Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಪೌರಕಾರ್ಮಿಕರಿಗೆ ಸಿಹಿಸುದ್ದಿ : ಕರ್ನಾಟಕ ಸರ್ಕಾರದಿಂದ ಮಹತ್ವದ ಯೋಜನೆಗಳ ಘೋಷಣೆ

---Advertisement---

ಬೆಂಗಳೂರು.ಸೆಪ್ಟೆಂಬರ್. 27: ನಗರವನ್ನು ನಿತ್ಯವೂ ಸ್ವಚ್ಛವಾಗಿಡುವ ಕಾಯಕಜೀವಿಗಳಾದ ಪೌರಕಾರ್ಮಿಕರ ಜೀವನ ಮಟ್ಟ ಸುಧಾರಿಸಲು ಮತ್ತು ಅವರ ಬದುಕಿಗೆ ಗೌರವಯುತ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರವು ಹಲವು ಮಹತ್ವದ ಯೋಜನೆ ಹಾಗೂ ಸೌಲಭ್ಯಗಳನ್ನು ಘೋಷಿಸಿದೆ.

ಪೌರಕಾರ್ಮಿಕರ ಕಲ್ಯಾಣ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿರುವ ಸರ್ಕಾರ, ಅವರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದೆ.

ಸರ್ಕಾರದ ಪ್ರಮುಖ ಘೋಷಣೆಗಳು ಮತ್ತು ಸೌಲಭ್ಯಗಳು

ಬೆಳಗಿನ ಉಪಹಾರ ಭತ್ಯೆ ಹೆಚ್ಚಳ: ಪೌರಕಾರ್ಮಿಕರ ಬೆಳಗಿನ ಉಪಹಾರ ಭತ್ಯೆಯನ್ನು ₹35 ರಿಂದ ₹70ಕ್ಕೆ ದ್ವಿಗುಣಗೊಳಿಸಲಾಗಿದೆ.

ಖಾಯಂ ಪೌರಕಾರ್ಮಿಕರಿಗೆ ವಿಶೇಷ ಭತ್ಯೆ: ಖಾಯಂ ಪೌರಕಾರ್ಮಿಕರಿಗೆ ನೀಡಲಾಗುತ್ತಿದ್ದ ವಿಶೇಷ ಭತ್ಯೆಯನ್ನು ₹7,000 ದಿಂದ ₹10,000 ಕ್ಕೆ ಏರಿಕೆ ಮಾಡಲಾಗಿದೆ.

ನೇರ ಪಾವತಿ ಪೌರಕಾರ್ಮಿಕರಿಗೆ ಭತ್ಯೆ: ನೇರ ಪಾವತಿ ವ್ಯಾಪ್ತಿಯಲ್ಲಿರುವ ಪೌರಕಾರ್ಮಿಕರಿಗೆ ಹೊಸದಾಗಿ ಪ್ರತಿ ತಿಂಗಳು ₹5,000 ವಿಶೇಷ ಭತ್ಯೆ ನೀಡಲು ಕ್ರಮವಹಿಸಲಾಗಿದೆ.

ಸಮಯಕ್ಕೆ ಸರಿಯಾಗಿ ವೇತನ ಪಾವತಿ: ಪೌರಕಾರ್ಮಿಕರಿಗೆ ಪ್ರತಿ ತಿಂಗಳೂ ನಿಗದಿತ ಅವಧಿಯಲ್ಲಿ ವೇತನ ಪಾವತಿಯಾಗುವುದನ್ನು ಖಾತರಿಪಡಿಸಲು ‘ಎಸ್ಕ್ರೋ ಖಾತೆ’ (Escrow Account) ವ್ಯವಸ್ಥೆ ಜಾರಿಗೆ ತರಲಾಗಿದೆ.

ಮೀಸಲಾತಿ ಅಡಿ ಅವಕಾಶ: ಸಮತಳ ಮೀಸಲಾತಿಯಡಿ ನಿಗದಿಪಡಿಸಿರುವ ಹುದ್ದೆಗಳಿಗೆ ಎಸ್‌ಸಿ, ಎಸ್‌ಟಿ ಅರ್ಹ ಪೌರಕಾರ್ಮಿಕರನ್ನು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ.

ಮಕ್ಕಳ ಶಿಕ್ಷಣ ಮತ್ತು ವಸತಿ ಸೌಲಭ್ಯ: ಪೌರಕಾರ್ಮಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕೆಪಿಎಸ್ (KPS) ಮಾದರಿಯಲ್ಲಿ ವಿಶೇಷ ವಸತಿ ಶಾಲೆ ಹಾಗೂ ಪೌರಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಮನೆ ನಿರ್ಮಾಣಕ್ಕೆ ಧನಸಹಾಯ: ಪೌರಕಾರ್ಮಿಕರಿಗೆ ಸ್ವಂತ ಸೂರು ಒದಗಿಸುವ ಉದ್ದೇಶದಿಂದ ಮನೆ ನಿರ್ಮಾಣಕ್ಕೆ ₹7.5 ಲಕ್ಷ ನೆರವು ನೀಡಲಾಗುತ್ತಿದೆ.

ಪೌರಕಾರ್ಮಿಕರ ಸಾಮಾಜಿಕ ಭದ್ರತೆ, ಆರೋಗ್ಯ ಹಾಗೂ ಜೀವನ ಮಟ್ಟದಲ್ಲಿ ಸಕಾರಾತ್ಮಕ ಬದಲಾವಣೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸರ್ಕಾರ ತಿಳಿಸಿದೆ.

 

Join WhatsApp

Join Now

Join Telegram

Join Now