ಬೆಂಗಳೂರು: ಪೆನ್ ಡ್ರೈವ್ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ಕೇಸ್ ಸಂಬಂಧ ಚಾರ್ಜ್ಶೀಟ್ ಅನ್ನು ಎಸ್ಐಟಿ ಅಧಿಕಾರಿಗಳು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ಆದರೆ ಇದರಲ್ಲಿ ಶಾಕಿಂಗ್ ಅಂಶ ಬೆಳಕಿಗೆ ಬಂದಿದೆ. ಅದುವೆ ಈ ಪೆನ್ ಡ್ರೈವ್ ಪ್ರಕರಣದ ಹಿಂದೆ ಜೆಡಿಎಸ್ ನಾಯಕರು ಕೂಡ ಇದ್ದಾರೆ ಅನ್ನೋದು. ಅದರಲ್ಲೂ ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರಿಗೆ ಆಪ್ತರಾಗಿದ್ದವರೇ ಇದ್ದಾರೆ ಎನ್ನುತ್ತಿದೆ ಚಾರ್ಜ್ಶೀಟ್. ಹಾಗಾದ್ರೆ ಯಾರೆಲ್ಲಾ ಇದಾರೆ ಅನ್ನೋದನ್ನ ನೋಡೋದಾದ್ರೆ.
ಎ 30 ಆಗಿ ಸ್ವರೂಪ್ ಅವರ ಚಿಕ್ಕಪ್ಪನ ಮಗ ರೇವಂತ್, ಎ33 ಮಂಜು ಅಲಿಯಾಸ್ ವಸಂತ್ ಕುಮಾರ್, ಎ35 ಬಾಲಸುಬ್ರಹ್ಮಣ್ಯಂ, ಎ36 ಚಿಂತನ್, ಭವಾನಿ ರೇವಣ್ಣ ಅವರ ಆಪ್ತ ಹರೀಶ್, ಜಯಸೂರ್ಯ, ತೇಜಸ್ ಸೇರಿದಂತೆ ಆಪ್ತರ ಬಳಗದ ಏಳು ಜನರ ಹೆಸರನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಚಾರ್ಜ್ಶೀಟ್ ನೋಡಿದ ಮೇಲಂತು ಜೆಡಿಎಸ್ ನಲ್ಲು ಸಾಕಷ್ಟು ಚರ್ಚೆ ನಡೀತಾ ಇದೆ. ಪ್ರಜ್ವಕ್ ರೇವಣ್ಣ ಅವರನ್ನು ಮುಗಿಸಲು ಅವರದ್ದೇ ಪಕ್ಷದಲ್ಲಿ ಪ್ಲ್ಯಾನಿಂಗ್ ನಡೆದಿದೆಯಾ ಎಂಬ ಅನುಮಾನ ಶುರುವಾಗಿದೆ. 70 ಪೆನ್ ಡ್ರೈವ್ ಗಳನ್ನು ಖರೀದಿ ಮಾಡಿ, ವಿಡಿಯೋಗಳನ್ನ ಲೀಕ್ ಮಾಡಿರುವ ಅನುಮಾನ ಹುಟ್ಟಿಕೊಂಡಿದೆ. ಬರೋಬ್ಬರಿ 13 ಸಾವಿರಕ್ಕೂ ಅಧಿಕ ಪುಟಗಳಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿ 39 ಮಂದಿಯ ವಿರುದ್ಧ ಆರೋಪ ದೃಢಪಡಿಸಿ ಸಾಕ್ಷಿ ಒದಗಿಸಲಾಗಿದೆ. ಸದ್ಯ ಪ್ರಜ್ವಲ್ ರೇವಣ್ಣ ಜಾಮೀನಿಗೆ ಅರ್ಜಿ ಹಾಕಿ, ಸೋತಿದ್ದಾರೆ. ಜಾಮೀನು ಸಿಗದೆ ಜೈಲಲ್ಲೇ ಇರುವಂತೆ ಆಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








