ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ತಟ್ಟಲಿದ್ದು, ಏಪ್ರಿಲ್ 1, 2026ರಿಂದ ಸುಮಾರು 1,000ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯಲ್ಲಿ ಏರಿಕೆ ಆಗಲಿದೆ.ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿ (NLEM) ಒಳಗೊಂಡಿರುವ ಔಷಧಿಗಳ ಬೆಲೆ ಹೆಚ್ಚಳಕ್ಕೆ ರಾಷ್ಟ್ರೀಯ ಔಷಧೀಯ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಅನುಮತಿ ನೀಡಿದೆ. ಸಗಟು ಬೆಲೆ ಸೂಚ್ಯಂಕದ (WPI) ಏರಿಕೆಯನ್ನು ಆಧರಿಸಿ ಪ್ರತಿ ವರ್ಷ ಈ ಪರಿಷ್ಕರಣೆ ಮಾಡಲಾಗುತ್ತದೆ. 2025ರಲ್ಲಿ WPI ಶೇ. 0.64956ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಈ ಬಾರಿ ಔಷಧಿಗಳ ಬೆಲೆಯಲ್ಲಿ ಸುಮಾರು ಶೇ. 0.6ರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬೆಲೆ ಏರಿಕೆಯಿಂದ ದಿನನಿತ್ಯ ಬಳಕೆಯಾಗುವ ಪ್ಯಾರಸಿಟಮಾಲ್ ಸೇರಿದಂತೆ ನೋವು ನಿವಾರಕಗಳು, ಅಜಿಥ್ರೊಮೈಸಿನ್ ಮತ್ತು ಸಿಪ್ರೊಫ್ಲೋಕ್ಸಾಸಿನ್ ಮುಂತಾದ ಆಂಟಿಬಯೋಟಿಕ್ಸ್, ರಕ್ತಹೀನತೆ, ವಿಟಮಿನ್ ಮತ್ತು ಮಿನರಲ್ ಮಾತ್ರೆಗಳು ಸೇರಿದಂತೆ ಹಲವು ಔಷಧಿಗಳು ದುಬಾರಿಯಾಗಲಿವೆ. ಕೋವಿಡ್-19 ಚಿಕಿತ್ಸೆಗೆ ಬಳಸುವ ಕೆಲವು ಔಷಧಿಗಳು ಮತ್ತು ಸ್ಟೀರಾಯ್ಡ್ಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.ಇತ್ತ ಔಷಧ ತಯಾರಿಕಾ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದೆ ಎಂದು ವಾದಿಸುತ್ತಿವೆ. ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆ API ಮತ್ತು ಸಾಲ್ವೆಂಟ್ಗಳ ಬೆಲೆ ಶೇ. 30-35ರಷ್ಟು ಏರಿಕೆಯಾಗಿದ್ದು, ಗ್ಲಿಸರಿನ್ ಬೆಲೆ ಶೇ. 64ರಷ್ಟು ಹೆಚ್ಚಾಗಿದೆ. ಪ್ಯಾಕೇಜಿಂಗ್ ವಸ್ತುಗಳಾದ ಅಲ್ಯೂಮಿನಿಯಂ ಫಾಯಿಲ್ ಮತ್ತು ಪಿವಿಸಿ ಬೆಲೆಯೂ ಶೇ. 40ರಷ್ಟು ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.
ಮೇಲ್ನೋಟಕ್ಕೆ ಈ ಏರಿಕೆ ಅಲ್ಪ ಪ್ರಮಾಣದಲ್ಲಿದ್ದರೂ, ಸಾವಿರಾರು ಔಷಧಿಗಳ ಬೆಲೆ ಒಟ್ಟಾರೆಯಾಗಿ ಹೆಚ್ಚುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಮಾಸಿಕ ವೈದ್ಯಕೀಯ ವೆಚ್ಚ ಹೆಚ್ಚುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ ತಜ್ಞರು, ಗ್ರಾಹಕರು ಬ್ರಾಂಡೆಡ್ ಔಷಧಿಗಳ ಬದಲಿಗೆ ಕಡಿಮೆ ದರದಲ್ಲಿ ಲಭ್ಯವಿರುವ ಜೆನೆರಿಕ್ ಔಷಧಿಗಳನ್ನು ಬಳಸುವ ಮೂಲಕ ಖರ್ಚನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










