Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ದಾರ್ ಪಟೇಲ್, ನೆಹರೂ RSS ಬ್ಯಾನ್ ಮಾಡಿದಾಗ ಕೈಕಾಲು ಹಿಡಿದಿದ್ದರು: ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

---Advertisement---

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ. ರವಿ ಅವರ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಸರ್ದಾರ್ ಪಟೇಲ್ ಮತ್ತು ಜವಾಹರಲಾಲ್ ನೆಹರೂ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದಾಗ, ಇದೇ ಆರ್‌ ಎಸ್‌ ಎಸ್‌ ನವರು ಅವರ ಕೈಕಾಲು ಹಿಡಿದಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರಿಗೆ ಆರ್‌ಎಸ್‌ಎಸ್‌ನ ಇತಿಹಾಸವೇ ಗೊತ್ತಿಲ್ಲ. ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸಂಚಾಲಕರೇ ಪತ್ರ ಬರೆದು ಕ್ಷಮೆಯಾಚಿಸಿದ್ದರು. ಕಾನೂನಿನ ಪ್ರಕಾರ ಸಂಘಟನೆಯನ್ನು ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಎಂದರೆ ಅವರಿಗೆ ಯಾಕಷ್ಟು ಭಯ? ನಾವು ಈ ದೇಶದ ಸಂವಿಧಾನ ಮತ್ತು ಕಾನೂನಿಗೆ ಒಳಪಡುವುದಿಲ್ಲ ಎಂದು ಅವರು ಬಹಿರಂಗವಾಗಿ ಹೇಳಲಿ. ನಾನೇ ಅವರ ಕೇಶವಕೃಪ ಕಚೇರಿಗೆ ಹೋಗುತ್ತೇನೆ, ಇಲ್ಲವೇ ಅವರೇ ನನ್ನ ಕಚೇರಿಗೆ ಬಂದು ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು.

ದೇಶದ ಕಾನೂನು ಎಲ್ಲರಿಗೂ ಒಂದೇ ಎಂದು ಪ್ರತಿಪಾದಿಸಿದ ಸಚಿವರು, ಲೆಕ್ಕ ಒಪ್ಪಿಸುವ ವಿಚಾರದಲ್ಲಿ ಆರ್‌ಎಸ್‌ಎಸ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ದೇಶದಲ್ಲಿ ಬೀದಿ ಬದಿಯ ವ್ಯಾಪಾರಿಯೂ ನೋಂದಣಿ ಮಾಡಿಕೊಳ್ಳಬೇಕು. ದೇವಸ್ಥಾನಗಳೂ ನೋಂದಣಿಯಾಗಬೇಕು. ದೇವರ ಹೆಸರಲ್ಲೂ ಲೆಕ್ಕ ಕೊಡಬೇಕು, ಸಾಮಾನ್ಯ ಜನರೂ ಆದಾಯ ತೆರಿಗೆ (IT) ಇಲಾಖೆಗೆ ಲೆಕ್ಕ ಕೊಡಬೇಕು. ಆದರೆ ಆರ್‌ಎಸ್‌ಎಸ್‌ನವರು ಮಾತ್ರ ಯಾವುದೇ ಲೆಕ್ಕ ಕೊಡುವ ಹಾಗಿಲ್ಲವೇ? ಅವರ ದೇಣಿಗೆಗೆ ಪಾರದರ್ಶಕತೆ ಬೇಡವೇ? ಎಂದು ಪ್ರಶ್ನಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಮೋದಿ ಸರ್ಕಾರಕ್ಕೆ 12 ವರ್ಷ ಪೂರ್ಣ: ಚಿತ್ರದುರ್ಗದ ನೀಲಕಂಠೇಶ್ವರ ಸನ್ನಿಧಿಯಲ್ಲಿ ನಮೋ ಹೆಸರಲ್ಲಿ ವಿಶೇಷ ಪೂಜೆ

ದೇಹದ ಸದೃಢತೆಗೆ ಸಸ್ಯಾಹಾರಿಗಳು ಸೇವಿಸಬೇಕಾದ ಪ್ರೋಟೀನ್ ಯುಕ್ತ ಆಹಾರಗಳಿವು

ವಿಶ್ವ ನಾಯಕ ನರೇಂದ್ರ ಮೋದಿಯವರ 12 ವರ್ಷಗಳ ಸೇವೆಗೆ ಬಿಜೆಪಿ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮ

ಜೂನ್ 21ರಂದು ಕೋಟೆನಾಡಿನಲ್ಲಿ 12ನೇ ಅಂತರರಾಷ್ಟೀಯ ಯೋಗ ದಿನಾಚರಣೆ : ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಒತ್ತಡ ಮುಕ್ತ ಜೀವನಕ್ಕೆ ಯೋಗ ಪ್ರಸ್ತುತ

ಗಣಿಬಾಧಿತ ಗ್ರಾಮಗಳ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹೈನುರಾಸು ಕಾರ್ಯಕ್ರಮದಡಿ ಆರ್ಥಿಕ ನೆರವು : ಜೂನ್ 22 ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಅತಿ ದೀರ್ಘಾವಧಿ ಪ್ರಧಾನಿ ಹೆಗ್ಗಳಿಕೆ: ದಾವಣಗೆರೆಯಲ್ಲಿ ನರೇಂದ್ರ ಮೋದಿ ಹೆಸರಲ್ಲಿ ವಿಶೇಷ ಪೂಜೆ