Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಆಕಾಶವಾಣಿಗೆ 35ರ ಸಂಭ್ರಮ ವಿಶೇಷ ಕಾರ್ಯಕ್ರಮಗಳ ಪ್ರಸಾರ

---Advertisement---

ಚಿತ್ರದುರ್ಗ. ಮೇ.01: ಚಿತ್ರದುರ್ಗ ಆಕಾಶವಾಣಿ ಕಾರ್ಯಾರಂಭ ಮಾಡಿ ಮೇ.03 ಭಾನುವಾರಕ್ಕೆ 35 ವರ್ಷ ಪೂರ್ಣವಾಗುತ್ತಿದ್ದು, ಅಂದು ಶ್ರೋತೃಗಳಿಗಾಗಿ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಬೆಳಿಗ್ಗೆ 8:30ಕ್ಕೆ ಜಿಲ್ಲೆಯ ಕವಯಾತ್ರಿಯರು ಸೃಷ್ಟಿಸಿದ ಆಕಾಶವಾಣಿ ಕಾವ್ಯಧಾರೆ, ಬೆಳಿಗ್ಗೆ 9.05ಕ್ಕೆ ಉದಯೋನ್ಮುಖ ಬರಹಗಾರ್ತಿ ದೀಪಿಕಾ ಮಾರಘಟ್ಟ ಅವರಿಂದ ಆಕಾಶವಾಣಿ ಕುರಿತು ವಿಚಾರ ಲಹರಿ, ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಸಂಗೀತಕ್ಷೇತ್ರದ ಉದಯೋನ್ಮುಖ ಯುವ ಪ್ರತಿಭೆಗಳಾದ ಹಸೀನಾ ಬೇಗಂ ಹಾಗೂ ಸಂಗೀತ. ಎಸ್.ಪ್ರಸ್ತುತ ಪಡಿಸುವ ವೈವಿದ್ಯಮಯ ಸಂಗೀತ ಕಾರ್ಯಕ್ರಮ ಬಿತ್ತರವಾಗಲಿದೆ.

ನಿರಂಜನ ಮೂರ್ತಿ ಆರ್ ಪಂಡರಹಳ್ಳಿ ಕಾರ್ಯಕ್ರಮಗಳನ್ನು ಸಂಕಲಿಸಲಿದ್ದಾರೆ. ನಂತರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿ ನಿಲಯದಲ್ಲಿ ಯುವ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ. 35ನೇ ವರ್ಷಾಚರಣೆ ಸಂಭ್ರಮದಲ್ಲಿ ನಿಲಯದ ಎಲ್ಲಾ ಉದ್ಘೋಷಕರು, ಪ್ರಸಾರ ಸಹಾಯಕರು, ತಾಂತ್ರಿಕ ವಿಭಾಗ ಹಾಗೂ ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...