Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

RCB ಹೆಸರು ಬದಲಾವಣೆ : ಕೋಣಗಳ ಮೂಲಕ ರಿಷಭ್ ಶೆಟ್ಟಿ ಹೇಳಿದ್ದೇನು..?

---Advertisement---

 

 

ಐಪಿಎಲ್ ಫೀವರ್ ಈಗಾಗಲೇ ಶುರುವಾಗಿದ್ದು, ಮಾರ್ಚ್ 22ಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಮೊದಲ ಪಂದ್ಯ ಆರ್ಸಿಬಿಯಿಂದಾನೇ ಆರಂಭವಾಗಲಿದೆ. ಆರ್ಸಿಬಿ ಫ್ಯಾನ್ಸ್ ಅಂತು ಈ ಬಾರಿಯಾದರೂ ಕಪ್ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಲವು ವರ್ಷಗಳಿಂದ ಆರ್ ಸಿಬ ಫ್ಯಾನ್ಸ್ ಜೋಶ್ ನಿಂದ ಹೇಳಿದ್ದೆ ಬಂತು, ಈ ಸಲ ಕಪ್ ನಮ್ಮದೇ ಅಂತ. ಆದರೆ ಆ ಕಪ್ ಎತ್ತುವ ಅದೃಷ್ಟ ಅದ್ಯಾಕೋ ಆರ್ಸಿಬಿಗೆ ದೊರಕುತ್ತಿಲ್ಲ.

ಎಲ್ಲಾ ಮ್ಯಾಚ್ ಗಳನ್ನು ಚೆನ್ನಾಗಿ ಆಡಿ, ಇನ್ನೇನು ಫೈನಲ್ ತಲುಪಬೇಕು ಎನ್ನುವಷ್ಟರಲ್ಲಿ ಕಪ್‌ ಮಿಸ್ ಆಗುತ್ತಿದೆ. ಇದಕ್ಕೆಲ್ಲಾ ಕಾರಣ ಆ ಹೆಸರು ಎಂದೇ ಹೇಳಲಾಗುತ್ತಿದೆ.    ಆರ್ ಬಿ ಯಲ್ಲಿರುವ ಬೆಂಗಳೂರು ಪದದಿಂದಾನೇ ಕಪ್ ಗೆಲ್ಲುತ್ತಿಲ್ಲ ಎಂಬ ಆರೋಪವಿದೆ. ಹೀಗಾಗಿ ಆ ಪದವನ್ನು ತೆಗೆಯಲು ಅಭಿಮಾನಿಗಳ ಒತ್ತಡವೂ ಇದೆ. ಇದೀಗ ಪಂದ್ಯಗಳ ಆರಂಭಕ್ಕೂ ಮೊದಲೇ ಆರ್ ಸಿಬ ಹೆಸರು ಬದಲಾವಣೆಗೆ ಮುಂದಾಗಿದೆ.

ಹೆಸರು ಬದಲಾವಣೆಗೆ ರಿಷಭ್ ಶೆಟ್ಟಿಯವರ ಒಂದು ವಿಡಿಯೋ ಬಳಸಿಕೊಂಡು ಹೆಸರು ಬದಲಾವಣೆಯ ಮಾಹಿತಿಯನ್ನು ತಿಳಿಸಲಾಗಿದೆ. ಮೂರು ಕೋಣಗಳ‌ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬರೆದಿದ್ದು, ಅದರಲ್ಲಿ Bengaluru ಎಂಬ ಕೋಣವನ್ನು ರಿಷಭ್ ಶೆಟ್ಟಿ ರಿಜೆಕ್ಟ್ ಮಾಡಿದ್ದಾರೆ. ಆಮೇಲೆ ತಿಳೀತಲ್ಲ ಯಾಕೆ ಅಂತ ಎಂಬ ಡೈಲಾಗ್ ಹೊಡೆದಿದ್ದಾರೆ. ಇದು ಎಲ್ಲರಿಗೂ ಅರ್ಥವಾಗಿದೆ. ಹಾಗೇ ಮಾರ್ಚ್19ಕ್ಕೆ ಹೆಸರು ಬದಲಾವಣೆಯ ಅನ್ ಬಾಕ್ಸ್ ಕೂಡ ಮಾಡಲಾಗುತ್ತಿದೆ.

ಆರ್ ಬಿ ಈ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜೊತೆಗೆ Bengaluru ಎಂದು ಇರುವ ಹೆಸರನ್ನು Banglore ಎಂದು ಬದಲಾಯಿಸಲಿದೆ. ಹೆಸರು ಬದಲಾದ ಮೇಲಾದ್ರು ನಮ್ಮವರು ಕಪ್ ಗೆಲ್ತಾರಾ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...