Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ ಅಖಾಡದಲ್ಲಿ ಜಮೀರ್ : ತಮ್ಮ ಸಮುದಾಯದವರಿಗೆ ಹೇಳಿದ್ದೇನು..?

---Advertisement---

ಸುದ್ದಿಒನ್, ದಾವಣಗೆರೆ, ಏಪ್ರಿಲ್. 05 : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ವಿಚಾರ ಬಹಳಷ್ಟು ಕುತೂಹಲಕಾರಿಯಾಗಿತ್ತು. ಯಾಕಂದ್ರೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ ಅಂತ ಬಂಡಾಯವೆದ್ದಿದ್ದರು. ಬಂಡಾಯ ಶಮನಕ್ಕೆ ಹಲವರು ಶ್ರಮಿಸಿದ್ದರು. ಸಚಿವ ಜಮೀರ್ ಅಹ್ಮದ್ ಅವರು ಬಂದ್ರೆ ಇಲ್ಲಿನ ಅಲ್ಪಸಂಖ್ಯಾತರ ಕೋಪ ತಣ್ಣಗಾಗಬಹುದು ಅಂತಾನೇ ಕಾಯ್ತಾ ಇದ್ದರು. ಆದರೆ ಜಮೀರ್ ಅವರಿಗೆ ಕೇರಳ ಜವಾಬ್ದಾರಿ ಜಾಸ್ತಿಯಾಗಿದ್ದ ಕಾರಣಕ್ಕೆ ದಾವಣಗೆರೆಗೆ ಬರುವ ಸಾಹಸ ಮಾಡಿರಲಿಲ್ಲ‌. ಕಡೆಗೂ ಇಂದು ಜಮೀರ್ ಅಹ್ಮದ್ ದಾವಣಗೆರೆಗೆ ಬಂದು, ಮಲ್ಲಣ್ಣ ಮನೆಯಲ್ಲಿ ಊಟ ಮಾಡಿ, ನಮ್ಮ ನಡುವೆ ಅಂತದ್ದೇನು ಇಲ್ಲ ಎಂಬುದನ್ನ ತಿಳಿಸಿದ್ದಾರೆ.

ಮಲ್ಲಿಕಾರ್ಜುನ್ ಅವರ‌ ಮನೆಯಲ್ಲಿ ಊಟ ಮಾಡಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದು, ಕೇರಳ ಸ್ಟಾರ್ ಕ್ಯಾಂಪೇನರ್ ಹಿನ್ನೆಲೆ ಕೇರಳ ಹೋಗಿದ್ದೆ. ನಾಮಪತ್ರ ಸಲ್ಲಿಕೆ ದಿನ ಸದನದಲ್ಲಿ ಪ್ರಶ್ನೆಯಿತ್ತು. ಏಪ್ರಿಲ್ 5ಕ್ಕೆ ಪ್ರಚಾರಕ್ಕೆ ಬರ್ತೀನಿ ಎಂದು ಹೇಳಿದ್ದೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸಬೇಕು.

MLC ಜಬ್ಬರ್ ಪ್ರಚಾರಕ್ಕೆ ಬರದಿದ್ದರ ಬಗ್ಗೆ ಮಾತನಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ನೂರಕ್ಕೆ ನೂರು ಗೆಲ್ಲುತ್ತಾರೆ. ನಾಳೆ ಬಾಗಲಕೋಟೆಗೆ ಪ್ರಚಾರಕ್ಕೆ ಹೋಗುತ್ತೇನೆ. ಮತ್ತೆ ಬಂದು ಹೋಗಿ ಎಂದರೆ ನಾನು ಬರುತ್ತೇನೆ. ಕಳೆದ ಚುನಾವಣೆಯಲ್ಲೂ ಪಕ್ಷೇತರ, ಇತರೆ ಅಭ್ಯರ್ಥಿಗಳಿದ್ದರು. ದಾವಣಗೆರೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಯಾರು ಬರಲಿ, ಯಾರು ಬಿಡಲಿ ಕಾಂಗ್ರೆಸ್ ಗೆಲ್ಲುತ್ತದೆ. ನಾವು ಅಸಮಾಧಾನ ಸರಿಪಡಿಸುತ್ತೇವೆ ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ. ಈ ಮೂಲಕ ಯಾವುದೇ ಮನಸ್ತಾಪ ಇಲ್ಲ ಎಂಬುದನ್ನ ಸಾರಿದಂತೆ ಆಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now