Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡ್ರೆಸ್ಸಿಂಗ್ ರೂಮ್ ಸೀಕ್ರೆಟ್ ರಿವಿಲ್ ಮಾಡಿದ್ದು ಸರ್ಫರಾಜ್ ಖಾನ್ : ಆರೋಪ ಸಾಬೀತಾದ್ರೆ ಏನಾಗಬಹುದು..?

---Advertisement---

ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಾರೀ ಚರ್ಚೆಗೆ ಗ್ರಾಸವಾಗಿದೆ. ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಟ್ಟಿಗೆ ಬಂದಿದೆ. ಅದರಲ್ಲೂ ಆಸ್ಟ್ರೇಲಿಯಾ ತಲುಪಿದ ಮೇಲೆ ಬಂಡಾಯದ ಬಿಸಿ ಜೋರಾಗಿದೆ. ಇದಕ್ಕೆಲ್ಲ ಕಾರಣ ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಒಂದೊಂದಾಗಿಯೇ ಹೊರಗೆ ಬರುತ್ತಿರುವುದು. ಇದರ ನಡುವೆ ಈ ಡ್ರೆಸ್ಸಿಂಗ್ ರೂಂ ಸೀಕ್ರೆಟ್ ರಿವೀಲ್ ಮಾಟ್ತಿದ್ದವರು ಯಾರೂ ಎಂಬ ಹುಡುಕಾಟ ಶುರುವಾಗಿದೆ. ಈಗ ನೇರವಾಗಿ ಈ ಆರೋಪ ಹೊತ್ತಿರುವುದು ಮುಂಬೈಕರ್ ಸರ್ಫರಾಜ್ ಖಾನ್.

ಈ ವಿಚಾರವನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ರಿವ್ಯೂವ್ ಮೀಟಿಂಗ್ ನಲ್ಲಿ ಮಾತನಾಡಿದ್ದಾರೆ. ಡ್ರೆಸ್ಸಿಂಗ್ ರೂಂ ಸೀಕ್ರೆಟ್ ರಿವಿಲ್ ಬಗ್ಗೆ ಈಗಾಗಲೇ ಬಿಸಿಸಿಐಗೆ ದೂರು ನೀಡಿರುವ ಗಂಭೀರ್, ಸರ್ಫರಾಜ್ ಖಾನ್ ವಿರುದ್ಧವೂ ದೂರು ನೀಡಿದ್ದಾರೆ. ಮೊದಲೇ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಹುದ್ದೆಯ ಮೇಲೆಯೇ ತೂಗುಗತ್ತಿ ನೇತಾಡುತ್ತಿದೆ. ಹೀಗಿರುವಾಗ ಈ ಅವಾಂತರವನ್ನೆಲ್ಲ ಸರಿ ಮಾಡಬೇಕಿದೆ.

ಅಷ್ಟಕ್ಕೂ ಏನಿದು ಸೀಕ್ರೆಟ್..?

ಮೆಲ್ಬೋರ್ನ್ ಟೆಸ್ಟ್ ಸೋಲಿನ ಬೆನ್ನಲ್ಲೇ ಗಂಭೀರ್ ಅವರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ತಂಡದ ಮೇಲೆ ಹರಿಹಾಯ್ದಿದ್ದರಂತೆ. ಇಷ್ಟು ದಿನ ಮುಕ್ತವಾಗಿ ಆಡಲು ಬಿಟ್ಟಿದ್ದೆ. ಇನ್ಮುಂದೆ ನಾನು ಮಾಡಿದ ಪ್ಲ್ಯಾನ್ ನಂತೆ ಆಡಿ. ಇಲ್ವಾ ಹೊರಗೆ ನಡೀತಾ ಇರಿ ಎಂದು ಹೇಳಿದ್ದರಂತೆ. ಸರ್ಫರಾಜ್ ಈ ಎಲ್ಲಾ ವಿಚಾರಗಳನ್ನು ತಮ್ಮ ಆಪ್ತ ಬಳಗದಲ್ಲಿ ಹಂಚಿಕೊಂಡಿದ್ದಾರೆ ಎಂಬ ಅನುಮಾನವನ್ನು ಹುಟ್ಟು ಹಾಕಿದ್ದು, ಗೌತಮ್ ಗಂಭೀರ್ ಕೂಡ ದೂರು ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment