Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸಿದ್ದರಾಮಯ್ಯ ಅವರಿಗೆ ರೇಣುಕಾಚಾರ್ಯ ಸವಾಲು : ಏನದು..?

---Advertisement---

 

ದಾವಣಗೆರೆ: ಸೆಪ್ಟೆಂಬರ್ 1ನೇ ತಾರೀಖು ಧರ್ಮದ ಉಳಿವಿಗಾಗಿ ಧರ್ಮದ ಯುದ್ಧವನ್ನ ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಕರೆಕೊಟ್ಟಿದ್ದೇವೆ. ಈಗಾಗಲೇ ರಾಜ್ಯದ ಉಳಿವಿಗಾಗಿ ರಾಜ್ಯದ ಉದ್ಧಗಲಕ್ಕೆ, ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಪ್ರತಿಭಟನೆಗಳು ಆಗಿದ್ದಾವೆ. ನಮ್ಮ ರಾಜ್ಯಾಧ್ಯಕ್ಷರು ಭೇಟಿ ಕೊಟ್ಟು, ವೀರೇಂದ್ರ ಹೆಗ್ಡೆ ಅವರ ಜೊತೆಗೆ ಚರ್ಚೆ ಮಾಡಿ, ಯಾರೋ ಅಯೋಗ್ಯರು ಈ ಸೆಂಥಿಲ್ ಅಂತ ಲೋಕಸಭಾ ಸದಸ್ಯ. ಆತ ಪ್ಯೂರ್ ಲೆಫ್ಟಿಸ್ಟ್. ಆತ ಮಂಗಳಿಉರು ಡಿಸಿಯಾಗಿದ್ದ. ಆ ಸಂದರ್ಭದಲ್ಲಿಯೇ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಿದ್ದ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇವತ್ತು ನಮ್ಮ ಹಿಂದೂಗಳ ಮಠ ಮಾನ್ಯಗಳ ಮೇಲೆ ಎಲ್ಲೋ ಒಂದು ಕಡೆ ಸರ್ಕಾರ ಟಾರ್ಗೆಟ್ ಮಾಡ್ತಿದೆ. ಕೇವಲ ಗಿರೀಶ್ ಮಟ್ಟಣ್ಣ, ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್ ಇವರೆಲ್ಲ ನೆಪ ಮಾತ್ರ. ಇವರ ಹಿಂದೆ ಷಡ್ಯಂತ್ರ ಬಡೀತಾ ಇದೆ. ವಿದೇಶದಿಂದ ಹಣ ಹರಿದು ಬರ್ತಾ ಇದೆ. ಸಿದ್ದರಾಮಯ್ಯ ಅವರಿಗೆ ಸವಾಲು ಹಾಕ್ತಾ ಇದ್ದೀನಿ. ನೀವೂ ನಿಜವಾಗಲೂ ಹಿಂದೂಗಳಾಗಿದ್ರೆ, ನಿಮ್ಮ ತಂದೆ ತಾಯಿ ಸಿದ್ದರಾಮಯ್ಯ ಎಂಬ ಹೆಸರುಗಳಿಟ್ಟಿದ್ದರೆ, ಡಿಕೆ ಶಿವಕುನಾರ್ ಅವರೆ, ನಿಮ್ಮ ಹೆಸರಲ್ಲಿ ಶಿವ ಇದೆ.

ಎಸ್ಐಟಿ ರಚನೆ ಮಾಡಿದ್ದು ತಪ್ಪು. ಆ ಸೆಂಥಿಲ್ ಇದಾನಲ್ಲ ಆತನ ಹಿಂದೆ ದೊಡ್ಡ ಕೈವಾಡವಿದೆ. ನಮ್ಮ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ಮಾಡ್ತಾ ಇದ್ದಾರೆ. ಹಿಂದೂಗಳೇನು ಕೈಗೆ ಬಳೆ ಹಾಕಿಕೊಂಡಿದ್ಯಾ. ಹುಷಾರ್ ಅಂತ ಹೇಳ್ತೀವಿ. ನಾವೂ ತೊಡೆ ತಟ್ತೀವಿ, ಎಲ್ಲದಕ್ಕೂ ರೆಡಿಯಾಗ್ತೀವಿ. ಮೊದಲು ಅವನನ್ನ ಬಂಧಿಸಿ ಎಂದು ಗರಂ ಆಗಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment