Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪದೇ ಪದೇ ಕನ್ನಡ ಕಡೆಗಣನೆ, ಪ್ರವಾಸೋದ್ಯಮ ಇಲಾಖೆಯ ಎಡವಟ್ಟು

Facebook
Twitter
Telegram
WhatsApp

ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಆಯೋಜಿಸಿರುವ ದಕ್ಷಿಣ ಭಾರತದ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡ ಮಾಯವಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದಿ, ಇಂಗ್ಲಿಷ್​ನಲ್ಲಿ ಮಾತ್ರ ಬ್ಯಾನರ್ ಇದ್ದು, ಕನ್ನಡ ಕಾಣಲೇ ಇಲ್ಲ. ಈ ಕುರಿತು ಅಸಮಾಧಾನ ವ್ಯಕ್ತವಾದ ಬಳಿಕ ಎಚ್ಚೆತ್ತು, ಕನ್ನಡದಲ್ಲಿ ಬ್ಯಾನರ್​ ಹಾಕಲಾಯಿತು.

ಇಂದುವಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಕನ್ನಡ ಗೀತೆಗಳ ಲಕ್ಷ ಕಂಠ ಗೀತಗಾಯನದಲ್ಲಿ ಭಾಗಿಯಾದರು. ಆದ್ರೆ ಸರ್ಕಾರದ ಮಹತ್ವದ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಒತ್ತು ಕೊಟ್ಟಿಲ್ಲ

ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜನೆಗೊಂಡ ದಕ್ಷಿಣ ಭಾರತದ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡ ಕಾಣಲಿಲ್ಲ. ವೇದಿಕೆಯಲ್ಲಿ ಕೇವಲ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಬ್ಯಾನರ್ ಇತ್ತು.

ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾಲದ ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದ ವೇದಿಕೆಯ ಬ್ಯಾನರ್​​ನಲ್ಲಿ ಕನ್ನಡ ಬಳಸದ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು,

ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಗೆ ಪ್ರವಾಸೋದ್ಯಮ ಇಲಾಖೆ ಮಹಾನಿದೇರ್ಶಕ ಗಂಜಿ ಕಮಲ ವರ್ಧನ್ ರಾವ್ ಅವರನ್ನು ಕರೆಸಿಕೊಂಡ ಸಚಿವರು, ಕೇಂದ್ರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಕಾರ್ಯಕ್ರಮ ಆದರೂ ಸಹ ವೇದಿಕೆಯಲ್ಲಿ ಕನ್ನಡ ಇಲ್ಲದಿರುವ ಬಗ್ಗೆ ಅಧಿಕಾರಿ ಬಳಿ ಕೇಳಿ, ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ವೇದಿಕೆಯ ಬ್ಯಾನರ್​ನಲ್ಲಿ ಕನ್ನಡ ಭಾಷೆ ಬಳಸುವಂತೆ ತಾಕೀತು ಮಾಡಿದರು. ಈ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆ, ಸಚಿವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚತ್ತ ಇಲಾಖೆ ನಂತರ ಕನ್ನಡದಲ್ಲಿ ಬ್ಯಾನರ್​ ಹಾಕಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಹಾಗೂ ರೇವಣ್ಣರಿಗೆ ನೋಟೀಸ್ ನೀಡಿದ ಎಸ್ಐಟಿ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ವಿಡಿಯೋದಲ್ಲಿ ಗುರುತು ಸಿಕ್ಕವರನ್ನು ಕರೆಸಿ , ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರ ಕೆಸೆರೆಚಾಟದ ನಡುವೆ ತನಿಖೆ ತೀವ್ರಗೊಂಡಿದೆ. ಎಡಿಜಿಪಿ ಬಿಜಯ್

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

error: Content is protected !!