Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಣಿ ಟ್ರಾನ್ಸ್‌ಪೋರ್ಟ್ ಕಂಪನಿಗಳಿಂದ ಮದಕರಿಪುರ ಚಾಲಕರಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

---Advertisement---

 

 

ಸುದ್ದಿಒನ್, ಚಿತ್ರದುರ್ಗ. ಡಿ.29: ಸಿರಿಗೆರೆ ಮದಕರಿಪುರ ಸಮೀಪದ ಗಣಿ ಟ್ರಾನ್ಸ್‍ಪೋರ್ಟ್ ಕಂಪನಿಗಳಿಂದ ಸ್ಥಳೀಯ ವಾಹನ ಚಾಲಕರಿಗೆ ಮತ್ತು ವಾಹನಗಳಿಗೆ ತೀವ್ರ ಅನ್ಯಾಯವಾಗುತ್ತಿದ್ದು, ಇದನ್ನು ವಿರೋಧಿಸಿ ಡಾ. ಬಿ.ಆರ್. ಅಂಬೇಡ್ಕರ್ ಗಣಿ ಬಾಧಿತ ಲಾರಿ ಮಾಲೀಕರ ಸಂಘ ಮತ್ತು ಚಾಲಕರ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

 

ಮದಕರಿಪುರ ಸಮೀಪವಿರುವ ಆರ್.ಪ್ರವೀಣ್ ಚಂದ್ರ, ವೇದಾಂತ ಲಿಮಿಟೆಡ್, ಜೆ.ಎಸ್.ಡಬ್ಲ್ಯೂ. ಗಣಿ ಕಂಪನಿಗಳಿಂದ ಮೈನಿಂಗ್ ಲೋಡಿಂಗ್ ಮತ್ತು ಅನ್‍ಲೋಡಿಂಗ್ ವ್ಯವಸ್ಥೆಯನ್ನು ಕೆಲವು ಟ್ರಾನ್ಸ್‍ಪೋರ್ಟ್ ಕಂಪನಿಗಳಿಗೆ ವಹಿಸಲಾಗಿದ್ದು, ಆದರೆ ಟ್ರಾನ್ಸ್‍ಪೋರ್ಟ್ ಕಂಪನಿಗಳು ಸ್ಥಳೀಯ ಮದಕರಿಪುರ, ಕಾಗಳಗೆರೆ, ಮುತ್ತಗದೂರು ಗ್ರಾಮಗಳ ಸ್ಥಳೀಯ ಲಾರಿ ಚಾಲಕರು ಮತ್ತು ಮಾಲೀಕರಿಗೆ ಯಾವುದೇ ಕೆಲಸಗಳು ಮತ್ತು ಸಾಗಣಿಕೆಗೆ ಅನುಮತಿ ನೀಡಿದೇ ಕಡೆಗಣಿಸುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗಣಿ ಬಾಧಿತ ಪ್ರದೇಶದ ವ್ಯಾಪ್ತಿಗೆ ಬರುವ ಮದಕರಿಪುರ, ಕಾಗಳಗೆರೆ, ಮುತ್ತಗದೂರು ಗ್ರಾಮಗಳ ಸ್ಥಳೀಯ ಲಾರಿ ಚಾಲಕರು ಮತ್ತು ಮಾಲೀಕರಿಗೆ ಸ್ಥಳೀಯವಾಗಿ ಮೈನಿಂಗ್ ಸಾಗಾಣಿಕೆಗೆ ಅವಕಾಶ ನೀಡದೇ ದೂರದೂರುಗಳಿಂದ ಬಂದಂತಹ ಲಾರಿ ಚಾಲಕರು ಮತ್ತು ಮಾಲೀಕರಿಗೆ ಅವಕಾಶ ನೀಡುವ ಮೂಲಕ ಸ್ಥಳೀಯರಿಗೆ ಅನ್ಯಾಯವೆಸಗಲಾಗಿದ್ದು, ಲಾರಿ ಚಾಲಕರು ಮತ್ತು ಮಾಲೀಕರ ಟ್ರಾನ್ಸ್‍ಪೋರ್ಟ್‍ಗಳ ಹಿಂದೆ ಕೆಲವು ಸ್ಥಳೀಯ ಮುಖಂಡರ ಕೈವಾಡವಿದ್ದು, ಇದನ್ನು ವಿರೋಧಿಸಿ, ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ತತ್‍ಕ್ಷಣದಿಂದ ಜಿಲ್ಲಾಡಳಿತ, ಮೈನಿಂಗ್ ಇಲಾಖೆ, ಗಣಿ ಕಂಪನಿಗಳ ಮಾಲೀಕರು, ಲಾರಿ ಟ್ರಾನ್ಸ್‍ಪೋರ್ಟ್ ಕಂಪನಿಯವರು ಈ ಅವ್ಯವಸ್ಥೆಯನ್ನು ಸುಧಾರಿಸದೇ ಹೋದರೆ ಮದಕರಿಪುರ, ಕಾಗಳಗೆರೆ, ಮುತ್ತಗದೂರು ಗ್ರಾಮಗಳ ಗ್ರಾಮಸ್ಥರು ಬಹಿರಂಗವಾಗಿ ಕೆಲವು ಕುಯುಕ್ತಿ ಮುಖಂಡರ ಮತ್ತು ಟ್ರಾನ್ಸ್‍ಪೋರ್ಟ್ ಕಂಪನಿಗಳು ಮತ್ತು ಗಣಿ ಮಾಲೀಕರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿಯವರು ಮನವಿಯನ್ನು ಸ್ವೀಕರಿಸಿ ಇನ್ನು ಒಂದೆರಡು ದಿನಗಳೊಳಗಾಗಿ ಮೈನಿಂಗ್ ಇಲಾಖೆಯ ಅಧಿಕಾರಿಗಳು, ಗಣಿ ಕಂಪನಿಯ ಮಾಲೀಕರು ಮತ್ತು ಟ್ರಾನ್ಸ್‍ಪೋರ್ಟ್ ಕಂಪನಿಯ ಮಾಲೀಕರಿಗೆ ಸಭೆ ಕರೆದು, ಡಾ. ಅಂಬೇಡ್ಕರ್ ಗಣಿ ಬಾಧಿತ ಲಾರಿ ಮಾಲೀಕರ ಮತ್ತು ಚಾಲಕರ ಪದಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ, ಮದಕರಿಪುರ ಕಾಗಳಗೆರೆ, ಮುತ್ತಗದೂರು ಗ್ರಾಮಗಳ ಲಾರಿ ಚಾಲಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಮದಕರಿಪುರ ಗ್ರಾಮದ ಶಿವಣ್ಣ, ತಿಪ್ಪೇಸ್ವಾಮಿ, ಮದನ್, ಸಿದ್ದೇಶ್, ರಮೇಶ, ಓಬಳೇಶ, ಲಲಿತಾಬಾಯಿ, ಸರೋಜಬಾಯಿ, ಡಾ.ಬಿ.ಆರ್.ಅಂಬೇಡ್ಕರ್ ಹೋಪ್ ಇಂಡಿಯಾ ಫೌಂಡೇಷನ್ ಅಧ್ಯಕ್ಷರಾದ ನರೇನಹಳ್ಳಿ ಅರುಣ್‍ಕುಮಾರ್, ಮುಂತಾದವರು ನೇತೃತ್ವ ವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now