ಚಿತ್ರದುರ್ಗ, ಮೇ. 01: ಚಿತ್ರದುರ್ಗದಲ್ಲಿ ದುರ್ಗೋತ್ಸವ ವನ್ನು ಮರು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು, ಸರ್ಕಾರದ ವತಿಯಿಂದ ಸೂಕ್ತ ಅನುದಾನವನ್ನು ಮಂಜೂರು ಮಾಡುವಂತೆ ಪಪ್ಪಿಸ್ ಸ್ಟೂಡೆಂಟ್ ವಿಂಗ್ ತಂಡದವರು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಿ ಅವರಿಗೆ ಮನವಿ ಮಾಡಿದ್ದಾರೆ.
ನಗರದ ಜೆಸಿಆರ್ ಬಡಾವಣೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಸಚಿವರಿಗೆ ಮನವಿಯನ್ನು ಸಲ್ಲಿಸಿ, ಚಿತ್ರದುರ್ಗ ಜಿಲ್ಲೆ ತನ್ನ ವೈಭವಮಯ ಇತಿಹಾಸ, ಕೋಟೆಗಳು ಹಾಗೂ ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಇಲ್ಲಿ ನಡೆಯುತ್ತಿದ್ದ ದುರ್ಗೋತ್ಸವವು ಹಂಪಿ ಉತ್ಸವಕ್ಕಿಂತಲೂ ಹಳೆಯ ಪರಂಪರೆಯನ್ನು ಹೊಂದಿದೆ ವಿಶಿಷ್ಟ ಉತ್ಸವವಾಗಿದೆ. ಈ ಉತ್ಸವವು ಜಿಲ್ಲೆ ಜನತೆಗೆ ಮಾತ್ರವಲ್ಲದೆ, ರಾಜ್ಯದ ಸಂಸ್ಕೃತಿ ವೈಭವವನ್ನು ಪ್ರತಿಬಿಂಬಿಸುವ ಮಹತ್ವದ ಕಾರ್ಯಕ್ರಮವಾಗಿತ್ತು. 2006ರಲ್ಲಿ ದುರ್ಗೋತ್ಸವವು ಅತ್ಯಂತ ಸಂಭ್ರಮದಿAದ ನಡೆದಿದ್ದು, ಮೂರು ವರ್ಷಕ್ಕೊಮ್ಮೆ ಆಚರಿಸಲಾಗುತ್ತಿದ್ದ ಈ ಉತ್ಸವವು ನಂತರ ನಾನಾ ಕಾರಣಗಳಿಂದ ಸ್ಥಗಿತಗೊಂಡಿದೆ. ಅದರ ನಂತರದಿಂದ ಈ ಮಹತ್ವದ ಸಂಸ್ಕೃತಿಯ ಉತ್ಸವವನ್ನು ಮತ್ತೆ ಆರಂಭಿಸಲಾಗಿಲ್ಲ ಎಂದು ಪಪ್ಪಿಸ್ ಸ್ಟೂಡೆಂಟ್ ವಿಂಗ್ ಸದಸ್ಯರು ಸಚಿವರಿಗೆ ಮನವರಿಕೆ ಮಾಡಿದರು.

ಪ್ರಸ್ತುತ ರಾಜ್ಯದ ವಿವಿಧ ತಾಲೂಕು ಮಟ್ಟದ ಉತ್ಸವಗಳಿಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಆದರೆ ಚಿತ್ರದುರ್ಗದಂತಹ ಇತಿಹಾಸ ಪ್ರಸಿದ್ದ ಜಿಲ್ಲೆಯ ದುರ್ಗೋತ್ಸವಕ್ಕೆ ಅನುದಾನ ನೀಡದೇ ಇರುವುದರಿಂದ ಸ್ಥಳೀಯ ಜನತೆಗೆ ಬೇಸರವಾಗಿದೆ. ದುರ್ಗೋತ್ಸವವು ಕೇವಲ ಉತ್ಸವವಲ್ಲ, ಅದು ಚಿತ್ರದುರ್ಗದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ಜನತೆಗೆ ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ. ಈ ಉತ್ಸವವನ್ನು ಭವ್ಯವಾಗಿ ನಡೆಸಲು ಅಂದಾಜು ರೂ. 10 ಕೋಟಿಗಳ ಅನುದಾನವನ್ನು ಮಂಜೂರು ಮಾಡುವಂತೆ ಮನವಿಯನ್ನ ಮಾಡಿದರು, ಮನವಿಯನ್ನ ಸ್ವೀಕರಿಸಿದ ಸಚಿವ ಶಿವರಾಜ್ ತಂಗಡಿ ಅವರು ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ದುರ್ಯೋತ್ಸವಕ್ಕೆ ಸಂಬAಧಿಸಿದAತ ಖರ್ಚು ವೆಚ್ಚದ ಬಗ್ಗೆ ಸಂಪೂರ್ಣ ವರದಿಯನ್ನು ಇಲಾಖೆಗೆ ಶಿಫಾರಸು ಮಾಡುವಂತೆ ಸ್ಥಳದಲ್ಲೇ ಶಿಫಾರಸ್ಸು ಮಾಡಿದರು.
ಈ ಒಂದು ಸಂದರ್ಭದಲ್ಲಿ ಶಾಸಕ ಕೆ ಸಿ ವೀರೇಂದ್ರ ಪಪ್ಪಿ, ಪಪ್ಪಿಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ ಚಿನ್ನು, ಕಾರ್ಯದರ್ಶಿ ಸಲೀಂ, ಸದಸ್ಯರಾದ ನಿಜಾಂ ಮತ್ತು ದರ್ಶನ್ ಇದ್ದರು,



















