ನೂಪೂರ್ ಶರ್ಮಾ ವಿರುದ್ಧ ದಂಗೆ.. 228 ಜನರ ಬಂಧನ, 5 ಸಾವಿರ ಜನರ ಮೇಲೆ ಎಫ್ಐಆರ್..!

suddionenews
1 Min Read

ನವದೆಹಲಿ: ಬಿಜೆಪಿಯಲ್ಲಿದ್ದ ನೂಪೂರ್ ಶರ್ಮಾ ಇತ್ತಿಚೆಗೆ ಪೈಗಂಬರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆ ಹೇಳಿಕೆಗಳು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿವೆ. ಹೀಗಾಗಿ ಬಿಜೆಪಿ ನೂರೂಪ್ ಶರ್ಮಾಳನ್ನು ವಜಾ ಮಾಡಿದೆ. ಆದರೆ ಆಕೆ ನೀಡಿದ ಹೇಳಿಕೆಯಿಂದ ಮುಸ್ಲಿಂರು ರೊಚ್ಚಿಗೆದ್ದಿದ್ದಾರೆ. ಬರೀ ಅಮಾನತು ಅಲ್ಲ ಆಕೆಯನ್ನು ಜೈಲಿಗೆ ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದರ ಭಾಗವಾಗಿ ಇಂದು ಕೂಡ ದೇಶದ ಹಲವೆಡೆ ತೀವ್ರಗತಿಯ ಪ್ರತಿಭಟನೆ ನಡೆಸುತ್ತಿದ್ದಾರೆ.

ಉತ್ತರಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸಿಕ್ಕ ಸಿಕ್ಕ ವಾಹನಗಳ ಮೇಲೂ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಸಹರಾನ್ ಪುರದಲ್ಲಿ 48, ಪ್ರಯಾಗ್ ರಾಜ್ ನಲ್ಲಿ 68, ಹತ್ರಾಸ್ ನಲ್ಲಿ 50, ಮೊರಾದಾಬಾದ್ ನಲ್ಲಿ 25, ಫಿರೋಜಾಬಾದ್ ನಲ್ಲಿ 8, ಅಂಬೇಡ್ಕರ್ ನಗರದಲ್ಲಿ 28 ಸೇರಿ ಇಲ್ಲಿಯವರೆಗೆ 228 ಜನರ ಬಂಧನವಾಗಿದೆ.

ಪ್ರಯಾಗ್ ರಾಜ್ ನಲ್ಲಿ ಐದು ಸಾವಿರ ಜನ ಮೇಲೆ ಎಫ್ಐಆರ್ ಹಾಕಿದ್ದಾರೆ. ಎಫ್ಐಆರ್ ನಲ್ಲಿ 70 ಕಿಡಿಗೇಡಿಗಳ ಹೆಸರು ಉಲ್ಲೇಖ ಮಾಡಲಾಗಿದೆ. ಪ್ರಯಾಗ್ ರಾಜ್ ನ ಅಟಲಾದಲ್ಲಿ ಖಾಕಿ ಸರ್ಪಗಾವಲಿನಂತೆ ಕಾಯುತ್ತಿದೆ. ಯುಪಿಯ ಅನೇಕ ಕಡೆ 144 ಸೆಕ್ಷನ್ ಹಾಕಲಾಗಿದೆ.

ಇನ್ನು ಪಶ್ಚಿಮ ಬಂಗಾಳದಲ್ಲೂ ಪ್ರತಿಭಟನೆ ಜೋರಾಗಿದ್ದು,
ಪೊಲೀಸರಿಂದ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್ ಮಾಡಲಾಗಿದೆ. ಗುಂಪು ಗುಂಪಾಗಿ ಪ್ರತಿಭಟನೆ ಮಾಡುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *