Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೀಮಸಮುದ್ರದಲ್ಲಿ ವಿಜೃಂಭಣೆಯಿಂದ ನಡೆದ 131 ವರ್ಷದ ಹಳೆಯದಾದ ಕರಿಗಲ್ಲು ಮರುಸ್ಥಾಪನೆ

---Advertisement---

 

ವೇದಮೂರ್ತಿ, ಭೀಮಸಮುದ್ರ,  ಮೊ : 8088076203

ಸುದ್ದಿಒನ್,ಚಿತ್ರದುರ್ಗ, (ಜೂ.26) : ತಾಲ್ಲೂಕಿನ ಭೀಮಸಮುದ್ರದಲ್ಲಿ ಇಂದು (ಜೂ.26) ರಂದು 131 ವರ್ಷದಷ್ಟು ಹಳೆಯದಾದ ಕರಿಗಲ್ಲು ಮರುಸ್ಥಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ಮಾಡಲಾಯಿತು.

ಸೋಮವಾರ ಬೆಳಿಗ್ಗೆ ನಾಲ್ಕು ಗಂಟೆಯಿಂದ ರುದ್ರಾಭಿಷೇಕ, ಕುಂಭಾಭಿಷೇಕ, ಹೋಮ ಹವನ ಹಾಗೂ ಮಹಾಮಂಗಳಾರತಿ ಮೂಲಕ ಹಾಗೂ ಬಾಳೆಯ ಕಂಬವನ್ನು ನೆಟ್ಟು ಅದನ್ನು ಕತ್ತರಿಸಿ ತದನಂತರ ಹೋಮವನ್ನು ಮುಂದುವರಿಸಲಾಯಿತು.

ಭೀಮಸಮುದ್ರ ಕೆರೆಯಿಂದ 101 ಕುಂಭದಲ್ಲಿ ಗಂಗೆಯನ್ನು ತಂದು ಈ ಕಲ್ಲಿಗೆ ಅಭಿಷೇಕ ಮಾಡಿ ಕಲ್ಲನ್ನು ಗ್ರಾಮದ ಎಲ್ಲಾ ದೇವರುಗಳ ಸಮ್ಮುಖದಲ್ಲಿ ಮರು ಸ್ಥಾಪನೆ ಮಾಡಿದರು.
ತದನಂತರ ಗ್ರಾಮದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

1892 ರಲ್ಲಿ ನಂದನ ನಾಮ ಸಂವತ್ಸರ ವೃಷಭ ಲಗ್ನ, ಭರಣಿ ನಕ್ಷತ್ರದಲ್ಲಿ ಈ ಕಲ್ಲನ್ನು ಸ್ಥಾಪನೆ ಮಾಡಲಾಗಿತ್ತು. ಪುಟ್ಟಪ್ಪ ಹಾಗೂ ಗ್ರಾಮಸ್ಥರು ಸೇರಿ ಊರಿನಲ್ಲಿ ಒಂದು ಬಾವಿಯನ್ನು ತೆಗೆದು ಆ ಬಾವಿಯಲ್ಲಿ ಸಿಹಿ ನೀರು ಬಂದ ಮೇಲೆ ಈ ಕಲ್ಲನ್ನು ಸ್ಥಾಪನೆ ಮಾಡಲಾಗಿದೆ ಎಂದು ಪ್ರತೀತಿ ಇದೆ.

ಈ ಕಲ್ಲು ಗ್ರಾಮದ ಒಳಿತಿಗಾಗಿ ಸ್ಥಾಪನೆ ಮಾಡುತ್ತಾರೆ ಎಂಬ ನಂಬಿಕೆಯಿದೆ. ಗ್ರಾಮದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ, ಜನರು ಸುಖ ಸಂತೋಷಗಳಿಂದ ನೆಮ್ಮದಿಯಾಗಿ ಇರಲೆಂದು ಕಲ್ಲನ್ನು ಸ್ಥಾಪನೆ ಮಾಡಿದ್ದರು.

ಯಾರಾದರೂ ಗ್ರಾಮದಲ್ಲಿ ಮರಣ ಹೊಂದಿದರೆ ಈ ಕಲ್ಲಿನ ಬಳಿ ಬಂದು ಪೂಜೆ ಮಾಡಿ ತದನಂತರ ಅಂತ್ಯ ಸಂಸ್ಕಾರ ಮಾಡುವ ಪದ್ಧತಿ ಕೂಡ ಇದೆ. ಎತ್ತಿನ ಬೇಸಾಯ ಮಾಡುವ ರೈತರು ಹೊಲದಲ್ಲಿ ಬೇಸಾಯ ಮುಗಿಸಿಕೊಂಡು ಬಂದು ಊರಿನ ಮುಂದೆ ಬಂದಾಗ ಎತ್ತಿನ ಮೇಲಿರುವ ನೊಗವನ್ನು ಬಿಚ್ಚಿ ಹೆಗಲ ಮೇಲೆ ಹೊತ್ತು ಎತ್ತುಗಳನ್ನು ಕರೆದುಕೊಂಡು ಹೋಗುವ ಪದ್ಧತಿಯು ಈಗಲೂ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈಗ ಮರು ಸ್ಥಾಪನೆ ಮಾಡಿರುವ ಕಲ್ಲಿನ ಅಳತೆ ಕಲ್ಲಿನ ಅಳತೆ 7 .1 ಅಡಿ 5.1 ಇಂಚು ಇದೆ. ತೋಟದ ವಂಶಸ್ಥರು ಹಾಗೂ ಗ್ರಾಮದ ಎಲ್ಲಾ ಸಮುದಾಯದ ಜನರು ಸೇರಿ ಈ ಕಲ್ಲನ್ನು ಮರು ಸ್ಥಾಪನೆ ಮಾಡಿದ್ದಾರೆ.

ಇತ್ತೀಚಿಗೆ ಲಾರಿಯ ಅವಘಡದಿಂದ ಈ ಕಲ್ಲು ಮುರಿದುಬಿದ್ದಿದ್ದು ಈ ಕಾರಣಕ್ಕೆ  ಕಲ್ಲನ್ನು ಮರುಸ್ಥಾಪನೆ ಮಾಡಲಾಯಿತು ಗ್ರಾಮಸ್ಥರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...