Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್ ನಲ್ಲಿ ಮಿನುಗಲಿದೆ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ  ‘ ರುಗ್ನ ‘

Facebook
Twitter
Telegram
WhatsApp

ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಚಿತ್ರ  ರುಗ್ನ. ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಸಧ್ಯ ಚಿತ್ರತಂಡ ಮತ್ತೊಂದು ಖುಷಿಯಲ್ಲಿ ಮುಳುಗಿದೆ. ಹೌದು   ಕಳೆದ ಏಪ್ರಿಲ್ ನಲ್ಲಿ ಸೆಟ್ಟೇರಿ ಚಿತ್ರೀಕರಣಕ್ಕೆ ಹೊರಟಿದ್ದ ಚಿತ್ರತಂಡ ಬೆಂಗಳೂರು, ಮಂಗಳೂರು, ಪಡುಬಿದ್ರೆಯಲ್ಲಿ ಯಶಸ್ವಿ 28 ದಿನಗಳ ಚಿತ್ರೀಕರಣ ಮುಗಿಸಿಕೊಂಡು,  ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಮುಗಿಸಿಕೊಂಡಿದೆ.

ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡು ಇದೇ ಮೇ ತಿಂಗಳಲ್ಲಿ ಸಿನಿಮಾವನ್ನ ತೆರೆ ಮೇಲೆ ತರಲು ಚಿತ್ರತಂಡ  ಸಜ್ಜಾಗುತ್ತಿದೆ.  ಈ ನಡುವೆ ಚಿತ್ರತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು ಏನಿರಬಹುದು ಅಂತ ಆಶ್ಚರ್ಯ ಆಗಬಹುದು ಅಲ್ವಾ?. ಅದೇನಪ್ಪ ಅಂದ್ರೆ  ರುಗ್ನ  ಸಿನೆಮಾ ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ  ಆಯ್ಕೆಯಾಗಿದೆ. ಬೇರೆ ಬೇರೆ ದೇಶದ ಸಿನಿಮಾಗಳು ತೆರೆ ಕಾಣುವ, ನುರಿತ ಸಿನಿಮಾ ತಜ್ಞರು ಇರುವ ವೇದಿಕೆಯಲ್ಲಿ ತಮ್ಮ  ಸಿನಿಮಾ ಕೂಡ ಆಯ್ಕೆ ಆಗಿ ತೆರೆ ಕಾಣುತ್ತಿರುವುದು ಚಿತ್ರತಂಡದ ಸಂತಸಕ್ಕೆ ಪಾರವೇ ಇಲ್ಲವಾಗಿದೆ ಅಂತಾರೆ  ಚಿತ್ರದ ನಿರ್ಮಾಪಕ ವೆಂಕಟ್ ಭಾರಧ್ವಜ್ .

ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವೆಂಕಟ್ ಭಾರಧ್ವಜ್ ರುಗ್ನ ಚಿತ್ರಕ್ಕೆ  ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಅವರ ಅಮೃತ ಫಿಲ್ಮಂ ಸೆಂಟರ್ ಬ್ಯಾನರ್ ನಡಿ ನಿರ್ಮಾಣವಾಗಿ ತೆರೆಗೆ ಬರಲು ಸಜ್ಜಾಗಿರೋ  ಈ ಚಿತ್ರದ ಟೈಟಲ್  ನ ಅರ್ಥ  ಏನು ಅಂದ್ರೆ   ಇದೊಂದು ಹಳೆಯ ಸಂಸ್ಕೃತ ಪದ. ಇದರರ್ಥ ಒಡೆದು ಹೋಗಿರೋದು ಎಂದು. ಚಿತ್ರದ ಕಥಾಹಂದರಕ್ಕೆ ಸೂಕ್ತ ಎನಿಸಿದ್ದರಿಂದ ಇದನ್ನೇ ಟೈಟಲ್ ಆಗಿ ಇಡಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರು.

ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಿ ಬದಲಾವಣೆಗೆ ಹಾತೊರೆಯುವ ವ್ಯಕ್ತಿಯೊಬ್ಬನ ಜೀವನದ ಸುತ್ತ ತೆರೆದುಕೊಳ್ಳುವ ಕಥಾ ಹಂದರದೊಂದಿಗೆ,   ಥ್ರಿಲ್ ನೀಡುತ್ತ, ಕೌತುಕ ಮೂಡಿಸುತ್ತ ಒಂದೊಳ್ಳೆ ಮನರಂಜನೆ ನೀಡುವ ಕಥೆ ಚಿತ್ರದಲ್ಲಿದೆಯಂತೆ. ‘ರುಗ್ನ’ ಚಿತ್ರಕ್ಕೆ  ಸುನೀಲ್ ಎಸ್ ಭಾರಧ್ವಜ್ ನಿರ್ದೇಶನ ಮಾಡ್ತಿದ್ದು, ಈ ಸಿನೆಮಾದ ಮೂಲಕ  ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ.  ಇವರಿಗೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಾಥ್ ನೀಡಿದ್ದು ಸುಹಾಸ್ ಕೆಎಸ್ ರಾವ್.  ಮೊದಲೇ ಹೇಳಿದಂತೆ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಅದಕ್ಕೆ ಬೇಕಾದ ಎಲ್ಲಾ ರೀತಿಯ ಎಲಿಮೆಂಟ್ ಚಿತ್ರದಲ್ಲಿದ್ದು, ತಾಂತ್ರಿಕವಾಗಿಯೂ ಅಷ್ಟೇ ಸ್ಟ್ರಾಂಗ್ ಆಗಿದ್ದು,  ಸಿಂಕ್ ಸೌಂಡ್ ಬಳಿಸಿಕೊಂಡಿರೋದು ಚಿತ್ರದ ಮತ್ತೊಂದು ಸ್ಪೆಷಾಲಿಟಿ ಅಂದ್ರೆ ತಪ್ಪಾಗಲ್ಲ.

ತಾಂತ್ರಿಕವಾಗಿ ಒತ್ತು ನೀಡಿ ಶ್ರೀಮಂತವಾಗಿ ಮೂಡಿ ಬಂದಿರುವ  ರುಗ್ನ ಕ್ಕೆ ನಿರ್ದೇಶಕ ಸುನೀಲ್ ಎಸ್ ಭಾರಧ್ವಜ್ ಸಂಕಲನ ಜವಾಬ್ದಾರಿ ಹೊತ್ತುಕೊಂಡರೆ,  ನಚಿಕೇತ್ ಶರ್ಮಾ ಸಂಗೀತ ನಿರ್ದೇಶನ, ಸಂಜಯ್ ಎಲ್ ಚೆನ್ನಪ್ಪ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಉದಯ್ ಆಚಾರ್, ಸುಪ್ರಿತ ಸತ್ಯನಾರಾಯಣ್, ಸುಗ್ರೀವ್ ಗೌಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸ್ಮಿತ ಕುಲ್ಕರ್ಣಿ, ಬಾಲ ರಾಜ್ವಾಡಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದ ತಾರಬಳಗದಲ್ಲಿದ್ದಾರೆ. ಚಿತ್ರ್ಕಕೆ ವೆಂಕಟ್ ಭಾರಧ್ವಜ್ ಜೊತೆಗೆ ಮನಿಮಾರನ್ ಸುಬ್ರಮಣಿಯನ್ ಕೂಡ ಬಂಡವಾಳ ಹೂಡಿ ಸಾಥ್ ನೀಡಿದ್ದಾರೆ. ರುಗ್ನ ಸಿನೆಮಾ ತಂಡ ಚಿತ್ರದ ರಿಲೀಸ್ ಖುಷಿಯ ಜೊತೆಗೆ ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್ ನಲ್ಲಿ ತೆರೆಯ ಮೇಲೆ ರಾರಾಜಿಸಲು ರೆಡಿಯಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಯಶೋಧಮ್ಮ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 06  : ಶ್ರೀಮತಿ ಯಶೋಧಮ್ಮ(77) ಬುರುಜನಹಟ್ಟಿಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾದರು. ಮೃತರು ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಬಿ.ಎಲ್. ಮಲ್ಲಿಕಾರ್ಜುನ್ ಸೇರಿದಂತೆ ಇಬ್ಬರು ಪುತ್ರರು ಇಬ್ಬರು ಪುತ್ರಿಯರು

ಬೆಳೆ ಸಮೀಕ್ಷೆ ವ್ಯತ್ಯಾಸ: ಮರು ಪರಿಶೀಲಿಸಿ ಬೆಳೆವಿಮೆ ಪರಿಹಾರ ವಿತರಣೆಗೆ ಕ್ರಮ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ

ಚಿತ್ರದುರ್ಗ. ಮೇ.07:  ಬೆಳೆ ಸಮೀಕ್ಷೆಯಲ್ಲಿ ಉಂಟಾದ ವ್ಯತ್ಯಾಸದಿಂದ ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು, ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಆಗದಿರುವುದು ಗಮನಕ್ಕೆ

ಸ್ವಂತ ಹಣದಿಂದ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಕನ್ನಡ ಇಂಡಸ್ಟ್ರಿಯಿಂದ ದೂರವಾಗಿ ಬಹಳ ವರ್ಷಗಳೇ ಕಳೆದವು. ಒಂದೆರಡು ಸಿನಿಮಾ ಮಾಡಿ, ನಟನೆಯಿಂದ ದೂರವಾದರೂ. ಡ್ಯಾನ್ಸ್ ಮಾಡುವುದರಲ್ಲಿ ವಿನೋದ್ ರಾಜ್ ಎತ್ತಿದ ಕೈ. ಆದರೆ ಅವರನ್ನು ಸ್ಯಾಂಡಲ್

error: Content is protected !!