ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡಬಾರದು. ಯಾರ ಮೇಲೂ ಕೈ ಎತ್ತಬಾರದು. ಆ ರೀತಿಯಾದಾಗ ಆ ಸ್ಪರ್ಧಿ ಮನೆಯಲ್ಲಿರುವುದಕ್ಕೆ ಸಾಧ್ಯವಿಲ್ಲ, ಹೊರಗೆ ಕಳುಹಿಸುತ್ತಾರೆ. ಕಳೆದ ವಾರ ರಿಷಾ ಗೌಡ, ಗಿಲ್ಲಿ ಮೇಲೆ ಕೈ ಮಾಡಿದ್ದಾರೆ. ಗಿಲ್ಲಿ ಇರುವುದೇ ತಮಾಷೆಯಿಂದ. ಅದೇ ಸ್ವಭಾವದಲ್ಲಿ ರಿಷಾ ಗೌಡ ಬಟ್ಟೆಯನ್ನ ವಾಶ್ ರೂಮ್ ಮುಂದೆ ಹಾಕಿದ್ದರು. ಆದರೆ ಇದಕ್ಕೆ ಕೋಪಗೊಂಡ ರಿಷಾ ಕೈ ಮುಂದೆ ಮಾಡಿದ್ದಾರೆ.
ಈ ಸನ್ನಿವೇಶವಾದ ಮೇಲೆ ಬಿಗ್ ಬಾಸ್ ವೀಕ್ಷಕರೆಲ್ಲಾ ಒಂದು ರೌಂಡ್ ಚರ್ಚೆ ಮಾಡಿದ್ದರು. ರಿಷಾ ಗೌಡ ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಇರಲ್ಲ ಬಿಡಿ. ಹೊರಗೆ ಕಳುಹಿಸ್ತಾರೆ ಅಂತ. ಆದ್ರೆ ಅದು ಬೇಗ ನಿರ್ಧಾರ ಆಗಿರಲಿಲ್ಲ. ವೀಕೆಂಡ್ ನಲ್ಲಿ ಬುದ್ದಿ ಹೇಳಬಹುದು ಎಂದು ಅಂದುಕೊಂಡಿದ್ದ ವೀಕ್ಷಕರಿಗೆ ಬಿಗ್ ಬಾಸ್ ನಿರ್ಧಾರವೇ ಬೇರೆಯಾಗಿದೆ. ಈಗ ರಿಷಾ ಉಳಿಯಬೇಕು ಅಂದ್ರೆ ಮನೆ ಮಂದಿಯ ನಿರ್ಧಾರವೂ ಬಹಳ ಮುಖ್ಯವಾಗಿದೆ.
ಇಂದಿನ ಪಂಚಾಯ್ತಿಯಲ್ಲಿ ಯಾವ ವಿಚಾರ ಚರ್ಚೆಯಾಗಬಹುದು ಎಂದು ನಿನ್ನೆ ಸುದೀಪ್ ಅವರು ಸೂಕ್ಷ್ಮವಾಗಿ ತಿಳಿಸಿದ್ದರು. ಅದರಲ್ಲಿ ಗಿಲ್ಲಿಗೆ ಹೊಡೆದದ್ದು ಒಂದು. ಈಗ ಮನೆ ಮಂದಿ ಮುಂದೆ ಒಂದು ಟಾಸ್ಕ್ ಕೊಟ್ಟಿರುವ ಬಿಗ್ ಬಾಸ್, ರಿಷಾ ಈ ಮನೆಯಲ್ಲಿ ಇರಬೇಕಾ ಬೇಡವಾ ಎಂಬುದನ್ನ ನಿರ್ಧರಿಸಲು ತಿಳಿಸಿದೆ. ಅಂದ್ರೆ ಎಲ್ಲೋ ಕಾರ್ಡ್ ತೆಗೆದುಕೊಂಡು, ರಿಷಾಗೆ ವಾರ್ನಿಂಗ್ ಕೊಟ್ಟು ಇರಿಸಿಕೊಳ್ಳಬೇಕಾ..? ಅಥವಾ ರೆಡ್ ಕಾರ್ಡ್ ಕೊಟ್ಟು ಹೊರಗೆ ಕಳುಹಿಸುತ್ತೀರಾ ಎಂಬುದು ಈಗ ಮನೆಯವರ ನಿರ್ಧಾರಕ್ಕೆ ಬಿಟ್ಟಿದ್ದಾರೆ ಬಿಗ್ ಬಾಸ್.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










