪ್ಪ ಎ.ಹುಲ್ಲೂರು, ಶಿಕ್ಷಕರುಗಳಾದ ರಾಮಲಿಂಗಪ್ಪ, ನಾಗರಾಜ್, ರವಿಕುಮಾರ್, ಮಹಮದ್ ಫಜಲುಲ್ಲಾ, ಗಿರಿಜಮ್ಮ, ಶಿವಮೂರ್ತಿ ಇವರುಗಳು ವೇದಿಕೆಯಲ್ಲಿದ್ದರು. ಮುಖ್ಯ ಶಿಕ್ಷಕಿ ಪದ್ಮ ಅಧ್ಯಕ್ಷತೆ ವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *