ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ದ ರೇಣುಕಾಚಾರ್ಯ ಗರಂ ಆಗಿದ್ದಾರೆ. ರಾಷ್ಟ್ರಗೀತೆಗೆ ಪರ್ಯಾಯವಾಗಿ ಅಂತ ಹೇಳಿಲ್ಲ. ಇವತ್ತು ವಂದೇ ಮಾತರಂ ಗೀತೆಗೆ 150 ವರ್ಷದ ಇತಿಹಾಸವಿದೆ. ಹಾಗಾಗಿ ರಾಷ್ಟ್ರ ಗೀತೆಗೆ ಯಾವ ರೀತಿಯಾಗಿ ಗೌರವ ಸಮರ್ಪಣೆ ಮಾಡ್ತೀವಿ, ಅದೇ ರೀತಿ ವಂದೇ ಮಾತರಂಗೂ ಗೌರವ ಕೊಡಬೇಕು ಅಂತ ನಮ್ಮ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಆದರೆ ಅದನ್ನ ಬೇರೆ ರೀತಿ ನೋಡಬಾರದು ಎಂಬ ಮಾತನ್ನ ಹೇಳಿದ್ದಾರೆ.
ಇದೆ ವೇಳೆ ಕಾಂಗ್ರೆಸ್ ಸರ್ಕಾರದ ಕುರ್ಚಿ ಗುದ್ದಾಟದ ಬಗ್ಗೆ ಮಾತನ್ನಾಡುತ್ತಾ, ಸಿದ್ದರಾಮಯ್ಯ ಅವರು 2013 ರಿಂದ ಆಗಿದ್ದಂತ ಮುಖ್ಯಮಂತ್ರಿಯನ್ನು ನೋಡಿದ್ದೇವೆ. ಈ ಬಾರಿ 2023ರಲ್ಲಿ ಯಾವುದೋ ಕಾರಣಕ್ಕೆ ನಮಗೆ ಸೋಲಾಯ್ತು. ಜನಾದೇಶವನ್ನು ಒಪ್ಪಿಕೊಂಡಿದ್ದೇವೆ. ಆದರೆ ಸಿದ್ದರಾಮಯ್ಯ ಅವರಿಗೆ ಅಂದಿನ ಗಟ್ಟಿತನ ಇಲ್ಲ. ಕುರ್ಚಿಗೋಸ್ಕರ, ನಾನು ಈಗ ಕೇಳ್ತೀನಿ ಸಿದ್ದರಾಮಯ್ಯ ಅವರೇ ಮೋದಿಜೀ ಬಗ್ಗೆ ಮಾತಾಡ್ತೀರಲ್ಲ, ಯಾವ ರಾಹುಲ್ ಗಾಂಧಿ, ನಿಮ್ಮ ಬಲಗೈ ಬಂಟ ರಾಜಣ್ಣನನ್ನ ಕಿತ್ತೆಸೆಯಿರಿ ಅಂದಾಗ, ಕುರ್ಚಿ ಉಳಿಸಿಕೊಳ್ಳೋಕೆ ರಾಜಣ್ಣರನ್ನ ಕಿತ್ತೆಸೆದಿದ್ದೀರಿ.
ಎಲ್ಲಿದೆ ನಿಮ್ಮಲ್ಲಿ ತಾಕತ್ತು, ಶೌರ್ಯ. ಇವತ್ತು ಕಾಂಗ್ರೆಸ್ ಒಡೆದ ಮನೆಯಾಗಿದೆ. ಒಂದು ಕಡೆ ಡಿಕೆ ಶಿವಕುಮಾರ್. ಅವರ ಇಲಾಖಾ ಬಜೆಟ್ ಪೂರ್ವ ಸಭೆ ನಡೆಯುತ್ತಾ ಇದೆ. ಅದರ ಸಭೆಯಲ್ಲಿಯೇ ಪಾಲ್ಗೊಳ್ಳದಂತೆ ಹೋಗಿದ್ದೀರಿ. ಅಧಿಕಾರಿಗಳು ಆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಒಂದು ಕಡೆ ಶಾಸಕರು ಕಚ್ಚಾಡುತ್ತಿದ್ದಾರೆ. ಅವರ ಮುಖ್ಯಮಂತ್ರಿ ಬದಲಾವಣೆ ಅನ್ನೋದು ನಮಗೆ ಸಂಬಂಧ ಇಲ್ಲದೆ ಇರುವ ವಿಚಾರ. ಬ್ರಹ್ಮಾಂಡ ಭ್ರಷ್ಟಾಚಾರ ಈ ಸರ್ಕಾರದಲ್ಲಿ ನಡೀತಾ ಇದೆ ಎಂದು ರೇಣುಕಾಚಾರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.










