Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜಯೇಂದ್ರ ಅಕ್ರಮದ ಬಗ್ಗೆ ಯತ್ನಾಳ್ ವಿಡಿಯೋ ತೋರಿಸಿ ಬಾಂಬ್ ಸಿಡಿಸಿದ ಪ್ರಿಯಾಂಕ್ ಖರ್ಗೆ..!

---Advertisement---

 

ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜೆಪಿ ನಡ್ಡಾ ಅವರು, ಆಟಕ್ಕುಂಟು ಲೆಕ್ಕಕ್ಕೆ ಇರಲಾರದಂತ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮತ್ತು ಬಿವೈ ವಿಜಯೇಂದ್ರ ಅವರು ಇವರ ಮೇಲೆ ಎಫ್ಐಆರ್ ದಾಖಲಿಸಬಹುದು ಎಂದು ಕೋರ್ಟ್ ಹೇಳಿದೆ. ಬಹಳ ಸ್ಪಷ್ಟವಾಗಿ ಸುಪ್ರೀಂ ಕೋರ್ಟ್ ಉಲ್ಲೇಖ ಮಾಡಿದೆ. ಚುನಾವಣಾ ಬಾಂಡ್ ಗಳ ಮೇಲೆ ಯಾರೆಲ್ಲಾ ವಂಚನೆ ಮಾಡಿದ್ದಾರೆ, ಅವರೆಲ್ಲರ ಮೇಲೆ ಕೇಸ್ ದಾಖಲಿಸಬಹುದು ಎಂದು ಸ್ಪಷ್ಟವಾಗಿ ಹೇಳಿದೆ‌.

ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರು ಹೇಳ್ತಾ ಇದಾರೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಅಂತ. ಇವ್ರ ಸ್ಟೇಟ್ಮೆಂಟ್ ಪ್ರಕಾರವೇ ಎಫ್ಐಆರ್ ಆಗಿದೆಯಲ್ವಾ, ಇವ್ರು ರಾಜೀನಾಮೆ ಕೊಡಲಿ ಹಾಗಾದ್ರೆ. ರಾಜ್ಯಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೂ ಹೆಸರಿದೆ, ಬಿಜೆಪಿಯೇ ಖಾಲಿ ಆಗಬೇಕಲ್ವಾ ಹಾಗಾದ್ರೆ.

 

ಮಿಸ್ಟರ್ ವಿಜಯೇಂದ್ರ ಶೆಲ್ ಕಂಪನಿ ಮುಖಾಂತರ ಮನಿ ಲ್ಯಾಂಡ್ರಿಂಗ್ ಮಾಡಿದ್ದಾರೆ ಎಂಬ ಕೇಸ್ ಇಡಿ ನಲ್ಲಿ ಇರುವುದನ್ನು ಮರೆತು ಹೋಗಿಬಿಟ್ರಾ. ‘ಅವನ ಮನೆಗೆ ಹತ್ತಾರು ಸಾವಿರ ಕೋಟಿ ಹಣ ಸಿಕ್ತಲ್ಲ ಅದು ಯಾರದ್ದು. ವಿಜಯೇಂದ್ರದ್ದೆ’ ಎಂಬ ವಿಡಿಯೋ ತೋರಿಸಿದ್ದಾರೆ. ಅದು ಯತ್ನಾಳ್ ಮಾತನಾಡಿರುವ ಬೈಟ್. ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ, ಯಾರು ಜೈಲಿಗೆ ಹೋಗಬೇಕು..? ವಿಜಯೇಂದ್ರ, ಯಡಿಯೂರಪ್ಪ ಅವರ ಬಗ್ಗೆ ಹೇಳಿದ್ದು. ಯಾರು ಹೇಳ್ತಾ ಇರೋದು..? ಬಿಜೆಪಿ ನಾಯಕರೇ ಹೇಳ್ತಾ ಇದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...