Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುದೀಪ್ ವಿರುದ್ಧ ಧರಣಿ ಮಾಡಿದ್ದ ನಿರ್ಮಾಪಕ ಎಂ.ಎನ್.ಕುಮಾರ್ ಅರೆಸ್ಟ್..!

---Advertisement---

ಬೆಂಗಳೂರು; ಕನ್ನಡದ ಮಾಣಿಕ್ಯ, ಅಂಜನಿಪುತ್ರ, ಕಿರಿಕ್ ಶಂಕರ, ಮುಕುಂದ ಮುರಾರಿ, ಶಂಕರ್ ಗುರು ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಂತ ಎಂ.ಎನ್.ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 1.25 ಕೋಟಿ ವಂಚನೆ ಪ್ರಕರಣದಲ್ಲಿ ಎಂ.ಎನ್.ಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ‌.

ಸದ್ಯ ಎಂ.ಎನ್.ಕುಮಾರ್ ಅವರ ವಿಚಾರಣೆ ನಡೆಯುತ್ತಿದ್ದು, ಬಂಧಿಸುವ ಸಾಧ್ಯತೆಯೂ ಇದೆ. ನಟ ಜಗ್ಗೇಶ್ ಅವರು ದೂರು ನೀಡಿರುವ ಆಧಾರದ ಮೇಲೆ ಅರೆಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಎಂ.ಎನ್.ಕುಮಾರ್ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ಜಗ್ಗೇಶ್ ಅವರು ದಾಖಲಿಸಿದ್ದರು ಎನ್ನಲಾಗಿದ್ದು, ಈಗ ಆ ಕೇಸ್ ಗೆ ಸಂಬಂಧಿಸಿದಂತೆ ಅರೆಸ್ಟ್ ಮಾಡಲಾಗಿದೆ. ಆದರೆ ಆ ಹಣ ಯಾವುದು ಎಂಬ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ.

ಸಾಲ ಏನಾದರೂ ನೀಡಿದ್ದರಾ ಅಥವಾ ಸಿನಿಮಾದ ಸಂಭಾವನೆಯನ್ನೇನಾದ್ರೂ ಕೊಡಬೇಕಾಗಿತ್ತಾ ಎಂಬುದರ ಬಗ್ಗೆ ಕ್ಲಾರಿಟಿ ಕೊಟ್ಟಿಲ್ಲ. ಆದರೆ ಚೆಕ್ ಬೌನ್ಸ್ ವಿಚಾರದಲ್ಲಿ ಎಂ.ಎನ್.ಕುಮಾರ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಂಎನ್ ಕುಮಾರ್ ಅವರೆಂದರೆ ನೆನೆಪಾಗುವುದು ಕಳೆದ ವರ್ಷ ನಡೆಸಿದ ಧರಣಿ. ಕುಚ್ಚ ಸುದೀಪ್ ವಿಚಾರಕ್ಕೆ ದೊಡ್ಡ ಧರಣಿಯನ್ನೇ ನಡೆಸಿದ್ದರು. ಸುದೀಒ್ ಅವರು ಅಡ್ವಾನ್ಸ್ ಹಣ ಪಡೆದು, ಸಿನಿಮಾಗೆ ಡೇಟ್ ಕೊಡ್ತಿಲ್ಲ ಎಂಬ ಆರೋಪ ಮಾಡಿದರು. ಫಿಲ್ಮ್ ಚೇಂಬರ್ ಮುಂದೆಯೂ ಧರಣಿ ಮಾಡಿದ್ದರು. ಈ ಸುದ್ದಿ ಬಹಳ ದೊಡ್ಡಮಟ್ಟಕ್ಕೆ ಹಬ್ಬಿತ್ತು. ಆ ಬಳಿಕ ನಟ ಸುದೀಪ್ ಅವರು ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ವಿಚಾರಣೆ ಚಾಲ್ತಿಯಲ್ಲಿದೆ. ಈಗ ಎಂ.ಎನ್.ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment