Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ಅಸ್ಥಿ ಪಂಜರದಂತಾದ ಇಂದಿರಾ ಷಾಪಿಂಗ್ ಕಾಂಪ್ಲೆಕ್ಸ್ ಮಳಿಗೆಗಳು

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ನಗರಸಭೆ ಸುಪರ್ದಿಗೆ ಸೇರಿರುವ ಇಂದಿರಾ ಷಾಪಿಂಗ್ ಕಾಂಪ್ಲೆಕ್ಸ್ ನ ಸುಮಾರು 94 ಮಳಿಗೆಗಳು ಶಿಥಿಲಗೊಂಡಿದ್ದು ‌ಮೆಲ್ಚಾವಣಿ ಅಸ್ಥಿಪಂಜರದಂತ್ತಾಗಿದ್ದು ಕೆಲವು ಕಡೆ ಗೋಡೆಗಳು ಬಿರುಕು ಬಿಟ್ಟು ಅಪಾಯ ಸ್ಥಿತಿಯಲ್ಲಿವೆ.

ಇಂತಹ ಅಪಾಯ ಸ್ಥಿತಿಯಲ್ಲಿರುವ ಮಳಿಗೆಗಳನ್ನು ನೆಲಸಮ ಮಾಡಲು ಮುಂದಾಗಿರುವ ಪೌರಾಯುಕ್ತೆ ಡಾ.ನಾಗವೇಣಿ ಅವರ ನಿಟ್ಟ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚಿಗೆ ವ್ಯಕ್ತವಾಗಿದೆ.

ಮಾ.25 ರಂದು ನೂರಾರು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮಳಿಗೆಗಳನ್ನು ತೆರವಿನ ಕಾರ್ಯಾಚರಣೆ ನಡೆಸಲಾಗಿತ್ತು. ಮಳಿಗೆಗಳನ್ನು ಬಾಡಿಗೆ ಪಡೆದವರು ಯಾರೂ ವ್ಯಾಪಾರ ಮಾಡುತ್ತಿಲ್ಲ. ನಗರಸಭೆಯಿಂದ ಕಡಿಮೆಗೆ ಬಾಡಿಗೆ ಪಡೆದು ಬೇರೆಯವರಿಗೆ 30 ರಿಂದ 40 ಸಾವಿರಕ್ಕೆ ಬಾಡಿಗೆ ನೀಡಿರುವ ಆರೋಪಗಳು ಸಹ ಕೇಳಿ ಬಂದಿವೆ.
ಸುಮಾರು 50 ವರ್ಷಗಳ ಹಳೆಯ ಮಳಿಗೆಗಳು ಬೀಳುವ ಸ್ಥಿತಿ ತಲುಪಿವೆ. ದಿನಕ್ಕೆ 10 ರಿಂದ 20 ಸಾವಿರ ವ್ಯಾಪಾರ ಮಾಡಿಕೊಳ್ಳುವ ಲಾಭದಿಂದ ಮಳಿಗೆಗಳ ಖಾಲಿ‌ ಮಾಡಲು ಬಾಡಿಗೆದಾರರು ಒಪ್ಪುತ್ತಿಲ್ಲ. ನಗರಸಭೆಯಿಂದ ನೋಟಿಸ್ ಕೊಟ್ಟ ತಕ್ಷಣವೇ ನ್ಯಾಯಾಲಯಕ್ಕೆ ಹೋಗುವ ಪರಿಪಾಟು ಬೆಳೆಸಿಕೊಂಡಿದ್ದಾರೆ.

ಸುಮಾರು 11 ವರ್ಷಗಳಿಂದ ಕೋರ್ಟ್ ನಡೆಯುತ್ತಿದೆ. ಈಗಾಗಲೇ ಮಳಿಗೆಗಳ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಂಡಿರುವ ನ್ಯಾಯಾಲಯ, ಷಾಪಿಂಗ್ ಕಾಂಪ್ಲೆಕ್ಸ್. ಗಳನ್ನ ಕೂಡಲೇ ಖಾಲಿ ಮಾಡಿಸಿ ನೆಲಸಮಗೊಳಿಸಲು ಕ್ರಮ ವಹಿಸುವಂತೆ ನಗರಸಭಾ ಆಡಳಿತಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭ ಮಾಡಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now