Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉತ್ತರ ಕರ್ನಾಟಕಕ್ಕೆ ರೈಲು ಸೌಲಭ್ಯ ವಿಸ್ತರಣೆ: ಮೂರು ರೈಲುಗಳು ಖಾಯಂ, ಟಿಕೆಟ್ ದರದಲ್ಲಿ ಭಾರೀ ಇಳಿಕೆ

---Advertisement---

ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರ ಬಹುಕಾಲದ ಕನಸು ಇದೀಗ ನನಸಾಗಿದ್ದು, ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂರು ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಖಾಯಂ ಸೇವೆಗಳಾಗಿ ಪರಿವರ್ತಿಸಲು ನಿರ್ಧರಿಸಿದೆ. ಈ ಕ್ರಮದಿಂದ ರಾಜ್ಯದ ಎಂಟು ಜಿಲ್ಲೆಗಳ ಪ್ರಯಾಣಿಕರಿಗೆ ನೇರ ಪ್ರಯೋಜನವಾಗಲಿದೆ.ಈ ಹಿಂದೆ ‘ವಿಶೇಷ ರೈಲು’ಗಳಾಗಿ ಸಂಚರಿಸುತ್ತಿದ್ದ ಈ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಖಾಯಂ ರೈಲುಗಳಾಗಿ ಘೋಷಿಸಿರುವುದರಿಂದ ಆ ಹೆಚ್ಚುವರಿ ಶುಲ್ಕ ರದ್ದಾಗಿದ್ದು, ಸ್ಲೀಪರ್ ಮತ್ತು ಎಸಿ ಬೋಗಿಗಳ ಟಿಕೆಟ್ ದರದಲ್ಲಿ ಶೇ. 25ರಿಂದ 30ರವರೆಗೆ ಇಳಿಕೆಯಾಗಲಿದೆ.

ಈ ರೈಲುಗಳ ಮೂಲಕ ಬೆಳಗಾವಿ, ಧಾರವಾಡ (ಹುಬ್ಬಳ್ಳಿ), ಗದಗ, ಕೊಪ್ಪಳ, ವಿಜಯನಗರ (ಹೊಸಪೇಟೆ), ಬಳ್ಳಾರಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಜನರಿಗೆ ಹೈದರಾಬಾದ್ ಹಾಗೂ ಸಿಕಂದರಾಬಾದ್ ನಗರಗಳಿಗೆ ಸಂಪರ್ಕ ಸುಲಭವಾಗಲಿದೆ.
ರೈಲುಗಳ ವೇಳಾಪಟ್ಟಿ:
17071: ಹೈದರಾಬಾದ್ – ಬೆಳಗಾವಿ (ಗುರುವಾರ ಸಂಜೆ 4:30, ಶುಕ್ರವಾರ ಬೆಳಗ್ಗೆ 10:30)
17072: ಬೆಳಗಾವಿ – ಹೈದರಾಬಾದ್ (ಶುಕ್ರವಾರ ಮಧ್ಯಾಹ್ನ 1:00, ಶನಿವಾರ ಬೆಳಗ್ಗೆ 7:00)
17073: ಸಿಕಂದರಾಬಾದ್ – ಬೆಳಗಾವಿ (ಸೋಮವಾರ ಸಂಜೆ 4:30, ಮಂಗಳವಾರ ಬೆಳಗ್ಗೆ 10:30)
17074: ಬೆಳಗಾವಿ – ಸಿಕಂದರಾಬಾದ್ (ಮಂಗಳವಾರ ಮಧ್ಯಾಹ್ನ 1:00, ಬುಧವಾರ ಬೆಳಗ್ಗೆ 7:15)
17075: ಚೇರ್ಲಪಲ್ಲಿ – ಬೆಳಗಾವಿ (ಶನಿವಾರ ಸಂಜೆ 4:00, ಭಾನುವಾರ ಬೆಳಗ್ಗೆ 10:30)
17076: ಬೆಳಗಾವಿ – ಚೇರ್ಲಪಲ್ಲಿ (ಭಾನುವಾರ ಮಧ್ಯಾಹ್ನ 1:00, ಸೋಮವಾರ ಬೆಳಗ್ಗೆ 8:45)

ದೀರ್ಘಕಾಲದ ಬೇಡಿಕೆಯಾಗಿದ್ದ ಈ ರೈಲು ಸೇವೆಗಳನ್ನು ಖಾಯಂ ಮಾಡಿರುವುದರಿಂದ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಸುಗಮ ಹಾಗೂ ಆರಾಮದಾಯಕ ಪ್ರಯಾಣ ಸಾಧ್ಯವಾಗಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now