ಸುದೀಪ್ ನಟನೆಯ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಕುಮಾರ್ ಇದೀಗ ಸುದೀಪ್ ಅವರ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಸಿನಿಮಾ ಮಾಡೋಣಾ ಅಂತ ಹೇಳಿ ಹೇಳಿ ಕೈಗೆ ಸಿಗದೆ ಓಡಾಡುತ್ತಿದ್ದಾರೆ ಎನ್ನುತ್ತಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಆದ್ಮೇಲೆ ಮುತ್ತತ್ತಿ ಸತ್ಯರಾಜ್ ಸಿನಿಮಾ ಮಾಡೋಣಾ ಅಂತ ಹೇಳಿದ್ರು. ಹಣ ಪೂರ್ತಿ ಕೊಟ್ಟಿದ್ದೀನಿ. ನಂದಕಿಶೋರ್ ರನ್ನು ಕರೆಸಿ, ಹಣ ಕೊಡಿಸಿದ್ರು. ಆದರೆ ಸಿನಿಮಾ ಮಾಡೋಕೆ ಕೈಗೆ ಸಿಕ್ತಿಲ್ಲ. ಅವರ ಪತ್ನಿಗೂ ವಾಯ್ಸ್ ಮೆಸೇಜ್ ಕಳುಹಿಸಿದ್ದೀನಿ.
ಸುಳ್ಳು ಸುಳ್ಳು ಆರೋಪ ಮಾಡ್ತೀರ. ನನ್ನ ಮುಂದೆ ನೇರವಾಗಿ ಹೇಳಿ. ಸುಳ್ಳು ಆರೋಪ ಮಾಡಬೇಡಿ. 15-20 ವರ್ಷ ಇದ್ದವರು. ಆಯ್ತು ಖುಷಿಯಿಂದ ಇದ್ದವರು ಖುಷಿಯಿಂದ ಹೋಗೋಣಾ. ಇವತ್ತು ಪ್ರೆಸ್ ಮೀಟ್ ಗೆ ಬರುವ ಹಾಗೆ ಮಾಡಿದ್ದು ಸುದೀಪ್ ಅವರು. ಎಷ್ಟು ಅಂತ ಬಗ್ಗ ಬೇಕು. ತಾಳ್ಮೆ ಕಳೆದುಕೊಂಡಿದ್ದೀನಿ.
ಅವರು ಏನು ಭರವಸೆ ಕೊಟ್ಟಿದ್ದರು, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಇಲ್ಲವಾದರೆ ಚಿತ್ರರಂಗದ ಅಧ್ಯಕ್ಷರ ಜೊತೆಗೆ ಮಾತನಾಡಿ, ಆಮೇಲೆ ನಿರ್ಧಾರ ಮಾಡುತ್ತೇನೆ. ನಮ್ಗೆ ಸ್ವಿಚ್ಡ್ ಆಫ್ ಆಗಿರುವ ನಂಬರ್ ಕೊಡ್ತಾರೆ. ಮನೆ ಹತ್ರ ಹೋದ್ರೆ ಕೈಗೆ ಸಿಗಲ್ಲ. ಮನುಷ್ಯ ದೇವರಿಗೆ ಹೆದರುತ್ತಾನೆ ಅಲ್ವಾ. ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಹಣ ತೆಗೆದುಕೊಂಡಿಲ್ಲ ಅಂತ ಬೇಸರ ಹೊರ ಹಾಕಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












