Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡ್ರೈವರ್ ಆಗಿದ್ದ ಕಿರಣ್ ಕಡೆಯಿಂದಾನೇ ನಡೆದಿತ್ತು ಪ್ರತಿಮಾ ಕೊಲೆ..!

Facebook
Twitter
Telegram
WhatsApp

ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಸಂಬಂಧ ಡ್ರೈವರ್ ಅನ್ನು ಬಂಧಿಸಲಾಗಿದೆ. ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮಹಿಳಾ ಅಧಿಕಾರಿಯನ್ನು ಈತನೆ ಕೊಲೆ‌ ಮಾಡಿರುವ ಮಾಹಿತಿ ಹೊರ ಬಿದ್ದಿದೆ. ಸುಬ್ರಮಣ್ಯ ನಗರ ಪೊಲೀಸರು ಈಗಾಗಲೇ ಮೂವರನ್ನು ವಶಕ್ಕೆ ಪಡೆದು ವಿಚಾತಣೆ ನಡೆಸಿದ್ದರು. ಅದರಲ್ಲಿ ಕಿರಣ್ ಎಂಬಾತನ ವಿಚಾರಣೆ ನಡೆಸಿದಾಗ, ಈತನೆ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ‌ ಸಿಕ್ಕಿದೆ ಎನ್ನಲಾಗುತ್ತಿದೆ.

 

ಈ ಕಿರಣ್, ಅಧಿಕಾರಿ ಪ್ರತಿಮಾ ಕಾರಿನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಒಂದು ವಾರ್ ಹಿಂದೆ ಕಿರಣ್ ನನ್ನು ಕೆಲಸದಿಂದ ವಜಾ ಮಾಡಲಾಗಿತ್ತಂತೆ. ಕೆಲ ವಿಚಾರಗಳಿಗೆ ಮೂಡಿದ್ದ ಭಿನ್ನಾಭಿಪ್ರಾಯದಿಂದ ಪ್ರತಿಮಾ ಅವರು ಕೆಲಸದಿಂದ ವಜಾಗೊಳಿಸಿದ್ದರಂತೆ. ಇದೆ ಕೋಪದಿಂದ ಕಿರಣ್, ಒಬ್ಬನೇ ಪ್ರತಿಮಾ ಅವರ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.

ಪ್ರತಿಮಾ ಅವರ ಕೊಲೆಗೆ ಕೆಲಸದಿಂದ ವಜಾ‌ ಮಾಡಿದ್ದೇ ಕಾರಣವಾಯ್ತಾ ಎಂಬುದು ಮೇಲ್ನೋಟಕ್ಕೆ ತನಿಖೆಯಲ್ಲಿ ಅನುಮಾನ ಮೂಡಿಸಿದೆ. ಪ್ರತಿಮಾ ಅವರ ಮನೆಗೆ ಹೋಗಿ ಕೊಲೆ‌ ಮಾಡಿರುವುದಾಗಿ ಮಾಹಿತಿ ಹೊರ ಬಿದ್ದಿದೆ. ಪೊಲೀಸರು ಕಿರಣ್ ಬಳಿ ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೊಂದು ಕಡೆ ಪ್ರತಿಮಾ ಭೂ ಮಾಫಿಯಾಗೆ ಬಲಿಯಾದ್ರಾ ಎಂಬ ಸುದ್ದಿಯೂ ಹರಿದಾಡುತ್ತಿದೆ. ಖಡಕ್​ ಅಧಿಕಾರಿಯಾಗಿದ್ದ ಪ್ರತಿಮಾ ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಎಂಬ ಗ್ರಾಮದಲ್ಲಿ ಭೂ ಸರ್ವೆ ಮಾಡಿದ್ದರು. 4 ಎಕರೆ 5 ಗುಂಟೆ ಜಮೀನಿನಲ್ಲಿ ಅಕ್ರಮ ಗಣಿಗಾರಿಗೆ ಮಾಡಿ 25 ಲಕ್ಷ ನಷ್ಟ ಉಂಟಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪ್ರತಿಮಾ ವರದಿಯನ್ನು ಸಹ‌‌ ಮಾಡಿದ್ದರು. ಈ ಸಂಬಂಧ ಶಾಸಕರೊಬ್ಬರ ಹೆಸರು ಸೇರಿದಂತೆ ಹಲವರ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು ಎನ್ನಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಕೇಸ್ : ತುರ್ತು ಸುದ್ದಿಗೋಷ್ಠಿ ನಡೆಸಿ 15 ಪ್ರಶ್ನೆ ಕೇಳಿದ ಕುಮಾರಸ್ವಾಮಿ

  ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ,

ತಂದೆ-ತಾಯಿಯ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ : ಕುಮಾರಸ್ವಾಮಿ ಆಕ್ರೋಶ

  ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ನವರೇ ದೇವೇಗೌಡರಿಂದ ನೀವೂ ಬೆಳೆದಿದ್ದೀರಿ. ಅವರು ಏನಂತಾ ನನಗಿಂತ

ಸಂಸತ್ ಪ್ರವೇಶಿಸಿ, ಮೋದಿ ಪರ ಕೈ ಎತ್ತುತ್ತೇನೆ : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಇಂದು ಲೋಕಸಭೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಬಾರಿ ಹೆಚ್ಚು ಸದ್ದು ಮಾಡಿದ್ದು ಮಾತ್ರ ಶಿವಮೊಗ್ಗ ಕ್ಷೇತ್ರ. ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಎಷ್ಟೋ ವರ್ಷಗಳಿಂದ ಬಿಜೆಪಿಯಲ್ಲಿದ್ದ ಈಶ್ವರಪ್ಪ,

error: Content is protected !!