ಇಂದಿನಿಂದ ನವದೆಹಲಿಯಲ್ಲಿ 2 ದಿನಗಳ ಕಾಲ ಜಿ20 ಶೃಂಗಸಭೆ ನಡೆಯಲಿದೆ. ದೆಹಲಿಯಲ್ಲೆಲ್ಲಾ ಬಿಗಿ ಭದ್ರತೆ ಮಾಡಲಾಗಿದೆ. ಭಾರತದ ಮಂಟಪಂನಲ್ಲಿ ದೇಶದ ಅನೇಕ ಗಣ್ಯರು ಆಗಮಿಸಿದ್ದಾರೆ. ಪ್ರಧಾನಿ ಮೋದಿ ಅವರು ಎಲ್ಲಾ ದೇಶದ ಪ್ರಧಾನಿ, ಅಧ್ಯಕ್ಷರನ್ನು ಸ್ವಾಗತ ಮಾಡುತ್ತಿದ್ದಾರೆ.
ಅಮೆರಿಕಾ, ಬ್ರಿಟನ್, ಜಪಾನ್, ಇಟಲಿ, ಫ್ರಾನ್ಸ, ಆಫ್ರಿಕಾ, ಕೆನಡಾ, ಅರ್ಜೆಂಟೈನಾ, ಬ್ರೆಜಿಲ್, ಆಸ್ಟ್ರೇಲಿಯಾ, ದ. ಕೊರಿಯಾ, ಮೆಕ್ಸಿಕೋ, ಟರ್ಕಿ, ಮಾರಿಷಸ್, ಬಾಂಗ್ಲಾ ಸೇರಿದಂತೆ ಹಲವು ದೇಶಗಳ ಪ್ರಧಾನಿಗಳು ಭಾಗಿಯಾಗಿದ್ದಾರೆ. ನಾಯಕರೊಂದಿಗೆ ಪ್ರಧಾನಿ ಮೋದಿ ಫೋಟೋಶೂಟ್ ಕೂಡ ನಡೆಸಿದ್ದಾರೆ.
ಈ ಶೃಂಗಸಭೆಯಲ್ಲಿ ವಸುದೈವ ಕುಟುಂಬಕಂ ಸಾರಲು ಹೊರಟಿದ್ದಾರೆ. ಜೊತೆಗೆ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಲಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸಭೆ ಆರಂಭವಾಗಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












