ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 22 : ಬೇರೆಯವರಿಗಿಂತ ನಾನು ಹೇಗೆ ಭಿನ್ನವಾಗಿ ಬರಬೇಕೆಂಬುದು ಬರಹಗಾರರ ಮುಂದಿರುವ ಸವಾಲು ಎಂದು ಕವಿ ಡಾ.ಲೋಕೇಶ್ ಅಗಸನಕಟ್ಟೆ ತಿಳಿಸಿದರು.
ಬಿಸಿ ಸುದ್ದಿ ನ್ಯೂಸ್ ಪೋರ್ಟಲ್ ಚಿತ್ರದುರ್ಗ ವತಿಯಿಂದ ಐ.ಎಂ.ಎ. ಹಾಲ್‍ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕೋಟೆ ನಾಡಿನ ಕವಿ ಕಾವ್ಯ ಪರಿಚಯ ಕವಿಗಳ ಸಮ್ಮಿಲನ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಪ್ರತಿಭೆಗಳನ್ನು ಶೋಧಿಸಿ ಬರಹಗಾರರಿಗೆ ವೇದಿಕೆ ಒದಗಿಸುವುದರಿಂದ ಆತ್ಮವಿಶ್ವಾಸ ಮೂಡಿಸಿದಂತಾಗುತ್ತದೆ. ಬೆಂಬಲ, ಪ್ರೇರಣೆ, ಪ್ರೋತ್ಸಾಹವಿಲ್ಲದೆ ಯಾವ ಕವಿಯೂ ತಾನಾಗಿಯೇ ಬೆಳೆದಿರುವುದು ತುಂಬಾ ಕಡಿಮೆ. ಬರವಣಿಗೆಯನ್ನು ಸಿದ್ದಿಸಿಕೊಂಡು ಬರೆದಾಗ ಮಾತ್ರ ಸಾಹಿತ್ಯದಲ್ಲಿ ಸೃಜನಶೀಲತೆಗೆ ಅರ್ಥ ಬರುತ್ತದೆ. ಬರಹಗಾರರಿಗೆ ಅಧ್ಯಯನ ಮುಖ್ಯ. ಕವಿತೆ, ಬರಹಗಳನ್ನು ಓದುತ್ತಿದ್ದೇನಾ, ಓದಿದ್ದು, ಅರ್ಥವಾಗುತ್ತಿದೆಯಾ ಎನ್ನುವ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬಸವಣ್ಣ, ಅಕ್ಕಮಹಾದೇವಿ ಇವರುಗಳು ತಲ್ಲಣ ಅನುಭವಿಸಿದ್ದಾರೆ. ಭಾವನೆಗಳನ್ನು ಅಭಿವ್ಯಕ್ತಿಗೊಳಿಸಬೇಕೆಂದು ಹೇಳಿದರು.
ಕವಿತೆಗೆ ಹೊರಮೈ, ಒಳಮೈ ಇರುತ್ತದೆ. ಬರವಣಿಗೆಯಲ್ಲಿ ಹೊಸತನ ಕಾಣಬೇಕು. ಕವಿತೆ ಮೌನವಾಗಿರುವುದರ ಕಡೆ ಗಮನ ಕೊಡಬೇಕು. ಓದಿದವರಿಗೆ ಮೌನ ಮಾತಾಗಬೇಕು. ವ್ಯಕ್ತಿತ್ವದಂತೆ ಬರಹಗಳಿರುತ್ತವೆ. ಒಳ್ಳೆಯವರಾದರೆ ಒಳ್ಳೆ ಕವಿತೆ ಬರೆಯುತ್ತಾರೆ. ಬರಹಗಾರ ಸ್ವಯಂ ವಿಮರ್ಶೆಗೊಳಪಡಿಸಿಕೊಳ್ಳದಿದ್ದರೆ ಬರೆಯಲು ಆಗುವುದಿಲ್ಲ. ಅರ್ಥಾಂತರ ವಿನ್ಯಾಸವಾಗಬಹುದಾದ ಕವಿತೆಗಳನ್ನು ಬರೆಯಬೇಕು. ಮಾತಿನಿಂದ ಮೌನಗಳ ಕವಿತೆಯನ್ನು ಕಟ್ಟಬೇಕೆಂದರು. ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ ಅಧ್ಯಕ್ಷತೆ ವಹಿಸಿದ್ದರು. ಪರಮೇಶ್ವರಪ್ಪ ಕುದುರಿ, ಶಿಕ್ಷಕ ಮಹೇಶ್ ವೇದಿಕೆಯಲ್ಲಿದ್ದರು. ಹುರುಳಿ ಬಸವರಾಜ್, ಷರೀಫಾಬಿ, ಡಾ.ಗೌರಮ್ಮ, ಚಾಂದಿನಿ, ಜಿ.ಎಸ್.ಉಜ್ಜಿನಪ್ಪ ಸೇರಿದಂತೆ ಅನೇಕ ಕವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















