ಬೆಂಗಳೂರು: ಪ್ರಿಯಾಂಕ್ ಖರ್ಗೆ ಅವರಿಗೆ ನೀಡಿದ ನೋಟಿಸ್ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ನೋಟೀಸ್ ನಲ್ಲಿಯೇ ಸಾಕಷ್ಟು ತಪ್ಪು ಕಲ್ಪನೆ ಇದೆ. ಸೆಕ್ಷನ್ 91ನಲ್ಲಿ ನನಗೆ ನೋಟೀಸ್ ನೀಡಿದ್ದಾರೆ. ನಾನು ಹಾಜರಾಗಿಲ್ಲ ಅಂತ ಬಿಜೆಒಇ ನಾಯಕರು ಊರೆಲ್ಲಾ ಹೇಳಿಕೊಂಡು ಓಡಾಡುತ್ತಿದ್ದಾರಲ್ಲ, ಅವರು ಈ ಸೆಕ್ಷನ್ ಬಗ್ಗೆ ಕಾನೂನು ತಿಳಿದುಕೊಳ್ಳಬೇಕಾಗಿದೆ.
ನೋಟೀಸ್ ನಲ್ಲಿರುವುದು, ನನ್ನ ಬಳಿ ಯಾವುದಾದರೂ ದಾಖಲೆ, ವಸ್ತು ಇದ್ದರೆ ಅದನ್ನು ನೀಡಬೇಕು. ಏನಾದರೂ ಕೊಡಿ ಎಂದಿದ್ದಾರೆ. ಯಾವುದಾದರೂ ದಾಖಲೆ ಇದ್ದರೆ ಅದನ್ನು ಸಬ್ಮಿಟ್ ಮಾಡಿದರೆ ವೈಯಕ್ತಿಕವಾಗಿ ಹಾಜರಾಗುವ ಅವಶ್ಯಕತೆ ನೋಟೀಸ್ ನಲ್ಲಿದೆ. ಅದನ್ನು ಬಿಜೆಪಿ ನಾಯಕರು ತಿಳಿದುಕೊಳ್ಳಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ಉತ್ತರ ನೀಡಿದ್ದಾರೆ.
ಇದರಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನಿಸಿದರೆ ನೀವೂ ನನ್ನನ್ನು ಅರೆಸ್ಟ್ ಮಾಡಬಹುದು. ನಾನು ಸರ್ಕಾರಕ್ಕೆ ಸವಾಲು ಹಾಕುತ್ತೇನೆ. ನನಗೆ ಯಾವ ಭಯವೂ ಇಲ್ಲ. ಯಾರ ಮನೆಯಲ್ಲೂ ಉಂಡಿದ್ದು ಇಲ್ಲ, ತಿಂದಿದ್ದು ಇಲ್ಲ. ನಮಗ್ಯಾಕೆ ಭಯ ಇರಬೇಕು. ಸರ್ಕಾರಕ್ಕೆ ಭಯ ಬಿದ್ದು ಇಂದು ನೋಟೀಸ್ ಕೊಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಕಂಡ್ರೆ ಯಾಕೆ ಇಷ್ಟು ಭಯ ಅಂತ ಅವ್ರನ್ನ ಕೇಳ್ಬೇಕು.
ಕೆಲವು ಶಾಸಕರು ಹೇಳ್ತಾರೆ ಪ್ರಿಯಾಂಕ್ ಖರ್ಗೆ ಹಿಟ್ ಆಂಡ್ ರನ್ ಕೆಲಸ ಮಾಡ್ತಾರೆ ಅಂತ. ಹಿಟ್ ಅಂಡ್ ರನ್ ಮಾಡುತ್ತಿದ್ದರೆ ಯಾಕೆ ತನಿಖೆಯಲ್ಲಿ ಕೂರಿಸಿದ್ದೀರಿ..?. ಬಿಟ್ ಕಾಯಿನ್ ನಲ್ಲೂ ತನಿಖೆ ನಡೆಸುತ್ತಿದ್ದೀರಾ, ಪಿಎಸ್ಐ ನಲ್ಲೂ ತನಿಖೆ ನಡೆಸುತ್ತಿದ್ದೀರಾ. ಮತ್ತೆ ಇದು ಹಿಟ್ ಅಂಡ್ ರನ್ ಹೇಗೆ ಆಯಿತು ಎಂದು ಪ್ರಶ್ನಿಸಿದ್ದಾರೆ.