Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಪ್ರಜ್ವಲ್ ರೇವಣ್ಣ ಮಾತಿನಿಂದ ಕಾಂಗ್ರೆಸ್ ಹೋಗುವ ಯೋಚನೆ ಬಿಡ್ತಾರಾ ಶಿವಲಿಂಗೇಗೌಡ..?

---Advertisement---

 

 

ಹಾಸನ: ಜೆಡಿಎಸ್ ಶಿವಲಿಂಗೇಗೌಡ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ಪ್ಲ್ಯಾನ್ ನಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲೂ ಇದ್ದಾರೆ ಎನ್ನಲಾಗಿದೆ. ಇದೀಗ ಪ್ರಜ್ವಲ್ ರೇವಣ್ಣ ಮತ್ತೆ ಪರೋಕ್ಷವಾಗಿ ಶಿವಲಿಂಗೇಗೌಡ ಅವರಿಗೆ ಆಫರ್ ನೀಡಿದ್ದಾರೆ. ಜೆಡಿಎಸ್ ನಲ್ಲಿಯೇ ಉಳಿದುಕೊಂಡರೆ ನಮಗೆ ಸಂತೋಷ ಎಂದಿದ್ದಾರೆ.

ಹಾಸನದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ನಾವೂ ಅರಸೀಕೆರೆಗೆ ಇನ್ನು ಯಾವ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹಾಲಿ ಶಾಸಕ ಶಿವಲಿಂಗೇಗೌಡ ನಾನಿನ್ನು ಜೆಡಿಎಸ್ ನಲ್ಲಿಯೇ ಇದ್ದೀನಿ ಅಂತ ಸದನದಲ್ಲಿ ಹೇಳಿದ್ದಾರೆ. ಹಾಸನ ಜಿಲ್ಲೆಯ ಎಲ್ಲಾ ಟಿಕೆಟ್ ಗಳನ್ನು ನಮ್ಮ ಕುಮಾರಣ್ಣನೇ ಅನೌನ್ಸ್ ಮಾಡುತ್ತಾರೆ. ನಾವೂ ಯಾರನ್ನು ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ.

ಮುಂದಿನ ತಿಂಗಳು ಪಂಚರತ್ನ ರಥಯಾತ್ರೆ ಹಾಸನದಲ್ಲಿ ನಡೆಯಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಅರಸೀಕೆರೆ ಕ್ಷೇತ್ರದವರು ಶಾಸಕರಾಗುವ ತನಕ ಪ್ರಜ್ವಲ್ ರೇವಣ್ಣ ನಿದ್ದೆ ಮಾಡಲ್ಲ. ಯಾವತ್ತಿಗೂ ಶಿವಲಿಂಗಣ್ಣನನ್ನು ಆಚೆ ಹೋಗು ಅಂತ ಹೇಳಿಲ್ಲ. ಯಾರೇ ಅಭ್ಯರ್ಥಿ ಆಗಲಿ ಅವರ ಪರ ನಾವೂ ಕೆಲಸ ಮಾಡಬೇಕು. ಶಿವಲಿಂಗಣ್ಣ ಸದನದಲ್ಲಿ ಹೇಳಿದ್ದನ್ನೇ ಹೊರಗೆ ಬಂದು ಹೇಳಲಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...