ಬೆಂಗಳೂರು: ಮೇ 15 ಕ್ಕೆ ಡಿಕೆ ಸುರೇಶ್ ಅವರ ಹುಟ್ಟುಹಬ್ಬ. ಅಂದಾದರೂ ಸಿಎಂ ಸ್ಥಾನದ ಬಗ್ಗೆ ಗುಡ್ ನ್ಯೂಸ್ ಸಿಗುತ್ತೆ ಅಂತಾನೇ ಅಭಿಮಾನಿಗಳು ಕಾಯ್ತಾ ಇದ್ದರು. ಅಷ್ಟೆ ಯಾಕೆ ಪಕ್ಷದಲ್ಲಿನ ಕೆಲವು ಶಾಸಕರು ಕಾಯ್ತಾ ಇದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರೇ ಇತ್ತೀಚೆಗೆ ಈ ವಿಚಾರದಲ್ಲಿ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಸಿಎಂ ಬದಲಾವಣೆಯ ಆಲೋಚನೆ ಇಲ್ಲ ಎಂಬ ಮಾತನ್ನ ಹೇಳಿದ್ದಾರೆ. ಈ ಬಗ್ಗೆ ಡಿಕೆ ಸುರೇಶ್ ಹೇಳಿದ್ದು ಹೀಗೆ.

ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಅಧ್ಯಕ್ಷರು ಏನು ಹೇಳ್ತಾರೆ ಅದರಂತೆ ಪಕ್ಷ ಕೇಳುತ್ತೆ. ಜನಾಶೀರ್ವಾದ ಮಾಡಿದ್ದಾರೆ ಅದರಂತೆ ನಾವೂ ಕೆಲಸ ಮಾಡ್ತಾಇದ್ದೀವಿ. ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ಬದ್ಧರಾಗಿರುತ್ತೇವೆ. ಗೊಂದಲ ಏನಿಲ್ಲ, ಎಲ್ಲವೂ ಕೂಡ ಪಕ್ಷದ ಹೈಕಮಾಂಡ್ ನಂತೆಯೇ ನಡೆಯುತ್ತದೆ ಎಂದಿದ್ದಾರೆ.
ಇದೇ ವೇಳೆ ಎಲ್ಪಜಿ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಮಾತನ್ನಾಡಿ, ಕಮರ್ಷಿಯಲ್ ಒಂದೇ ಅಲ್ಲ ಮುಂದಿನ ದಿನಗಳಲ್ಲಿ ಸಾಕಷ್ಟು ಬೆಲೆ ಏರಿಕೆ ಬಿಸಿ ತಟ್ಟುತ್ತದೆ. ಅದರ ಬಗ್ಗೆ ಪ್ರಧಾನಿಮೋದಿ ಅವರು ಉತ್ತರ ಕೊಡಬೇಕು. ಅಚ್ಛೆದಿನ ಬಗ್ಗೆ ಮಾತನ್ನಾಡ್ತಾರೆ. ಆದರೆ ರಾಷ್ಟ್ರದ ಜನರ ಸಂಕಷ್ಟವನ್ನು ಯಾವ ರೀತಿ ಬಗೆಹರಿಸಬೇಕು ಅನ್ನೋದನ್ನ ಅವರೇ ಹೇಳಿದರೆ ಒಳ್ಳೆಯದು. ಏನೇನು ಬದಲಾವಣೆ ಆಗುತ್ತವೆ ಎಂಬುದನ್ನ ಕಾದು ನೋಡಬೇಕಿದೆ. ಗ್ಯಾಸ್ ಸಿಗದೆ ಇರುವ ಸಮಸ್ಯೆ, ಏರಿಕೆ ಸಮಸ್ಯೆಗೆಲ್ಲಾ ಉತ್ತರ ಕೊಡಬೇಕಾಗಿದೆ ಎಂದು ಮೋದಿ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.



















