Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿಕಿತ್ಸೆ ನೀಡಿದರು ಹರೀಶ್ ರಾಯ್ ಸಾವನ್ನಪ್ಪಲು ಕಾರಣವೇನು..? ವೈದ್ಯರಿಂದ ಸ್ಪಷ್ಟನೆ

ಕೆಜಿಎಫ್ ಚಾಚಾ ಹರೀಶ್ ರಾಯ್ ಇನ್ನಿಲ್ಲ..!
---Advertisement---

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಪೋಷಕ ಪಾತ್ರ, ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಹರೀಶ್ ರಾಯ್ ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರಿಗೆ ಸಿನಿಮಾ ರಂಗದ ಹಲವು ಗಣ್ಯರು ಸಹಾಯ ಹಸ್ತ ಚಾಚಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಆ ಬಗ್ಗೆ ವೈದ್ಯರು ಮಾತನಾಡಿದ್ದಾರೆ.

ಹರೀಶ್ ರಾಯ್ ಗೆ ಚಿಕಿತ್ಸೆ ನೀಡಿದ ಡಾಕ್ಟರ್ ಸುರೇಶ್ ಬಾಬು ಮಾತನಾಡುತ್ತಾ, ಮೂರು ವರ್ಷಗಳ ಹಿಂದೆ ಹರೀಶ್ ರಾಯ್ ಅವರು ನಮ್ಮ ಬಳಿ ಬಂದಾಗ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಆಗಿತ್ತು. ಆಗಲೇ ಅದು ಶ್ವಾಸಕೋಶಕ್ಕೆ ಹರಡಿತ್ತು. ಆಗ ಅವರಿಗೆ ಕ್ಯಾನ್ಸರ್ ಕೊನೇ ಹಂತದಲ್ಲಿ ಇತ್ತು. ಫೈನಲ್ ಹಂತದಲ್ಲಿರುವಾಗ ಚಿಕಿತ್ಸೆ ನೀಡಿದರು ಕ್ಯಾನ್ಸರ್ ಗುಣಮುಖವಾಗುವುದು ಕಷ್ಟ. ಮೂರು ವರ್ಷದ ಹಿಂದೆ ಅವರಿಗೆ ಟಾರ್ಗೆಟೆಡ್ ಥೆರಪಿ ಶುರು ಮಾಡಿದ್ದೆವು. ಆರಂಭದಲ್ಲಿ ಚಿಕಿತ್ಸೆಗೆ ಹರೀಶ್ ರಾಯ್ ಅವರು ಚೆನ್ನಾಗಿಯೇ ಸ್ಪಂದಿಸುತ್ತಿದ್ದರು. ಒಂದೂವರೆ ವರ್ಷದ ತನಕ ಕಾಯಿಲೆ ನಿಯಂತ್ರಣದಲ್ಲಿತ್ತು. ಎರಡನೇ ಟಾರ್ಗೆಟೆಡ್ ಥರಪಿ ನೀಡಿದೆವು.

ಆ ಥೆರಪಿಗೂ ಸುಮಾರು ಒಂದೂವರೆ ವರ್ಷದ ತನಕ ಅವರು ಸ್ಪಂದಿಸಿದರು. ಆ ಬಳಿಕ ಇಮ್ಯೂನೋ ಥೆರಪಿ ಎಂಬ ಇಂಜೆಕ್ಷನ್ ಪ್ರಯತ್ನಿಸಿದೆವು. ದುರಾದೃಷ್ಟವಶಾತ್ ಇಮ್ಯುನೋ ಥೆರಪಿಗೆ ಅವರು ಅಷ್ಟು ಚೆನ್ನಾಗಿ ಸ್ಪಂದಿಸಲಿಲ್ಲ. ಥೈರಾಯ್ಡ್ ಗೆ ಇದ್ದ ಎಲ್ಲಾ ಆಯ್ಕೆಗಳನ್ನು ನಾವೂ ಮುಗಿಸಿದ್ದೆವು. ಕಳೆದ ಒಂದು ತಿಂಗಳಿನಿಂದ ಅವರ ಆರೊಇಗ್ಯ ಹದಗೆಟ್ಟಿತ್ತು. ಅವರು ತುಂಬಾ ಪಾಸಿಟಿವ್ ಮನೋಭಾವ ಇರುವ ವ್ಯಕ್ಯಿ ಆಗಿದ್ದರು. ಓಪಿಡಿ ರೋಗಿಗಳಿಗೆ ಅವರೇ ಸ್ಪೂರ್ತಿ ತುಂಬುತ್ತಿದ್ದರು. ಮೂರು ವರ್ಷದ ಹಿಂದೆ ಅವರು ಬಂದಾಗ ಇಷ್ಟು ದಿನ ಬದುಕುತ್ತಾರೆ ಎಂದು ನಂಬಿಕೆ ಇರಲಿಲ್ಲ. ಅವರಲ್ಲಿದ್ದ ಪಾಸಿಟುವ್ ಎನರ್ಜಿಯೇ ಅವರನ್ನು ಬದುಕಿಸಿದೆ ಎಂದಿದ್ದಾರೆ.

 

ರೈತರು ಬಿ.ಜೆ.ಪಿ. ಯವರ ಮರಳು ಮಾತುಗಳಿಗೆ ಬಲಿಯಾಗಬಾರದು: ಸಿಎಂ ಸಿದ್ದರಾಮಯ್ಯ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...