Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜನರ ಬಳಿ ದುಡ್ಡಿರಬಾರದು ಅನ್ನೋದೆ ಆರ್ ಎಸ್ ಎಸ್, ಬಿಜೆಪಿ ಉದ್ದೇಶ : ಸಿದ್ದರಾಮಯ್ಯ

---Advertisement---

ಬೆಂಗಳೂರು: ಮನ್ರೇಗಾ ಮರುಜಾರಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕಾಂಗ್ರೆಸ್ ಇಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟವನ್ನು ಮಾಡಿದೆ. ರಾಜಭವನ್ ಚಲೋಗೂ ಚಾಲನೆ ನೀಡಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕೆಪಿಸಿಸಿ ವತಿಯಿಂದ ರಾಜ್ಯಮಟ್ಟದಲ್ಲಿ‌ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಸಾವಿರಾರು ಜನ ಭಾಗಿಯಾಗಿದ್ರು. ಹೈಕೋರ್ಟ್ ಆದೇಶ ಇದ್ದಿದ್ದರಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿದೆವು. ಆದರೆ ಎರಡು ಬಸ್ ನಲ್ಲಿ ಮಾತ್ರ ರಾಜಭವನಕ್ಕೆ ಬಂದಿದ್ದೆವು. ಇತ್ತೀಚೆಗೆ ಕೇಂದ್ರ ಸರ್ಕಾರ ಮನ್ರೇಗಾ ಕಾಯ್ದೆಯನ್ನ ರದ್ದು ಮಾಡಿ, ವಿಬಿಜಿ ರಾಮ್ ಜಿ ಅಂತ ಮಾಡಿದ್ದಾರೆ. ಮನ್ರೇಗಾದಲ್ಲಿ ಹಳ್ಳಿಗಾಡಿನ ಕೂಲಿಕಾರ್ಮಿಕರು, ದಲಿತರು, ಮಹಿಳೆಯರು, ಸಣ್ಣ ರೈತರು ಇವರೆಲ್ಲರೂ 100 ದಿನಗಳ ಕಾಲ ಯಾವಾಗ ಕೆಲಸ ಕೇಳ್ತಾರೆ ಆಗ ಕೂಲಿ ಕೊಡುವಂತ ನಿಯಮ ಇತ್ತು. ಸುಮಾರು 20 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಅವರು ಮಾಡಿದ್ದರು.

 

ಎಲ್ಲದಕ್ಕಿಂತ ಬಹಳ ಮುಖ್ಯವಾಗಿ ಹಳ್ಳಿ ಜನರ ಕೆಲಸವನ್ನ ಕಿತ್ತುಕೊಳ್ತಾ ಇದ್ದಾರೆ. ಇವರಿಗೆ ಮಾರ್ಗದರ್ಶನ ಮಾಡೋದು ಯಾರು ಅಂದ್ರೆ ಆರ್ ಎಸ್ ಎಸ್ ನವರು. ಯಾಕಂದ್ರೆ ಜನರ ಕೈಲಿ ದುಡ್ಡಿರಬಾರದು ಅಂತ. ಅವರ ಕೈಲಿ ದುಡ್ಡಿದ್ದರೆ ಸೇವಕರಾಗಿರುವುದಿಲ್ಲ ಅಂತ. ಸೇವಕರಾಗಿರಬೇಕು ಅನ್ನೋದೇ ಬಿಜೆಪಿ, ಆರ್ ಎಸ್ ಎಸ್ ಉದ್ದೇಶ. ನಮ್ಮ ಹೋರಾಟವನ್ನು ಇಡೀ ದೇಶದಲ್ಲಿ ಮಾಡ್ತೇವೆ. ಕಾಯ್ದೆ ಇದೆಯಲ್ಲ ವಿಬಿಜಿ ರಮಾ್ ಜಿ ಇದನ್ನ ರದ್ದು ಮಾಡಿ, ಮತ್ತೆ ಮನ್ರೇಗಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯ ಹಾಕುತ್ತಿದ್ದೇವೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ