Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿವೃತ್ತ ಡಿಜಿಪಿ ಓಂಪ್ರಕಾಶ್ ಹತ್ಯೆ ; ಪತ್ನಿ, ಮಗಳನ್ನು ವಶಕ್ಕೆ ಪಡೆದ ಪೊಲೀಸರು..!

---Advertisement---

ಬೆಂಗಳೂರು; ನಿವೃತ್ತ ಡಿಜಿಪಿ ಓಂಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆ ಚುರುಕುಗೊಂಡಿದೆ. ಕೊಲೆಯಾದ ಮೇಲೆ ಕೊಲೆಯ ವಿಚಾರವನ್ನು ಪತ್ನಿ ಪಲ್ಲವಿ ಅವರೇ ತಿಳಿಸಿದ್ದಾರೆ. ಫ್ಯಾಮಿಲಿ ನಡುವೆ ಸಿಕ್ಕಾಪಟ್ಟೆ ಗಲಾಟೆಗಳು ಆಗುತ್ತ ಇದ್ದವಂತೆ. ಆ ಬಗ್ಗೆ ಐಪಿಎಸ್ ಅಧಿಕಾರಿಗಳು ಇರುವಂತ ಗ್ರೂಪ್ ಗೆ ಮೆಸೇಜ್ ಹಾಕಿದ್ದರಂತೆ. ಮನೆಯಲ್ಲಿ ನನಗೆ ಮತ್ತು ಮಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡ್ತಾ ಇದಾರೆ. ಶೂಟ್ ಮಾಡಿ ಬಿಡ್ತೀನಿ ಅಂತ ಭಯ ಬೀಳಿಸ್ತಾ ಇದ್ದಾರೆ ಅಂತ ಮೆಸೇಜ್ ಹಾಕಿದ್ದಾರಂತೆ.

ಓಂ ಪ್ರಕಾಶ್ ಹತ್ಯೆಗೂ ಮುನ್ನ ಖಾರದ ಪುಡಿಯನ್ನು ಎರಚಲಾಗಿದೆಯಂತೆ. ಕೊಲೆ ನಡೆದಿರುವ ಜಾಗದಲ್ಲಿ ಖಾರದ ಪುಡಿ ಇರುವುದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗಗೊಂಡಿದೆ. ಖಾರದ ಪುಡಿ ಎರಚಿ ಚಾಕುವಿನಿಂದ ಚುಚ್ಚಿ ಕೊಲ್ಲಲಾಗಿದೆ. ಕೊಲೆ ಬಳಿಕ ಓಂ ಪ್ರಕಾಶ್ ದೇಹವನ್ನ ಬೆಡ್ ಶೀಟ್ ನಲ್ಲಿ ಸುತ್ತಿ ಇಡಲಾಗಿತ್ತಂತೆ. ಇನ್ನು ಮೃತದೇಹದ ಪಕ್ಕ ಎರಡು ಚಾಕು, ಬಿಯರ್ ಬಾಟೆಲ್ ಪತ್ತೆಯಾಗಿದೆ.

ಈ ಕೊಲೆ ಸಂಬಂಧ ಎಫ್ಐಆರ್ ನಲ್ಲಿ ಎ1 ಆರೋಪಿ ಸ್ಥಾನದಲ್ಲಿ ಪತ್ನಿ ಪಲ್ಲವಿ ಹಾಗೇ ಎ2 ಆರೋಪ ಸ್ಥಾನದಲ್ಲಿ ಮಗಳು ಕೃತಿ‌ ಇದ್ದಾರೆ. ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ಈ ಕೊಲೆಯ ಹಿಂದೆ ಮಗಳ ಪಾತ್ರ ಇಲ್ಲ ಅನ್ನೋದು ಪೊಲೀಸರಿಗೆ ತಿಳಿದು ಬಂದಿದೆ. ಪೊಲೀಸರ ಬಳಿ ಪತ್ನಿ ಪಲ್ಲವಿ, ಓಂ ಪ್ರಕಾಶ್ ಅವರನ್ನ ತಾನೇ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಮಗಳಿಗೆ ತನ್ನ ತಂದೆ ಸಾವನ್ನಪ್ಪಿರುವ ವಿಚಾರವೇ‌ ಇನ್ನು ತಿಳಿದು ಬಂದಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಕೃತಿಗೆ ಸತ್ಯ ಹೇಳಿದರೆ ಅನಾಹುತವಾಗಬಹುದು ಎಂಬ ಭಯ. ಹೀಗಾಗಿ ಓಂ ಪ್ರಕಾಶ್ ಅವರ ಸಾವಿನ ಬಗ್ಗೆ ಮಗಳಿಗೆ ತಿಳಿಸಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment