Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಚಿವ ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡಲಿ : ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,ಡಿ. 29 : ಸಚಿವ ಪ್ರಿಯಾಂಕ ಖರ್ಗೆಯವರ ಹಿಂಬಾಲಕರ ಪಟಾಲಂನಿಂದ ಕೊಲೆ ಬೆದರಿಕೆಯಿಂದ ಸಚಿನ ಪಾಂಚಾಳ ಗುತ್ತಿಗೆದ್ದಾರ ಸಚಿನ್ ಪಾಂಚಾಲ ಆತ್ಮ ಹತ್ಯೆ ಮಾಡಿಕೊಂಡಿದ್ದು ಡೆತ್ ನೋಟ್ ನಿಂದ ಸಾಬೀತಾಗಿದ್ದು ಕೂಡಲೇ ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆ ಕೊಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು, ಇಂದು ರಾಜ್ಯದಲ್ಲಿ ಪ್ರತಿದಿನ ಗೂಂಡಗಳ ಹಾವಳಿ ಹೆಚ್ಚಾಗುತ್ತಿದ್ದು ಸರ್ಕಾರ ಇದ್ದನ್ನು ಗಂಭೀರವಾಗಿ ಪರಿಗಣಿಸದೆ ಸರಕಾರದಲ್ಲಿರುವ ಸಚಿವರು ತಮ್ಮ ಹಿಂಬಾಲಕರ ಮೂಲಕ ಕರ್ನಾಟಕವನ್ನು ಗೂಂಡಾ ರಾಜ್ ಮಾಡುತ್ತಿದ್ದಾರೆ. ಇದಕ್ಕೆ ಜ್ವಲಂತ ಸಾಕ್ಷಿ ಎಂದರೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸಚಿವರು ಹಾಲಿ ವಿಧಾನಪರಿಷತ್ತಿನ ಸದಸ್ಯರಾದ ಸಿ ಟಿ ರವಿರವರ ಮೇಲೆ ಹಲ್ಲೆ ನಡೆಸಿ ಅವರನ್ನು ಕೆಟ್ಟದ್ದಾಗಿ ನಡೆಸಿಕೊಂಡಿರುವುದು ಮತ್ತು ಹಾಲಿ ಶಾಸಕರಾದ ಮುನಿರತ್ನ ಇವರ ಮೇಲೆ ಮೊಟ್ಟೆಯನ್ನು ಎಸೆದು ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿ ಅವರ ಮೇಲೆ ಇಲ್ಲದ ಸುಳ್ಳು ಕೇಸನ್ನು ಹಾಕಿಸಿ ಸರ್ಕಾರ ತಮ್ಮ ಹಿಂಬಾಲಕರಿಂದ ಗೂಂಡಗಿರಿ ಮಾಡಿಸುತ್ತ ಶಾಸಕರನ್ನು ಹೆದರಿಸುತ್ತಿರುವುದನ್ನು ಜಿಲ್ಲಾ ಭಾಜಪ ಉಗ್ರವಾಗಿ ಖಂಡಿಸುತ್ತದೆ.

ಮೊನ್ನೆ ಬೀದರನಲ್ಲಿ ಸಚಿನ ಪಾಂಚಾಳ ಎಂಬ ಗುತ್ತಿಗೆದಾರನು ಇಂಜಿನಿಯರಿಂಗ್ ಪದವಿಧರನಾದ ಇವನು ಆತ್ಮಹತ್ಯೆಗೆ ಶರಣಾಗಿರುವುದು ಬಹಳ ದುಖದ ಸಂಗತಿ ಇನ್ನು ಚಿಕ್ಕವಯಸ್ಸಿನಲ್ಲೆ, ಇಂತಹ ನಿರ್ದಾರ, ಕೈಗೊಂಡಿರುವುದಕ್ಕೆ, ಕಾರಣ ಸಚಿವ ಪ್ರಿಯಾಂಕ ಖರ್ಗೆಯವರ ಅಪ್ತರು ಕಲಬುರ್ಗಿ ಕಾಂಗ್ರೆಸ್ ಪಕ್ಷದ ಮುಂಖಡರಾದ ರಾಜು ಕಪನೊರ್ ಹಾಗು ಇತರೆ 8 ಜನರು ಹಣ ಪಡೆದುಕೊಂಡು ಕಾಮಗಾರಿ ಕೊಡಿಸುವುದಾಗಿ ನಂಬಿಸಿ ಹಣವನ್ನು ಕೊಡದೆ ಟೆಂಡರ ಕಾಮಗಾರಿಯನ್ನು ಕೊಡದೆ ಸಚಿನರವನ್ನು ಪೀಡಿಸಿದ್ದಾರೆ, ಕೊಟ್ಟ ಹಣ ಕೇಳಿದರೆ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಡೆತನೋಟನ್ನು ಬರೆದು ಸಚಿನ್’ ಪಾಂಚಾಳ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಈ ಸರಕಾರದಲ್ಲಿ ರೌಡಿಗಳು ವಿಜೃಂಭಿಸುತ್ತಿದ್ದಾರೆ ಎನ್ನಲು ಕಣ್ಣಿಗೆ ಕಾಣುವ ಸಾಕ್ಷಿಯಾಗಿವೆ ಎಂದು ಅವರು ಆರೋಪ ಮಾಡಿದ್ದಾರೆ.

ಈ ಹಿಂದೆ ಭಾಜಪ 40%, ಸರ್ಕಾರ ಎಂದು ಯಾವುದೇ ಆಧಾರವಿಲ್ಲದೆ. ಆಪಾದನೆ ಮಾಡುತ್ತ ಅಧಿಕಾರಕ್ಕೆ ಬಂದ. ಕಾಂಗ್ರೇಸ ಸರಕಾರ ಇಂದು. ತಮ್ಮ ಹಿಂಬಾಲಕರ ಮೂಲಕ 100% ಕಮಿಷನ್ ಧಂಧೆಂiÀ ಮುಖಾಂತರ `ರಾಜ್ಯವನ್ನೆ ಲೂಟಿಮಾಡುತ್ತ ಇಂತಹ ಅಮಾಯಕರ ಜೀವ ತೆಗೆಯುವಂತ ಕೆಲಸ. ಮಾಡುತ್ತಿದೆ. ಅಧಿಕಾರದಲ್ಲಿರುವ ಇವರು ಇವರ ಕಾರ್ಯಕರ್ತರ ವಿರುದ್ದ ‘ನಿಷ್ಪÀಕ್ಷಪಾತ ತನಿಖೆ ನಡೆಸುವುದಿಲ್ಲದೆ ಸಚಿವ ಪ್ರಿಯಾಂಕ ಖರ್ಗೆಯವರು. ರಾಜಿನಾಮೆಯನ್ನು ನೀಡಬೇಕು ಹಾಗು ಈ ಆತ್ಮಹತ್ಯೆಗೆ ಕಾರಣರಾದ ಕಾಂಗ್ರೇಸ್ ಕಾರ್ಯಕರ್ತರಿಗೆ ಸೂಕ್ತ ತನಿಖೆಗೆ ಓಳಪಡಿಸಿ ಇವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಜಿಲ್ಲಾ ಭಾಜಪ ಈ ಸರ್ಕಾರಕ್ಕೆ ಒತ್ತಾಯಿಸುತ್ತದೆ ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಸರ್ಕಾರದ ಎರುದ್ದ ರಾಜ್ಯದಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment