Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರಾಜಕೀಯ ನಿವೃತ್ತಿ ಘೋಷಿಸಿದ ಭದ್ರಾವತಿಯ ಶಾಸಕ ಸಂಗಮೇಶ್..!

ಭದ್ರಾವತಿ
---Advertisement---

ಶಿವಮೊಗ್ಗ : ಭದ್ರಾವತಿಯ ಕಾಂಗ್ರೆಸ್ ಶಾಸಕಿದ್ದಕ್ಕಿದ್ದ ಹಾಗೇ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸಂಗಮೇಶ್ ಅವರು ರಾಜಕಾರಣದಲ್ಲಿ ಸಾಕಷ್ಟು ಸಕ್ರಿಯವಾಗಿದ್ದವರು. ಈಗ ದಿಢೀರನೇ ನಿವೃತ್ತಿ ಘೋಷಣೆ ಮಾಡಿರೋದು ಶಾಕಿಂಗ್ ಎನಿಸಿದೆ. ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ನಡೆದ ಪಂಚ ಗ್ಯಾರಂಟಿ ಕಾರ್ಯಕ್ರಮದಲ್ಲಿ ಈ ರೀತಿಯ ಘೋಷಣೆಯನ್ನ ಮಾಡಿದ್ದಾರೆ.

ನಾನು ಈಗ ನನ್ನ ರಾಜಕೀಯ ಪಯಣವನ್ನು ಮುಗಿಸುತ್ತಿದ್ದೇನೆ. ಕ್ಷೇತ್ರದ ಜನತೆ ನನ್ನ ಮಗ ಗಣೇಶ್ ಅವರಿಗೆ ಆಶೀರ್ವಾದ ನೀಡಿ, ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಂದ್ರೆ ತಮ್ಮ ಮಗನಿಗಾಗಿ ಕ್ಷೇತ್ರ ಬಿಟ್ಟು, ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದಾರೆ. ಇದೆ ವೇಳೆ ನನ್ನ ಮೇಲೆ ಜನತೆ ತೋರಿದ ಪ್ರೀತಿ, ನಂಬಿಕೆ ಮತ್ತು ಬೆಂಬಲ ಎಂದಿಗೂ ಮರೆಯಲಾಗದು. ಈಗ ನನ್ನ ಸಹೋದರರು, ಮಕ್ಕಳು ಎಲ್ಲರು ಮುಂದಿನ ತಲೆಮಾರಿನ ರಾಜಕೀಯಕ್ಕೆ ತಯಾರಾಗಿದ್ದಾರೆ. ಅವರಿಗೆ ನಿಮ್ಮ ಸಹಕಾರ ಬಹಳ ಮುಖ್ಯ ಎಂದಿದ್ದಾರೆ.

ಸಂಗಮೇಶ್ ಅವರ ಈ ನಿರ್ಧಾರವು ಭದ್ರಾವತಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಯಾರು ಎನ್ನುವ ಕುತೂಹಲವೂ ಹೆಚ್ಚಿದೆ. ಏಕೆಂದರೇ, ಬಹುತೇಕ ರಾಜಕಾರಣಿಗಳ ಉತ್ತರಾಧಿಕಾರಿಗಳು ಅವರ ಮಕ್ಕಳೇ ಇರುತ್ತಾರೆ. ಇಲ್ಲಿ ಸಾಮಾನ್ಯ ಕಾರ್ಯಕರ್ತ ಅವರಿಗೆ ಜೈ ಅಂದು ಅವರ ಬ್ಯಾನರ್ ಕಟ್ಟಬೇಕೇ ಹೊರತು, ಇನ್ನೇನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂಗಮೇಶ್ ಅವರಿಂದ ತೆರವಾದ ಸ್ಥಾನಕ್ಕೆ ಅವರ ಮಗನೇ ಬರುತ್ತಾರೆಯೇ ಅಥವಾ ಯಾರಾದರೂ ಕಾಂಗ್ರೆಸ್‌ನಲ್ಲಿ ಹೊಸ ಆಕಾಂಕ್ಷಿ ಹುಟ್ಟಿಕೊಳ್ಳುತ್ತಾರೆಯೇ ಎನ್ನುವುದು ಚರ್ಚೆ ನಡೆಯುತ್ತಿದೆ.

ಚಿಕಿತ್ಸೆ ನೀಡಿದರು ಹರೀಶ್ ರಾಯ್ ಸಾವನ್ನಪ್ಪಲು ಕಾರಣವೇನು..? ವೈದ್ಯರಿಂದ ಸ್ಪಷ್ಟನೆ☞ https://suddione.com/harish-roys-death-doctor-clarifies/

 

BBK 12: ಒಂದು ಪತ್ರದಿಂದ ಮತ್ತೆ ಒಂದಾದ ಅಶ್ವಿನಿ – ಜಾಹ್ನವಿ

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now