ಬೆಂಗಳೂರು: ಇಂದು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ಭೇಟಿಯಾಗಿದ್ದಾರೆ. ದೀರ್ಘ ಸಮಯ ಮಾತುಕತೆ ನಡೆಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದ್ದು, ಭೇಟಿಯ ಉದ್ದೇಶವೇನು ಎಂಬುದರ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಾನೂ, ಸತೀಶ್ ಗೆ ಪಕ್ಷ ಮುಖ್ಯ. ಪಕ್ಷ ಇದ್ರೆ ನಾವೆಲ್ಲಾ. ಅನೇಕ ವಿಚಾರಗಳು ಪಕ್ಷ ಮತ್ತು ಬೆಂಗಳೂರಿಗೆ ಟ್ರಾಫಿಕ್ ನ ಯಾವ ರೀತಿ ಕಡಿಮೆ ಮಾಡುವುದಕ್ಕೆ ಆಗ್ತದೆ, ನ್ಯಾಷನಲ್ ಹೈವೆಗಳ ಬಗ್ಗೆ, ಅದರಲ್ಲೂ ನೆಲಮಂಗಲದಿಂದ ಸಿಟಿಗೆ ಬರಬೇಕಾದ್ರೆ ಗೊರಗುಂಟೆಪಾಳ್ಯದಲ್ಲಿ ಅರ್ಧಗಂಟೆ, ಮುಕ್ಕಾಲು ಗಂಟೆ ಟ್ರಾಫಿಕ್ ಜಾಮ್ ಆಗ್ತಿದೆ. ಈ ವಿಚಾರಕ್ಕೆ ಪ್ರಪೋಸಲ್ ಯಾವ ರೀತಿ ಮಾಡಬೇಕು ಅಂತ ನಾನು ಅವರು ಇಬ್ಬರು ಸೇರಿ ಮಾತನಾಡಿದೆವು. ನೈಸ್ ರೋಡ್ ಗೂ ಮುಂಚೆ ಏನು ಮಾಡೋದಕ್ಕೆ ಸಾಧ್ಯ ಎಂಬುದನ್ನ ಚರ್ಚೆ ಮಾಡಿದ್ದೀವಿ. ಎರಡನೇಯದು ರಾಜಕಾರಣ. ನಮ್ಮ ಪಕ್ಷದ ಅಭಿವೃದ್ಧಿಗೆ ಏನು ಬೇಕೋ ಅದನ್ನೆಲ್ಲಾ ಕೂತು ಚರ್ಚೆ ಮಾಡಿದ್ದೀವಿ. ಒಟ್ಟಿಗೆ ಕೂತು ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಈ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಪಕ್ಷ, ಮುಂದಿನ ಚುನಾವಣೆ, ವಿಶೇಷವಾಗಿ ಜಬ್ಬಾರ್ ಅವರ ಬಗ್ಗೆ ಚರ್ಚೆ ಆಯ್ತು. ಮತ್ತೆ ಅವರನ್ನ ವಾಪಾಸ್ ತೆಗೆದುಕೊಳ್ಳಬೇಕು. ಪಾರ್ಟಿ ಸಪೋರ್ಟ್ ಎಲ್ಲಾ ಕೇಳಿದ್ದೀನಿ. ನೋಟೀಸ್ ಗೆ ರಿಪ್ಲೇ ಬರಲಿ. ನಂತರ ವರಿಷ್ಠರ ಜೊತೆಗೆ ಮಾತನ್ನಾಡಿ, ಆ ಬಗ್ಗೆ ನಿರ್ಧಾರ ಮಾಡ್ತಾರೆ. ವಾಪಾಸ್ ತೆಗೆದುಕೊಳ್ಳಲೇಬೇಕು ಅಲ್ವಾ. ನೋಟೀಸ್ ಗೆ ಅವೆಉ ಉತ್ತರ ಕೊಡಲಿ, ಆಮೇಲೆ ನಿರ್ಧಾರ ಮಾಡ್ತಾರೆ ಎಂದಿದ್ದಾರೆ.
















