Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್​​ ರೈಟ್ ಹ್ಯಾಂಡ್ ವ್ಯಕ್ತಿಗೆ ಜಾಮೀನು ಮಂಜೂರು!

---Advertisement---

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ  ಅಪಹರಣ ಮತ್ತು ಹತ್ಯೆ ಪ್ರಕರಣದ 11ನೇ ಆರೋಪಿ ಹಾಗೂ 2ನೇ ಆರೋಪಿ ಮತ್ತು ನಟ ದರ್ಶನ್​​​​​ನ  ಬಲಗೈಬಂಟನಂತಿದ್ದ ನಾಗರಾಜ್​​​ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ನಾಗರಾಜ್​​ ಪತ್ನಿಗೆ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಕೊಲೆ ಆರೋಪಿ ನಾಗರಾಜ್​​​​ಗೆ 10 ದಿನ ಮಧ್ಯಂತರ ಜಾಮೀನನ್ನು ಇಂದು ಕೋರ್ಟ್​​​ ಮಂಜೂರು ಮಾಡಿದೆ. ನ್ಯಾಯಾಲಯ ಮಧ್ಯಂತರ ಬೇಲ್ ನೀಡಿದ್ದಲ್ಲದೇ, ಪ್ರತಿನಿತ್ಯ ಬೆಳಗ್ಗೆ 8ಕ್ಕೆ ಮತ್ತು ರಾತ್ರಿ 7ಗಂಟೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸಹಿ ಹಾಕುವಂತೆ ಆರೋಪಿಗೆ ಕೋರ್ಟ್​ ಷರತ್ತು ವಿಧಿಸಿದೆ.

ನಾಗರಾಜ್​​ ನಟ ದರ್ಶನ್​​ ಜೊತೆ ಕಳೆದ 15 ವರ್ಷಗಳಿಂದ ಗುರುತಿಸಿಕೊಂಡಿದ್ದು, ದರ್ಶನ್​​ಗೆ ನಾಗರಾಜ್​​​ ಭಾರೀ ಆಪ್ತ ಹಾಗೂ ಬಲಗೈ ಬಂಟನಂತಿದ್ದ ಎನ್ನಲಾಗಿದೆ.ನಾಗರಾಜ್​​​​, ದರ್ಶನ್​​​​ ಪರಿಚಯಕ್ಕೂ ಮೊದಲು ಪೆಟ್ರೋಲ್ ಬಂಕ್​​​​ನಲ್ಲಿ ಕೆಲಸ ಮಾಡುತ್ತಿದ್ದನಂತೆ. ದರ್ಶನ್​​​​​ನ ಪರಿಚಯವಾದ ನಂತರದ ದಿನಗಳಲ್ಲಿ ನಾಗರಾಜ್, ಡಿಬಾಸ್​​​​​​ನ ವಿಶ್ವಾಸ ಗಳಿಸಿ ರೈಟ್​​​ ಹ್ಯಾಂಡ್​​ ಎಂಬಂತೆ ‘ಡಿ’ ಗ್ಯಾಂಗ್​​​ ಬಳಗದಲ್ಲಿ ಗುರುತಿಸಿಕೊಂಡಿದ್ದ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...