Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ : ಪ್ರೀತಂ ಗೌಡ, ಶ್ರೇಯಸ್ ಗೆ ಯಾಕಿಲ್ಲ ನೋಟೀಸ್..?

---Advertisement---

ಹಾಸನ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಇದು ಸುಮಾರು 13,712 ಪುಟಗಳಷ್ಟಿದೆ. ಇದರಲ್ಲಿ ಒಟ್ಟು 39 ಜನರ ವಿರುದ್ಧ ಆರೋಪ ಸಾಬೀತುಪಡಿಸಿ ಉಲ್ಲೇಖ ಮಾಡಲಾಗಿದೆ.

ಈ ಬೆನ್ನಲ್ಲೇ ವಕೀಲ ದೇವರಾಜೇಗೌಡ ಕಾಂಗ್ರೆಸ್ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿರುವ ದೇವರಾಜೇಗೌಡ, ಇದರಲ್ಲಿ ಪ್ರಮುಖವಾಗಿ ಯಾರು ಆರೋಪಿ ಇದ್ದಾನೆ ಅವನೆ ಕೋರ್ಟ್ ನಲ್ಲಿ ಹೋಗಿ ಸಾಕ್ಷಿಯನ್ನ ಕೊಟ್ಟಿದ್ದಾನೆ. ಪೆನ್ ಡ್ರೈವ್ ಕಿಂಗ್ ಯಾರಿದ್ದಾನೆ, ಪ್ರಜ್ವಲ್ ರೇವಣ್ಣ ಕಾರು ಡ್ರೈವರ್ ಕಾರ್ತಿಕ್ ಅಂತ. ಆತನೇ ಹೋಗಿ ಪೆನ್ ಡ್ರೈವ್ ಗಳನ್ನ ತನ್ನ ಸ್ನೇಹಿತರಿಂದ ತೆಗೆದುಕೊಂಡಿರೋ ಉದಾಹರಣೆಗಳು ಅಲ್ಲಿ ಇದೆ.

ಆದರೆ ಪೆನ್ ಡ್ರೈವ್ ಆರೋಪಿಗಳ ಪಟ್ಟಿಯಲ್ಲಿ ಇದ್ದಂತ ಪ್ರಮುಖ ಹಾಸನ ಜಿಲ್ಲೆಯಲ್ಲಿ ಓಡಾಡುತ್ತಾ ಇದ್ದದ್ದು ಪ್ರೀತಂ ಗೌಡ. ಅವನ ಹೆಸರು ಎಲ್ಲಿ ಹೋಯ್ತು. ಪೆ‌ನ್ ಡ್ರೈವ್ ರೆಡಿಯಾಗಿದ್ದು, ಸಿದ್ಧ ಮಾಡಿ ಬಿಡ್ತಾ ಇದ್ದಾರೆ ಅಂತ ಜಗಜ್ಜಾಹೀರಾಗಿದ್ದು, ಹೊಟೇಲ್ ಅಶೋಕದಲ್ಲಿ. ಅಂದು ತನಿಖೆ ಮಾಡುವ ಸಂದರ್ಭದಲ್ಲಿ ಯಾರ್ಯಾರು ಇದ್ರು. ಹೊಟೇಲ್ ಅಶೋಕ ಯಾಕೆ ಮಹಜರು ಮಾಡಿಲ್ಲ. ಇವರ ಲೋಪದೋಷಗಳು ಏನಿದೆ ಅನ್ನೋದು ಇನ್ನು ಗೊತ್ತಿಲ್ಲ. ಹಾಸನದ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ ಅವರನ್ನ ಕಸ್ಟಡಿಗೆ ತೆಗೆದುಕೊಳ್ಳಬೇಕಿತ್ತು. ಯಾಕೆ ತಗೊಂಡಿಲ್ಲ, ಅವರಿಗ್ಯಾಕೆ ನೋಟೀಸ್ ಕೊಟ್ಟಿಲ್ಲ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now