Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಜಾತೀಯತೆ, ಮೂಢನಂಬಿಕೆ, ಕಂದಾಚಾರದ ವಿರುದ್ದ ಪ್ರಬಲವಾದ ಧ್ವನಿ ಎತ್ತಿದವರು ರಸ ಋಷಿ ಕುವೆಂಪು : ಜೆ.ಯಾದವರೆಡ್ಡಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 29 : ಸಾಹಿತ್ಯವನ್ನು ಅಸ್ತ್ರವಾಗಿಟ್ಟುಕೊಂಡು ಜಾತೀಯತೆ, ಮೂಢನಂಬಿಕೆ, ಕಂದಾಚಾರದ ವಿರುದ್ದ ಪ್ರಬಲವಾದ ಧ್ವನಿ ಎತ್ತಿದವರು ರಸ ಋಷಿ ಕುವೆಂಪು ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಜೆ.ಯಾದವರೆಡ್ಡಿ ಬಣ್ಣಿಸಿದರು.

ಹಳೆ ಕಲ್ಲಹಳ್ಳಿಯ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ನಡೆದ ಕುವೆಂಪು ಜನ್ಮದಿನಾಚರಣೆಯಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಶ್ರೇಷ್ಟ ಸಾಹಿತಿ, ಮಹಾನ್ ಪ್ರತಿಭೆಯುಳ್ಳ ದಾರ್ಶನಿಕರಾಗಿದ್ದ ಕುವೆಂಪುರವರು ಕೊಟ್ಟಷ್ಟು ಕೊಡುಗೆ ಬೇರೆ ಯಾವ ಸಾಹಿತಿಯೂ ನೀಡಿಲ್ಲ. ಅವರ ಆಲೋಚನೆ ಕ್ರಮವೆ ಬೇರೆಯಾಗಿತ್ತು. ಎಲ್ಲರೂ ವಿಶ್ವಮಾನವರಾಗಬೇಕೆಂಬ ಸಂದೇಶವನ್ನು ನೀಡಿದ್ದರು. ಜಾತಿ, ಧರ್ಮ, ಲಿಂಗದ ಹೆಸರಿನಲ್ಲಿ ರಕ್ತಪಾತವಾಗುತ್ತಿದೆ. ಪ್ರಖರ, ವೈಚಾರಿಕ ಸಾಹಿತಿಯಾಗಿದ್ದ ಕುವೆಂಪುರವರು ಅವಮಾನ, ಕಷ್ಟಗಳನ್ನು ಅನುಭವಿಸಿದ್ದಾರೆ. ಪ್ರಾಣಿ, ಪಕ್ಷಿ, ಪರಿಸರ, ಸಕಲ ಜೀವರಾಶಿಗಳ ಬಗ್ಗೆ ಅವರಲ್ಲಿ ಕಾಳಜಿಯಿತ್ತು. ಕನ್ನಡವನ್ನು ಕಲಿಯಿರಿ ಬೇರೆ ಭಾಷೆ ಬಗ್ಗೆ ಮಡಿವಂತಿಕೆ ಬೇಡ ಎನ್ನುತ್ತಿದ್ದರು. ಪ್ರೀತಿ, ಕರುಣೆಯೇ ನಿಜವಾದ ಧರ್ಮ ಎನ್ನುವ ಸಂದೇಶವನ್ನು ಸಾರಿದ ವಿಶ್ವಮಾನವ ಎಂದು ಹೇಳಿದರು. ಇಂದಿನ ಸಮಾಜಕ್ಕೆ ವಿಶ್ವಮಾನವ ಪ್ರಸ್ತುತ. ಮಾನವ ಸಂಬಂಧ ಗಟ್ಟಿಯಾಗಬೇಕಾದರೆ ಚಿಕ್ಕಂದಿನಿಂದಲೆ ಮಕ್ಕಳು ಕುವೆಂಪುರವರನ್ನು ಓದಿಕೊಳ್ಳಬೇಕೆಂದು ತಿಳಿಸಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ ಮಾತನಾಡಿ ಧರ್ಮ ಜಾತಿ ಎತ್ತಿಕಟ್ಟುವವರನ್ನು ಧಿಕ್ಕರಿಸುತ್ತಿದ್ದ ಕುವೆಂಪುರವರಲ್ಲಿ ವೈಚಾರಿಕತೆಯಿತ್ತು. ಮೌಢ್ಯ, ಕಂದಾಚಾರ, ಕಟ್ಟುಪಾಡುಗಳ ವಿರೋಧಿಯಾಗಿದ್ದರು. ವೈಜ್ಞಾನಿಕ ಮನೋಭಾವವುಳ್ಳವರಾಗಿದ್ದರಿಂದ ಪ್ರಖರವಾಗಿ ಜನರ ಮನಸ್ಸನ್ನು ಮುಟ್ಟಿದ್ದಾರೆ. ಪರಿಸರ ಪ್ರಜ್ಞೆಯುಳ್ಳವರಾಗಿದ್ದ ಅವರು ನಡೆ-ನುಡಿಯೆ ಧರ್ಮ ಎಂದಿದ್ದರು. ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರ ಬನ್ನಿ ಎಂಬ ಸಂದೇಶ ನೀಡಿದವರು. ವಿಜ್ಞಾನ-ತಂತ್ರಜ್ಞಾನ ಬಳಸುತ್ತಿದ್ದೇವೆ. ಆದರೆ ವೈಜ್ಞಾನಿಕ ಚಿಂತನೆಯಿಲ್ಲ. ಕುವೆಂಪು ಸಾಹಿತ್ಯ ಓದಿ ಎಂದು ಮಕ್ಕಳಿಗೆ ಕರೆ ನೀಡಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕೆ.ರಾಜ್‍ಕುಮಾರ್ ಮಾತನಾಡುತ್ತ ಕುವೆಂಪುರವರ ಆಸೆಯಂತೆ ಎಲ್ಲರೂ ವಿಶ್ವಮಾನವರಾಗಲು ಪ್ರಯತ್ನ ಮಾಡೋಣ. ಅದಕ್ಕೆ ಮೊದಲು ಶಿಕ್ಷಣವಂತರಾಗಬೇಕು. ವೈಜ್ಞಾನಿಕ, ವೈಚಾರಿಕತೆಯನ್ನು ಬೆಳೆಸಿಕೊಂಡಾಗ ವಿಶ್ವಮಾನವನ ಜನ್ಮದಿನಾಚರಣೆ ಆಚರಿಸಿದ್ದಕ್ಕೂ ನಿಜವಾದ ಅರ್ಥ ಬರುತ್ತದೆ. ಮೊಬೈಲ್‍ಗಳಿಂದ ಸಾಧ್ಯವಾದಷ್ಟು ದೂರವಿದ್ದು, ಕುವೆಂಪುರವರ ವಿಚಾರಗಳನ್ನು ಓದಿಕೊಳ್ಳಿ ಎಂದು ಹೇಳಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಸಹ ಕಾರ್ಯದರ್ಶಿ ನವೀನ್ ಪಿ.ಆಚಾರ್ ಮಾತನಾಡಿ ಜಾತಿ ಗಡಿಯನ್ನು ವಿರೋಧಿಸುತ್ತಿದ್ದ ಕುವೆಂಪುರವರು ಮಾನವ ಕುಲವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಮನುಜ ಮತ ವಿಶ್ವಪಥ ಎನ್ನುವ ಸಂದೇಶ ಅವರದು ಎಂದರು.

ಬಾಪೂಜಿ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಜಾತಿ, ಧರ್ಮ, ಕೋಮುಗಲಭೆಗಳು ಜಾಸ್ತಿಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಕುವೆಂಪುರವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟಿಸಬೇಕಿದೆ. ಬುದ್ದನ ವಿಚಾರಧಾರೆಗಳು ವಿದೇಶಗಳಲ್ಲಿ ಮೊಳಗುತ್ತಿವೆ. ನಮ್ಮ ದೇಶದಲ್ಲಿ ಏಕಿಲ್ಲ. ಇದಕ್ಕೆ ಬ್ರಾಹ್ಮಣ್ಯ ಕಾರಣ. ಸಾಹಿತ್ಯ, ವೈಜ್ಞಾನಿಕ, ಜೀವಪರ ವಿಚಾರಗಳನ್ನು ಮಕ್ಕಳಲ್ಲಿ ತುಂಬಬೇಕಿದೆ ಎಂದು ಹೇಳಿದರು.

ದೇಶಕ್ಕೆ ಗಡಿ ಹಾಕಿರಬಹುದು. ಆದರೆ ಮನಸ್ಸುಗಳಿಗೆ ಗಡಿ ಹಾಕಿ ಮಾನವೀಯ ಮೌಲ್ಯಗಳನ್ನು ತಲೆಕೆಳಗೆ ಮಾಡಲಾಗಿದೆ. ಸಾಮಾಜಿಕ ಅಸಮತೋಲನ, ಜಾತಿ ವ್ಯವಸ್ಥೆಯನ್ನು ಕುವೆಂಪುರವರು ಸಾಹಿತ್ಯದ ಮೂಲಕ ವಿರೋಧಿಸುತ್ತಿದ್ದರು. ಹಾಗಾಗಿ ಅವರ ವಿಚಾರಧಾರೆಗಳನ್ನು ಹಿಂಬಾಲಿಸಬೇಕಿದೆ ಎಂದು ನುಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಗಿಣಿ, ಶಿಕ್ಷಕರುಗಳಾದ ಮಲ್ಲಿಕಾರ್ಜುನ್, ದಿನೇಶ್, ಶಿಕ್ಷಕಿಯರುಗಳಾದ ಲಾವಣ್ಯ, ಮಮತ, ಸವಿತ ಇವರುಗಳು ಕುವೆಂಪು ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...